ರಾಣೆಬೆನ್ನೂರ

ಶಿಕ್ಷಣ ಪರಿಪೂರ್ಣತೆಗೆ ವಿಧ್ಯಾರ್ಥಿಗಳು ಪರಿಶ್ರಮ ಪಡಬೇಕು: ಮಲ್ಲಿಕಾರ್ಜುನ

ಶಿಕ್ಷಣ ಪರಿಪೂರ್ಣತೆಗೆ ವಿಧ್ಯಾರ್ಥಿಗಳು ಪರಿಶ್ರಮ ಪಡಬೇಕು: ಮಲ್ಲಿಕಾರ್ಜುನ

ಲೋಕದರ್ಶನ ವರದಿ 

ರಾಣೇಬೆನ್ನೂರು 07: ವಿದ್ಯಾರ್ಥಿಗಳು ನಿತ್ಯದ ಬದುಕಿನಲ್ಲಿ ಅತ್ಯಂತ ಪರಿಶ್ರಮದಿಂದ ಅಧ್ಯಯನ ಮಾಡಿದಾಗ ಮಾತ್ರ ಸಮಾಜದಲ್ಲಿ ಸ್ಥಾನ ಮಾನದ ಜೊತೆಗೆ ಗೌರವ ಸನ್ಮಾನಕ್ಕೆ ಪಾತ್ರರಾಗಲು ಸಾಧ್ಯವಾಗುತ್ತದೆ ಎಂದು ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಮಲ್ಲಿಕಾರ್ಜುನ ಅರಳಿ ಹೇಳಿದರು. 

     ಅವರು ತಾಲೂಕಿನ ಸುಣಕಲ್ಲಬಿದರಿ ಗ್ರಾಮದ ಸದ್ಗುರು ಶಿವಾನಂದ ಸಂಯುಕ್ತ ಪ ಪೂ ಕಾಲೇಜಿನ ರಾಷ್ಟ್ರೀಯ ಸೇವಾ ಯೊಜನಾ ಘಟಕ, ರಂಗಚೇತನ ಸಂಸ್ಥೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಡಾ.ಅಂಬೇಡ್ಕರ್ ಓದು ಬರಹ ಪ್ರಬಂಧ ಸ್ಪರ್ಧೆ ಹಾಗೂ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ನಾಲ್ಕು ಗೋಡೆಗಳ ಮದ್ಯ ನಡೆಯುವ ಪಾಠ ಪ್ರವಚನಗಳಿಗೆ ಮಾತ್ರ ಸೀಮಿತರಾಗದೇ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿ ವೈಚಾರಿಕ ಚಿಂತನೆಯೊಂದಿಗೆ  ಸಮಾಜವನ್ನು ಕಟ್ಟುವ ಕಾಯಕದಲ್ಲಿ ಮುಂದಾಗಬೇಕು ಎಂದು ಅರಳಿ ಅವರು ಕರೆ ನೀಡಿದರು.  

     ಮುಖ್ಯ ಅತಿಥಿಯಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಶಶಿಕಲಾ.ವಿ.ಹುಡೆದ ಅವರು ಮಾತನಾಡಿ ವಿದ್ಯಾರ್ಥಿಗಳು ಕಾಲೇಜಿನ ಅಂತದಲ್ಲಿ ಸಂವಿಧಾನ ಮತ್ತು ಅಂಬೇಡ್ಕರ್ ಕುರಿತು ತಿಳಿದುಕೊಳ್ಳಬೇಕು.  ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಇಂತಹ ಸ್ಪರ್ಧೆಗಳು ಬಹಳ ಮುಖ್ಯವಾಗಿದ್ದು ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ಒಂದೊಂದು ಪ್ರತಿಭೆಗಳು ಇದ್ದೇ ಇರುತ್ತವೆ ಅದನ್ನು ಸರಿಯಾಗಿ ಅರ್ಥಮಾಡಿಕೊಂಡರೆ ಜೀವನದಲ್ಲಿ ಮುಂದೆ ಬರಬಹುದು ಎಂದ ಅವರು  ಯುವ ಶಕ್ತಿ ದೇಶದ ಶಕ್ತಿಯಾಗಿರುವುದರಿಂದ ಯುವಕರು ಅನೇಕ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ರಾಷ್ಟ್ರದ ಅಭಿವೃದ್ಧಿಗೆ ಶ್ರಮಿಸಲು ಮುಂದಾಗಬೇಕೆಂದು ಕರೆ ನೀಡಿದರು.  

      ಉಪನ್ಯಾಸಕ ಎಂ.ಶಿವಕುಮಾರ ಅವರು  ಅಂಬೇಡ್ಕರ್ ಕುರಿತು ವಿಶೇಷ ಉಪನ್ಯಾಸ ನೀಡಿದರು.  ಇದೆ ಸಂಧರ್ಭದಲ್ಲಿ ಅಂಬೇಡ್ಕರ್ ಓದು ಎಂಬ ಪ್ರಬಂಧ ಸ್ಪರ್ದೆಯಲ್ಲಿ ಭಾಗವಹಿಸಿದ ಪವಿತ್ರಾ.ಬಿ.ಹೊಳಲು (ಪ್ರಥಮ)  ರಂಜಿತಾ.ಸಿ.ಬಿದರಿ (ದ್ವಿತೀಯ) ಮಹಾಲಕ್ಷ್ಮಿ.ಕೆ.ದೇವಗಿರಿಮಠ (ತೃತೀಯ) ಸ್ಥಾನ ಗಳಿಸಿದ ಅವರಿಗೆ ಪ್ರಶಸ್ತಿಪತ್ರ ಹಾಗೂ ಬಹುಮಾನಗಳನ್ನು ನೀಡಿ ಗೌರವಿಸಲಾಯಿತು. 

           ಕಾಲೇಜಿನ ಆಡಳಿತ ಮಂಡಳಿ  ಉಪಾಧ್ಯಕ್ಷ .ಆರ್‌.ಬಿ.ತೋಟಿಗೇರ ಅಧ್ಯಕ್ಷತೆ ವಹಿಸಿದ್ದರು.  ವೇದಿಕೆಯಲ್ಲಿ ಉಪನ್ಯಾಸಕರಾದ ಹೆಚ್‌.ಶಿವಾನಂದ, ವಿನಾಯಕ ಬೆನಕನಕೊಂಡ, ಶಶಿಕುಮಾರ ಕುರುಬರ, ಅಶೋಕ.ಪ್ರವೀಣ್‌ಕುಮಾರ. ಆರ್‌.ಪರಮೇಶಪ್ಪ ಕುಡುಪಲಿ. ಜಗದೀಶ.ಕೆ ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ರಂಗಚೇತನ ಅಧ್ಯಕ್ಷ ಗಣೇಶ ಗುಡಿಗುಡಿ ಸ್ವಾಗತಿಸಿ ನಿರೂಪಿಸಿ ವಂದಿಸಿದರು. 


ಸುದ್ದಿ ಓದಿ