ಹೊಸಪೇಟೆ

ಅಸ್ಪೃಶ್ಯತಾ ನಿವಾರಣಾ ಸಪ್ತಾಹದ ಬೀದಿ ನಾಟಕ ಪ್ರದರ್ಶನ

ಅಸ್ಪೃಶ್ಯತಾ ನಿವಾರಣಾ ಸಪ್ತಾಹದ ಬೀದಿ ನಾಟಕ ಪ್ರದರ್ಶನ

ಹೊಸಪೇಟೆ 25:  ದಿ.20ರಿಂದ 24ರವರೆಗೆ ಹೊಸಪೇಟೆ ತಾಲೂಕಿನ ಆಯ್ದ ಗ್ರಾಮಗಳಲ್ಲಿ ರಂಗಜಂಗಮ ಸಂಸ್ಥೆ ಡಿ.ಕಗ್ಗಲ್ ಬೀದಿನಾಟಕ ತಂಡದಿಂದ ಪ್ರದರ್ಶನ ಮಾಡಲಾಯಿತು. ಕಾರ್ಯಕ್ರಮದ ಉದ್ಘಾಟನೆ ಮಾಡಿದ ತಾಲೂಕು ಸಮಾಜಕಲ್ಯಾಣ ಅಧಿಕಾರಿಗಳಾದ ಪಿ ವಸಂತಕುಮಾರ್ ಮಾತನಾಡುತ್ತ 1989 ರ ಪ್ರತಿಬಂಧಕ ಕಾಯ್ದೆಅನ್ವಯದ ಪ್ರಕಾರ ಪರಿಶಿಷ್ಟಜಾತಿ ವ್ಯಕ್ತಿಗಳ ಶೋಷಣೆ ದೌರ್ಜನ್ಯ ಮಾಡಿದರೆ ಅಂತಹವರ ವಿರುದ್ದ ನಾನ್ ಬೇಲಬಲ್  ಪ್ರಕರಣ ದಾಖಲಿಸಿ ಶಿಕ್ಷೆಗೆ ಗುರಿ ಪಡಿಸಲಾಗುತ್ತದೆ. ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಗ್ರಾಮ ವಾಸ್ತವ್ಯ ತಿಮ್ಮಲಾಪುರದಲ್ಲಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಅದೇ ಸಂದರ್ಭದಲ್ಲಿ ಬೀದಿನಾಟಕದ ಆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಾ ಇಂದಿಗೂ ಕೆಲವು ಗ್ರಾಮಗಳಲ್ಲಿ ಜಾತಿ ವ್ಯವಸ್ಥೆ ಇನ್ನೂ ಜೀವಂತವಾಗಿದೆ ಅದನ್ನು ನಾವೆಲ್ಲರೂ ಕೂಡಿಕೊಂಡು ಹೊಡೆದೋಡಿಸಬೇಕಾಗಿದೆ ಎಂಬುದಾಗಿ ತಿಳಿಸಿದರು.

ನಂತರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ನಿಲಯದ ಮೇಲ್ವಿಚಾರಕ ಕೊಟ್ರೇಶ ಅಕ್ಕಂಡಿಯವರು ಮಾತನಾಡುತ್ತಾ ಜಾತಿ ವ್ಯಸ್ಥೆಯಲ್ಲಿ ನಾವೆಲ್ಲಾ ಮುಳುಗಿ ಹೋಗುರುವುದರಿಂದ ಅಭಿವೃದ್ಧಿ ಕಾಣಲು ಇನ್ನೂ ಪರದಾಡುತ್ತಿದ್ದೇವೆ ಅದ್ದರಿಂದ ಸಮಾಜದ ಅಭಿವೃದ್ಧಿಯ ಮೇಲೆ ಪರಿಣಾಮ ಬೀರುವ ಇಂತಹ ಅನಿಷ್ಠ ಪದ್ಧತಿಗಳನ್ನು ನಿರ್ಮೂಲನ ಮಾಡಲು ಪ್ರತಿಯೊಬ್ಬರು ಮುಂದಾಗಬೇಕು ಎಂಬುದಾಗಿ ನುಡಿದರು.

ನಂತರರಂಗಜಂಗಮ ಸಂಸ್ಥೆಯಿಂದಅಸ್ಪೃಶ್ಯತಾ ನಿವಾರಣಾ ಸಪ್ತಾಹದ ಬೀದಿ ನಾಟÀಕÀ ಪ್ರದರ್ಶನ ಹಾಗೂ ಕರ ಪತ್ರಗಳನ್ನು ಹಂಚುವ ಮೂಲಕ ಜಾಗೃತಿಕಾರ್ಯಕ್ರಮವನ್ನುತಂಡದಕಲಾವಿದರಾದ ಹುಲುಗಪ್ಪ ಡಿ.ಹೇಮಂತ ಶರಣಯ್ಯಸ್ವಾಮಿರಾಮಣ್ಣ ಶ್ರೀಧರ ಜೈನಾಬಿ ಶಿವಲಿಂಗಮ್ಮ ಭಾಷಾ ಮುಂತಾದವರು ನೆರವೇರಿಸಿದರು.ಸುಮಾರು 15 ಹಳ್ಳಿಗಳಲ್ಲಿ ಈ ಕಾರ್ಯಕ್ರಮವನ್ನು ಅಸ್ಪೃಶ್ಯತೆ ಕುರಿತು ಬೀದಿ ನಾಟಕದ ಮೂಲಕ ಪ್ರದರ್ಶನ ಮಾಡಲಾಗಿದೆ.

ಸುದ್ದಿ ಓದಿ