ಸಂಘಟನೆಯನ್ನು ಮತ್ತಷ್ಟು ಬಲಗೊಳಿಸಿ: ಎಂ ಗುರುಮೂರ್ತಿ
ಬಳ್ಳಾರಿ : ಜೂ (25)ರಂದು ಪ್ರೊ ಬಿ ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಘಟನೆಯನ್ನು ರಾಜ್ಯದಾದ್ಯಂತ ಮತ್ತಷ್ಟು ಬಲಗೊಳಿಸಿ ನಮ್ಮ ಹಕ್ಕುಗಳನ್ನು ಪಡೆಯಲು ನಾವು ಸಂಘಟಿತರಾಗಬೇಕಿದೆ ಎಂದು ರಾಜ್ಯ ಸಂಚಾಲಕರಾದ ಎಂ ಗುರುಮೂರ್ತಿ ಹೇಳಿದರು.ನಗರದ ಖಾಸಗಿ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಾಜ್ಯ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ಪ್ರೊ. ಬಿ. ಕೃಷ್ಣಪ್ಪ ಅವರ ಹೋರಾಟದ ಚಿಂತನೆಗಳು ಮಾದರಿಯಾಗಿದ್ದು, ಅವುಗಳು ಕಾರ್ಯರೂಪಕ್ಕೆ ಬರಬೇಕಿದೆ ಎಂದರು.ಸಂಧರ್ಭದಲ್ಲಿ, ರಾಜ್ಯ ಮುಖಂಡರಾದ ಮುಂಡ್ರಿಗಿ ನಾಗರಾಜ್, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರಾದ ಎಂ ಗುರುಮೂರ್ತಿ, ರಾಜ್ಯ ಸಂಘಟನಾ ಸಂಚಾಲಕರಾದ ಬಿ ಎನ್ ಗಂಗಾಧರ್ಪ, ಮುಂಡುಗೋಡು ಪಕ್ಕೀರ್ಪ, ಹನುಮಂತಪ್ಪ ಕಾಕರಗಲ್, ವೆಂಕಟೇಶ್ ಮಂಡ್ಯ, ವಿಭಾಗೀಯ ಸಂಚಾಲಕರಾದ ಪ್ರಕಾಶ್ ಹೊಸಳ್ಳಿ, ರಾಜ್ಯ ಖಜಾಂಚಿ ಬಿ.ಎ ಕಾಟ್ಗೆ, ಬಳ್ಳಾರಿ ಜಿಲ್ಲಾ ಸಂಚಾಲಕರಾದ ಜಿ ಗೋವರ್ಧನ, ವಿಜಯನಗರ ಜಿಲ್ಲಾ ಸಂಚಾಲಕರಾದ ಎಸ್ ದುರುಗೇಶ್ ಮತ್ತು ವಿವಿಧ ಜಿಲ್ಲೆಗಳ ಜಿಲ್ಲಾ ಸಂಚಾಲಕರು, ಹಾಗೂ ವಿವಿದ ತಾಲ್ಲೂಕುಗಳ ತಾಲ್ಲೂಕು ಸಂಚಾಲಕರು ಸೇರಿದಂತೆ, ಎಲ್ಲಾ ಜಿಲ್ಲೆಯ ಜಿಲ್ಲಾ ಸಂಘಟನಾ ಸಂಚಾಲಕರು, ಪದಾದಿಕಾರಿಗಳು, ಬಳ್ಳಾರಿ ಜಿಲ್ಲಾ ಖಜಾಂಚಿ ಕುಬೇರ, ಜಿಲ್ಲಾ ಸಂಘಟನಾ ಸಂಚಾಲಕರಾದ ಸಣ್ಣ ನಾಗರಾಜ, ನಟರಾಜ, ವೀರಭದ್ರ್ಪ, ಫೋಟೋರಾಜ, ಮುರುಳಿ, ಹೊನ್ನೇಶ್, ಗುರುದೇವ ವಿದ್ಯಾರ್ಥಿ ಒಕ್ಕೂಟದ ಜಿಲ್ಲಾ ಸಂಚಾಲಕರಾದ ಅರುಣ್ ಕುಮಾರ್, ಮುಂತಾದವರು ಹಾಜರಿದ್ದರು.