ದುವರ್ಾಸನೆಗೆ ತತ್ತರಿಸುತ್ತಿರುವ ವಿದ್ಯಾಥರ್ಿಗಳು, ಸ್ಪಂದಿಸದ ಪಾಲಿಕೆ ಅಧಿಕಾರಿಗಳು

ದುವರ್ಾಸನೆಗೆ ತತ್ತರಿಸುತ್ತಿರುವ ವಿದ್ಯಾಥರ್ಿಗಳು, ಸ್ಪಂದಿಸದ ಪಾಲಿಕೆ ಅಧಿಕಾರಿಗಳು

ಬಳ್ಳಾರಿ 06: ನಗರದ ಗುಗ್ಗರಹಟ್ಟಿ ಹತ್ತಿರ ಇರುವ ಸೇತುವೆ ಮತ್ತು ಅಕ್ಕಾ ಪಕ್ಕದಲಿರಿರುವ ಪ್ರದೇಶದಲ್ಲಿ ಗುಗ್ಗರಹಟ್ಟಿ, ಕಾಕರ್ಲತೋಟ, ಮುಂಡ್ರಿಗಿ, ಕೌಲ್ಬಜಾರ್ ಮತ್ತಿತರ ಪ್ರದೇಶಗಳಲ್ಲಿ ಕೋಳಿಮಾಂಸದ ವ್ಯಾಪಾರ ಮಾಡುವ ಸ್ವಲ್ಪ ಜನ ಮಂಕು ಜನರು ಕೋಳಿ ಮಾಂಸದಲ್ಲಿ ಬರುವ ವ್ಯರ್ಥಗಳನ್ನು ಇಲ್ಲಿ ತಂದು ಬಿಸಾಡುತಿದ್ದಾರೆ. ಅದೇ ವಾಡರ್ಿನ ಪಾಲಿಕೆ ಸದಸ್ಯ ಶಾಷಾಬ್ ಅವರನ್ನು ಏನುಸ್ವಾಮಿ ಈ ವಿಪಯರ್ಾಸವೆಂದು ನಮ್ಮ ಪ್ರತಿನಿಧಿ ಕೇಳಿದಾಗ ಸರ್ ನಾನು ಕೂಡ ಬಹಳಷ್ಟು ಸಾರಿ ಜನರಿಗೆ ಹೇಳಿದ್ದೇನೆ ಆದರು ಈ ಜನ ಕೇಳ್ತಾಇಲ್ಲವೆಂದು, 5ನೇ ವಾಡರ್ು ಬಹಳ ದೊಡ್ಡದಾಗಿದ್ದರಿಂದ ನಾನು ಒಬ್ಬನೇ ಎಲ್ಲಾ ಕೆಲಸ ಕಾರ್ಯಗಳನ್ನು ನೋಡಿಕೊಳ್ಳಲು ಸ್ವಲ್ಪ ತೊಂದರೆ ಉಂಟಾಗುತ್ತದೆ, ಆದರೂ ಸಹ ನಾನು ನನ್ನ ಕೆಲಸವನ್ನು ಪ್ರಾಮಾಣಿಕವಾಗಿ ನಿಭಾಯಿಸುತಿದ್ದೇನೆ, ಪಾಲಿಕೆಯ ಅಧಿಕಾರಿಗಳು ಮತ್ತು ಕಾಮರ್ಿಕರು ಸರಿಯಾಗಿ ಸ್ಪಂದಿಸುತ್ತಿಲ್ಲವೆಂದು ಗುನುಗಾಡಿದರು.ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಪಾಲಿಕೆ ಆಯುಕ್ತರನ್ನು ಸ್ಥಳಕ್ಕೆ ಬೇಟಿಕೊಡಿಸಿ ಈ ಸಮಸ್ಯೆಯನ್ನು ಪರಿಷ್ಕರಿಸುತ್ತೇವೆ ಎಂದಿದ್ದಾರೆ. ಈ ವಿಷಯದ ಬಗ್ಗೆ ಪಕ್ಕದಲ್ಲೇ ಇರುವ ಆದರ್ಶ ವಿದ್ಯಾಲಯದ ಮುಖ್ಯೋಪಾದ್ಯಾಯರಾದ ಆಂಜನೇಯುಲು ಅವರನ್ನು ಸಂಪಕರ್ಿಸಿದಾಗ ಈ ವಿಷಯದ ಬಗ್ಗೆ ನಾವು ಬಹಳಷ್ಟುಬಾರಿ ಪಾಲಿಕೆಗೆ ಅಜರ್ಿಕೊಟ್ಟರೂ ಸಹ ಏನು ಫಲಿತವಾಗಲಿಲ್ಲ ಎಂದರು.  ಮತ್ತು ಉದರ್ೂ ಶಾಲೆಯ ಶಿಕ್ಕಕರು ದೂರು ನೀಡಿದರೂ ಪ್ರಯೋಜನವಾಗಲಿಲ್ಲ ಎಂದು ದೂರಿದ್ದಾರೆ. ಇತ್ತೀಚೆಗೆ ನಮ್ಮ ಶಾಲೆಯ ಪಕ್ಕದಲ್ಲೇ ಕೋಳಿ ಮಾಂಸದ ವ್ಯರ್ಥವನ್ನು ಹಾಕಿದ್ದಾರೆ, ಆ ಧುನರ್ಾತಕ್ಕೆ ಶಿಕ್ಷಕರು ಮತ್ತು ವಿದ್ಯಾಥರ್ಿಗಳು ತತ್ತರಿಸಿ ಹೋಗಿದ್ದಾರೆ ಎಂದರು. ಕೊನೆಗೆ ನಮ್ಮ ಪ್ರತಿನಿಧಿ ಈ ಗಂಭೀರ ವಿಷಯವನ್ನು  ಈಗ ಹೊಸದಾಗಿ ಬಂದಿರುವ ಖಡಕ್ ಅಧಿಕಾರಿ ಎಂದು ಹೆಸರು ಗಳಿಸಿರುವ ಮಹಾನಗರ ಪಾಲಿಕೆ ಆಯುಕ್ತರಾದ ಮುನೀರ್ ಸಾಹೆಬ್ರ ದೃಷ್ಟಿಗೆ ಕೂಡ ತರಲಾಗಿದೆ. ಅವರು ಇದಕ್ಕೆ ತಕ್ಷಣ ಸ್ಪಂದಿಸಿ ಸರ್ ಯಾರೇ ಆಗಿರಲಿ ಅಲ್ಲಿ ಕಸ ಮತ್ತು ಇತರ ವ್ಯರ್ಥಗಳನ್ನು ಅಲ್ಲಿ ಹಾಕಿದ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಿ ಅಂತವರನ್ನ ಶಿಕ್ಷಗೆ ಒಳಪಡಿಸಲು ನಾನು ಸದಾ ತಯಾರಿದ್ದೇನೆ ಎಂದು ಹೇಳಿದ್ದಾರೆ. ಮತ್ತೊಂದು ವಿಪಯರ್ಾಸವೆಂದರೆ ನಮ್ಮ ಮಹಾನಗರ ಪಾಲಿಕೆಯ ಕಾಮರ್ಿಕರೇ ನಗರದಲ್ಲಿ ಸಂಗ್ರಹಿಸಿದ ಕಸವನ್ನು ಇಲ್ಲಿ ತಂದುಹಾಕುತಿದ್ದಾರೆ ಎಂದು, ಈ ರಸ್ತೆಯಲ್ಲಿ ಸಂಚರಿಸಬೇಕೆಂದರೇ ಮೂಗು ಮುಚ್ಚಿಕೊಂಡೇ ತಿರಿಗಾಡುವ ಪರಿಸ್ಥಿತಿ ಎದುರಾಗಿದೆ ಎಂದು ಅಲ್ಲಿನ ಜನರು ಆಕ್ರೋಶವನ್ನು ವ್ಯಕ್ತ ಪಡಿಸುತಿದ್ದಾರೆ. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸ್ಪಂದಿಸಿ ಅಲ್ಲಿ ಯಾರು ಕಸ ಮತ್ತು ಇತರೆ ವ್ಯರ್ಥಗಳನ್ನು ಹಾಕದಂತೆ ನೋಡಿಕೊಳ್ಳಬೇಕೆಂದು  ಶಾಲಾಮಕ್ಕಳು  ಮತ್ತು ಅಲ್ಲಿನ ಜನರು ಮನವಿಯನ್ನು ಮಾಡಿದ್ದಾರೆ. ಇದರಿಂದ ನಮ್ಮ ಆರೋಗ್ಯದ ಮೇಲೆ ತೀವ್ರ ಅಡ್ಡ ಪರಿಣಾಮ ಬೀರುತ್ತಿದೆ ಎಂದು ಆಗ್ರಹವನ್ನು ವ್ಯಕ್ತ ಪಡಿಸಿದ್ದಾರೆ.  ಪಾಲಿಕೆ ಆಯುಕ್ತರಾದ ಮುನೀರ್ ಸಾಹೆಬರ ಗಮನಕ್ಕೆ ತಂದನಂತರ ಅವರು ಏನು ಮಾಡಲಿದ್ದಾರೋ ನಾವು ಕಾದು ನೋಡಬೇಕಿದೆ. 

ಸುದ್ದಿ ಓದಿ