ಶಿಗ್ಗಾವ್

ನಗರವನ್ನು ಸುಂದರ ನಗರವನ್ನಾಗಿ ಮಾಡಲು ಶ್ರಮಿಸುವೆ : ಸಿದ್ದಾರ್ಥಗೌಡ

ನಗರವನ್ನು ಸುಂದರ ನಗರವನ್ನಾಗಿ ಮಾಡಲು ಶ್ರಮಿಸುವೆ : ಸಿದ್ದಾರ್ಥಗೌಡ

ಶಿಗ್ಗಾವಿ 28: ನಗರವನ್ನು ಸುಂದರ ನಗರವನ್ನಾಗಿ ಮಾಡಲು ಶ್ರಮಿಸುತ್ತೇನೆ ಎಂದು ಪುರಸಭೆ ಅಧ್ಯಕ್ಷ ಸಿದ್ದಾರ್ಥಗೌಡ ಪಾಟೀಲ ಹೇಳಿದರು.  

ಪಟ್ಟಣದ ಕಿರಾಣಿ ವ್ಯಾಪಾರಸ್ಥರ ಸಂಘದ ನೇತೃತ್ವದಲ್ಲಿ ಪುರಸಭೆಗೆ ನೂತನ ಅಧ್ಯಕ್ಷ ಉಪಾಧ್ಯಕ್ಷ ಸನ್ಮಾನ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು   ನಗರವನ್ನು ಸ್ವಚ್ಛವಾಗಿ ಇಡಲು ನಿಮ್ಮೇಲ್ಲರ ಸಹಕಾರ ಅತೀ ಮುಖ್ಯ ಹೀಗಾಗಿ ಎಲ್ಲರೂ ಕಸದ ಗಾಡಿಗಳು ಬಂದಾಗ ಗಾಡಿಗೆ ಕಸವನ್ನು ಹಾಕುವುದರ ಮೂಲಕ ನಮ್ಮ ಜವ್ದಾಬಾರಿ ಅರಿಯಬೇಕು ಎಂದರು.   

ಮಾಜಿ ಪುರಸಭಾ ಅಧ್ಯಕ್ಷ ಸುಭಾಸ ಚವ್ಹಾಣ ಮಾತನಾಡಿ ನಿಮ್ಮೆಲ್ಲರ ಸಹಕಾರದಿಂದ ಶಿಗ್ಗಾವಿ ಪುರಸಭೆ ಆರ್ಥಿಕ ಸ್ಥಿತಿ ಚೆನ್ನಾಗಿದೆ  ಬಹುದಿನದ ಬೇಡಿಕೆಯಾದ ನಗರದಲ್ಲಿ ಸಿಸಿ ಕ್ಯಾಮರಾ ಅಳವಡಿಸುವ ಕಾರ್ಯವನ್ನು ನೂತನ ಅಧ್ಯಕ್ಷ ಮಾರ್ಗದರ್ಶನದಲ್ಲಿ ಅತೀ ಶೀಘ್ರದಲ್ಲಿ ಮಾಡಲಾಗುವುದು ಎಂದರು.    

ಸಂಘದ ಅಧ್ಯಕ್ಷ ಲೋಹಿತ ಬುಳ್ಳಕ್ಕನವರ ಮಾತನಾಡಿ  ಸಂಘಕ್ಕೆ ಸಂಘದ ಕಚೇರಿ ಹಾಗೂ ಸಭಾಭವನ ನಿರ್ಮಾಣಕ್ಕೆ ಐದು ಗುಂಟೆ ಜಾಗೆಯನ್ನು ನೀಡಿದರೇ  ಸಂಘಕ್ಕೆ ಸಹಾಯವಾಗುತ್ತದೆ ಎಂದರು.  

ಕಾರ್ಯಕ್ರಮದಲ್ಲಿ ಪರುಶರಾಮ ಸೊನ್ನದ, ಆನಂದ ಸುಭೇದಾರ, ಸಂಘದ ಉಪಾಧ್ಯಕ್ಷರಾದ ಕುಮಾರ ಬಳ್ಳಾರಿ, ಸಿದ್ದಲಿಂಗೇಶ ಅಕ್ಕಿ, ಖಜಾಂಚಿ ಮಂಜುನಾಥ ಖುರ್ಸಾಪೂರ, ಕಿರಾಣಿ ವ್ಯಾಪಾರಸ್ಥರಾದ ಮಂಜುನಾಥ ಅಕ್ಕಿ, ರುದ್ರಯ್ಯ ಕುಂಬಾರಗೇರಿಮಠ, ರಾಜಣ್ಣ ಅಂಕಲಕೋಟಿ, ಷಣ್ಮುಖ ಕಡೇಮನಿ, ರವಿ ಜಗದಣ್ಣವರ, ಇಬ್ರಾಹಿಂ ಸವಣೂರ, ಕೇದಾರ​‍್ಪ ಬಗಾಡೆ, ಶಂಭುಲಿಂಗ ಅಕ್ಕಿ ಸೇರಿದಂತೆ ನಗರದ  ಕಿರಾಣಿ ವ್ಯಾಪಾರಸ್ತರು ಭಾಗವಹಿಸಿದ್ದರು. ರಾಘವೇಂದ್ರ ದೇಶಪಾಂಡೆ ಕಾರ್ಯಕ್ರಮ ನಿರ್ವಹಿಸಿದರು. 


ಸುದ್ದಿ ಓದಿ