ಮಾದರಿ ಪುರಸಭೆ ಆಗಲು ಶ್ರಮಿಸಿ : ಶ್ರೀಕಾಂತ ದುಂಡಿಗೌಡ್ರ
ಶಿಗ್ಗಾವಿ,24 : ನೂತನವಾಗಿ ಶಿಗ್ಗಾವಿ ಪುರಸಭೆಯ ಅಧ್ಯಕ್ಷರಾಗಿ ಆಯ್ಕೆಯಾದ ಸಿದ್ಧಾರ್ಥಗೌಡ್ರ ಪಾಟೀಲ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾದ ಶಾಂತಾಬಾಯಿ ಸುಬೇಧಾರ ಅವರಿಗೆ ಗೌರವಿಸಿ ಸನ್ಮಾನಿಸಿದರು.
ನಂತರ ಭಾರತ ಸೇವಾ ಸಂಸ್ಥೆ ಅಧ್ಯಕ್ಷ ಹಾಗೂ ಭಾಜಪ ಮುಖಂಡ ಶ್ರೀಕಾಂತ ದುಂಡಿಗೌಡ್ರ ಮಾತನಾಡಿ ನಿಮಗೆ ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಹೆಚ್ಚಿನ ಅನುಧಾನವನ್ನು ನಗರಾಭಿವೃದ್ಧಿಗೆ ,ಕೊಳಚೆ ನಿರ್ಮೂಲನೆಗೆ ನಿಗದಿ ಮಾಡುವುದರ ಜೊತೆಗೆ ಮಾದರಿ ಪುರಸಭೆಯಾಗಿ ಮಾಡಲು ಎಲ್ಲ ಸದಸ್ಯರು ಒಟ್ಟುಗೂಡಿ ಶ್ರಮಿಸಬೇಕು ಎಂದರು.
ಈ ಸಂದರ್ಭದಲ್ಲಿ ಹಿರಿಯರಾದ ಹನುಮರೆಡ್ಡಿ ನಡುವಿನಮನಿ ,ಪಕ್ಕೀರಜ್ಜ ಎಲಿಗಾರ ,ದೇವಣ್ಣ ಚಾಕಲಬ್ಬಿ, ಶಿವಾನಂದ ಸೊಬರದ , ತಿಪ್ಪಣ್ಣ ಸಾತಣ್ಣವರ, ಸಂಗಮೇಶ ಕಂಬಾಳಿಮಠ, ಸುಭಾಷ್ ಚವ್ಹಾಣ, ಪರಶುರಾಮ ಸೊನ್ನದ, ಬಸವರಾಜ ನಾರಾಯಣಪುರ, ಆನಂದ ಸುಬೇದಾರ, ಮಂಜುನಾಥ ಬ್ಯಾಹಟ್ಟಿ, ರಮೇಶ ವನಹಳ್ಳಿ, ಸುಧೀರ ಮಾಳವಾದೆ, ರೂಪಾ ಬನ್ನಿಕೊಪ್ಪ, ಸಂಗೀತಾ ವಾಲ್ಮೀಕಿ, ಅನುರಾಧ ಮಾಳವಾದೆ, ಚಂದ್ರು ಜವಳಿ,ಮಾಂತೇಶ ಸೂಜಿ, ಮುತ್ತು ಹಿರೇಮಠ ,ಸಂತೋಷ್ ಕುಲಕರ್ಣಿ, ರವಿ ಮಡಿವಾಳರ, ವಿಶ್ವನಾಥ ಗಾಣಿಗೇರ, ಚೇತನ ಕಲಾಲ, ಮಂಜು ಗೌಡರ ಹಾಗೂ ಇನ್ನಿತರ ಮುಖಂಡರು ಉಪಸ್ಥಿತರಿದ್ದರು. ನವೀನ ಸಾಸನೂರ ಕಾರ್ಯಕ್ರಮ ನಿರ್ವಹಿಸಿದರು.