ರಾಣೆಬೆನ್ನೂರ

ಮೇಲ್ಸೆತುವೆ ನಿರ್ಮಾಣಕ್ಕೆ ಹೋರಾಟ ಸಮಿತಿ ಆಗ್ರಹ

ಮೇಲ್ಸೆತುವೆ ನಿರ್ಮಾಣಕ್ಕೆ ಹೋರಾಟ ಸಮಿತಿ ಆಗ್ರಹ

ಲೋಕದರ್ಶನ ವರದಿ 

ರಾಣೇಬೆನ್ನೂರು 16: ಬಾಗಲಕೋಟಿ ಬಿಳಿಗಿರಿ ರಂಗನಬೆಟ್ಟ ರಾಷ್ಟ್ರೀಯ ಹೆದ್ದಾರಿ ಇದಾಗಿದ್ದು ಇಲ್ಲಿಂದ ನಿತ್ಯವು ಸಾವಿರಾರು ವಾಹನಗಳು ಸಂಚರಿಸುತ್ತವೆ. ಇದೇ ಮಾರ್ಗದಿಂದ ಧಾರ್ಮಿಕ ಕ್ಷೇತ್ರಗಳಾದ ದೇವರುಡ್ಡ, ಹೂನ್ನತ್ತಿ, ಮೈಲಾರ ಸೇರಿದಂತೆ ಮತ್ತಿತರೆ ನಗರ, ಗ್ರಾಮ, ಪಟ್ಟಣಗಳಿಗೆ ನಗರದಿಂದ ಅಣತಿ ದೂರದಲ್ಲಿರುವ ದೇವರಗುಡ್ಡ ರಸ್ತೆಯ ರೈಲ್ವೆ ಒಳ ಸೇತುವೆ ಅವೈಜ್ಞಾನಿಕವಾಗಿದ್ದು ಕೊಡಲೇ ಮೇಲ್ಸೆತುವೆ ಕಾಮಗಾರಿ ಆರಂಭಿಸುವಂತೆ ಒತ್ತಾಯಿಸಿ 3 ವರ್ಷಗಳು ಕಳೆದಿವೆ ಆದರೇ ರೈಲ್ವೆ ಇಲಾಖೆ ನೀಡಿದ ಆಶ್ವಾಸನೆ, ಭರವಸೆ ಇಡೇರದೆ ಹುಸಿಯಾಗುತ್ತಲೇ ಸಾಗಿದೆ. ಎಂದು ಕಿಡಿ ಕಾರಿದ ರೈಲ್ವೆ ಮೇಲ್ಸೆತುವೆ ಹೋರಾಟ ಸಮಿತಿಯ ಮುಖಂಡರು ಸೋಮವಾರ ಭಾರಿ ಪ್ರತಿಭಟನೆ ನಡೆಸಿ ಸಂಬಂದಿಸಿದ ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಅಂತೀಮ ಎಚ್ಚರಿಕೆ ನೀಡಿದರು.  

ಈ ಭಾಗದಿಂದ ನಿರಂತರ ವಾಹನ ಸಂಚಾರ, ಜನದಟ್ಟನೆ, ರೈತರು, ಪ್ರವಾಸಿಗರು ನಿತ್ಯ ಸಂಚರಿಸುವುದು ಸಾಮಾನ್ಯ ಸಂಗತಿ ಕಳೆದ 3 ವರ್ಷದಿಂಧ ಮೇಲ್ಸೆತುವೆ ನೀರ್ಮಾಣಕ್ಕೆ ಹೋರಾಟ ಮಾಡುತ್ತಾ ಬಂದಿದ್ದೇವೆ, ಹೋರಾಟ ಪ್ರಭಲವಾದಾಗ ಜನಪ್ರತಿನಿಧಿಗಳು, ಸಂಸದರು, ಸಚಿವರು, ಅಧಿಕಾರಿಳು ಧಾವಿಸಿ  ಸಬೂಬು ಹೇಳಿ ಕಾಲ್ಕಿತ್ತವರು ಮರಳಿ ಇತ್ತ ಕಡೆ ಹಾಯುವುದಿಲ್ಲ. ಇಲ್ಲಿನ ಪರಿಸ್ಥಿತಿ ಏನಾಗಿದೇ, ಏನೂ ಮಾಡಬೇಕು, ತಾತ್ಕಾಲಿಕ ಪರಿಹಾರವಾದರೂ ಎನೂ ಎನ್ನುವುದನ್ನು ಅರಿಯದ ಜನಪ್ರತಿನಿಧಿಗಳು ಕಣ್ಣಿದ್ದು ಕುರುಡರಂತಾಗಿದ್ದಾರೆ ಎಂದು ಪ್ರತಿಭಟನಾಕಾರರು ಒಕ್ಕೂರಲ ಧರಣಿ ನಡೆಸಿದರು.  

ಈ ಸಂಧರ್ಭದಲ್ಲಿ ಮಾತನಾಡಿದ ಹೋರಾಟ ಸಮಿತಿಯ ಮುಖಂಡ ರವೀಂದ್ರಗೌಡ ಪಾಟೀಲ ಅವರು ರೈಲ್ವೆ ಇಲಾಖೆ ಒಳ ಸೇತುವೆ ನಿರ್ಮಿಸಿದೆ ಅದು ಅವೈಜ್ಞಾನಿಕವಾಗಿದೆ. ಒಳಗಡೆ ಸರಾಗವಾಗಿ ನೀರು ಸಂಚರಿಸದೆ ಅಕ್ಕ ಪಕ್ಕದ ಬಸಿ ನೀರು ಒಳ ಸೇರಿ ನಿಂತು ಸಂಚಾರ ಸುಗಮಕ್ಕೆ ಅಡ್ಡಿಯಾಗಿದೆ. ನೀರು ನಿಂತು ನಿಂತು ರಸ್ತೆ ತೆಗ್ಗು ಗುಂಡಿಗಳಾಗಿವೆ. ಇದರಿಂದ ರಸ್ತೆ ಕಾಣದೆ ವಾಹನ ಸವಾರರು ಪಲ್ಟಿ ಹೂಡೆದು ಅನಾಹುತಕ್ಕಿಡಾಗುತ್ತಿದ್ದಾರೆ. ಇದರಿಂದ ಸವಾರರು ಆಸ್ಪತ್ರೆ ಸೇರುವಂತಾಗಿದೆ. ಕಳೆದ ವಾರ ಟ್ರಾಕ್ಟರ್ ಪಲ್ಟಿಯಾಗಿ ಅಪಾರ ಪ್ರಮಾಣದ ಗೋವಿನ ಜೋಳ ಹಾನಿಯಾಗಿ ಲಕ್ಷಾಂತರ ರೂ. ಗಳ ನಷ್ಟ ಅನುಭವಿಸಿದ್ದಾರೆ. ಇಷ್ಟೇಲ್ಲಾ ನಡೆದರೂ ಯಾರೋ ಇತ್ತ ಕಡೆ ಧಾವಿಸಿಲ್ಲ ಎಂದು ಅವರು ಕಿಡಿ ಕಾರಿದರು.  


ಹಲವಾರು ಬಾರಿ ಹೋರಾಟ ಧರಣಿ ಪ್ರತಿಭಟನೆ ಮಾಡಿ ಮಾಡಿ ಸಾಕಾಗಿದೆ, ಇಲಾಖೆ ನೀಡಿದ ಭರವಸೆಯಂತೆ ಮೊದಲು ಒಳ ಸೇರುವೆಯಲ್ಲಿ ನೀರು ಸರಾಗವಾಗಿ ಸಾಗಿಸಲು ಕೆಲಸ ಆರಂಭಿಸಬೇಕು ಡಿಸೇಂಬರ್ ಕೂನೆಯ ವಾರದ ಒಳಗಾಗಿ ಮೇಲ್ಸೆತುವೆ ಕಾಮಗಾರಿ ಆರಂಭಿಸಬೇಕು ಇಲ್ಲವಾದಲ್ಲಿ ಜನೆವರಿ 1ರಂದು ಒಳ ಸೇತುವೆ ಬಳಿ ಟೆಂಟ್ ಹಾಕಿ ನಿರಂತರ ಧರಣಿ ಸತ್ಯಾಗ್ರಹ ಆರಂಬಿಸಲು ಸಮಿತಿಯು ನಿರ್ಧರಿಸಿದೆ. ಅಂದೆ ರೈಲು ರೋಕೋ ಸಹಾ ನಡೆಸಲು ಹೋರಾಟಗಾರರು ಮುಂದಾಗಿದ್ದಾರೆ. ಇದು ನಮ್ಮ ಅಂತೀಮ ಎಚ್ಚರಿಕೆಯಾಗಿದೆ ಎಂದು ಮಾಧ್ಯಮಕ್ಕೂ ಸ್ಪಷ್ಟಿಕರಿಸಿದರು.  


ಪ್ರತಿಭಟನೆ ಮುಂಚೋಣಿಯಲ್ಲಿ ಮುಖಂಡ  ಜಗದೀಶ ಕೆರೋಡಿ, ಯು.ಎಂ. ಗುರುಲಿಂಗಪ್ಪಗೌಡ್ರ, ಬಸವರಾಜಪ್ಪ ನೆಲೂಗಲ್, ತ್ಯಾಗರಾಜ ಹೂನ್ನಾಳಿ, ಪಾಲಾಕ್ಷಪ್ಪ, ಬಾಬುಗೌಡ ಪಾಟೀಲ, ಜಯಣ್ಣ ಗೋಣೆಮ್ಮನವರ, ಬಸಣ್ಣ ಅಗಸರ, ಬಸವರಾಜ ಕೋಂಗಿ, ಕೃಷ್ಣಪ್ಪ ಬಜ್ಜಿ, ಶಿವಾನಂದ ಹೊಸಮನಿ, ಅಕ್ಷಯ ಹೂನ್ನಾಳಿ, ಕೆ.ಪಿ. ಬಸವರಾಜ, ಲಕ್ಷ್ಮಣ ಕುರುಬರ, ಸೇರಿದಂತೆ ಮತ್ತಿತರ ಸದಸ್ಯರು ರೈತ ಸಂಘದ ಮುಖಂಡರು ವಾಹನ ಸವಾರರು ಪಾಲ್ಗೊಂಡಿದ್ದರು. ತಾಸುಗಳ ಕಾಲ ನಡೆದ ರಸ್ತೆ ತಡೆ ಮತ್ತು ಪ್ರತಿಭಟನೆಯಿಂದಾಗಿ ಸವಾರರು ಬೇರೆ ಬೇರೆ ಮಾರ್ಗಗಳನ್ನು ಹುಡುಕುವಲ್ಲಿ ಹರಸಾಹಸ ಪಡುತ್ತಿರುವುದು ಕಂಡು ಬಂದಿತು, 


ಸುದ್ದಿ ಓದಿ