ಚಿಕ್ಕೋಡಿ

ಗ್ಯಾರೆಂಟಿ ಯೋಜನೆಗಳಿಂದ ಬಡವರಿಗೆ ಅನುಕೂಲ: ಗಾಯಾಗೋಳ

ಗ್ಯಾರೆಂಟಿ ಯೋಜನೆಗಳಿಂದ ಬಡವರಿಗೆ ಅನುಕೂಲ: ಗಾಯಾಗೋಳ

ಮಾಂಜರಿ ಗ್ರಾಮದಲ್ಲಿ ಬೀದಿ ನಾಟಕ ಕಾರ್ಯಕ್ರಮ;  

ಮಾಂಜರಿ 20: ರಾಜ್ಯ ಸರ್ಕಾರ ಜಾರಿಗೊಳಿಸಿದ ಗ್ಯಾರಂಟಿ ಯೋಜನೆಗಳಿಂದ ಬಡವರಿಗೆ ಕೂಲಿ  ಕಾರ್ಮಿಕರಿಗೆ ಬಹಳ ಉಪಯೋಗವಾಗುತ್ತಿವೆ ಎಂದು ಮಾಂಜರಿ  ಗ್ರಾಮದ ಹಿರಿಯ ಮುಖಂಡ ಸಿದ್ದಾರ್ಥ ಗಾಯಾಗೋಳ  ಅವರು ಹೇಳಿದರು. 

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವರ ಆಶ್ರಯದಲ್ಲಿ ರಂಗದರ್ಶನ ಗ್ರಾಮೀಣ ವಿಕಾಸ ಸಂಘ ದುಳಗನವಾಡಿ  ಆಶ್ರಯದಲ್ಲಿ ಮಾಂಜರಿ  ಗ್ರಾಮದಲ್ಲಿ  ಬುಧವಾರ ಏರಿ​‍್ಡಸಿದ್ದ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಕುರಿತ ಬೀದಿ ನಾಟಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

ಮಹಿಳೆಯರಿಗೆ ಅತ್ಯಂತ ಮೆಚ್ಚುಗೆಯಾದ ಶಕ್ತಿ ಯೋಜನೆಯಡಿ ಬಸ್ ಪ್ರಯಾಣ, ಪ್ರತಿ ತಿಂಗಳು ಗೃಹ ಒಡತಿಯರಿಗೆ 2 ಸಾವಿರ ರೂ., ಗೃಹ ಜ್ಯೋತಿ ಯೋಜನೆಯಡಿ  ಪ್ರತಿ ಮನೆಗೆ 200 ಯುನಿಟ್ ಉಚಿತ ವಿದ್ಯುತ್, ಅನ್ನಭಾಗ್ಯ, ಯುವ ನಿಧಿ ಯೋಜನೆಗಳಿಂದ ಅನುಕೂಲವಾಗುತ್ತಿದೆ ಎಂದರು. 

ಗ್ರಾಮ ಪಂಚಾಯತ  ಹಂತದಲ್ಲಿ ಸರ್ಕಾರದ ಯೋಜನೆಗಳನ್ನು ಬೀದಿ ನಾಟಕ ಮೂಲಕ ತಿಳಿಸಲು ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಜನರಿಗೆ ಸರ್ಕಾರದ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಳ್ಳಬೇಕೆಂಬ ಅರಿವು ಮೂಡುತ್ತದೆ. ಇದರಿಂದ ಸರ್ಕಾರದ ಯೋಜನೆಗಳು ಪಡೆದುಕೊಳ್ಳುವುದಕ್ಕೆ ಸಹಕಾರಿಯಾಗುತ್ತದೆ ಎಂದು ಹೇಳಿದರು. 

ಕಾರ್ಯಕ್ರಮದಲ್ಲಿ ಲಕ್ಷ್ಮಣ ಮಾಯನ್ನವರ. ರವಿಂದ್ರ ವಡವಡೆ ಕುಮಾರ ಮಾಯನ್ನವರ  ರಾಘವೇಂದ್ರ ಲಂಬುಗೋಳ ಜಾವಿದ ಮಕಾನದಾರ  ಕಲಾವಿದರಾದ ಭರತ ಕಲಾಚಂದ್ರ, ಮಾರುತಿ ಕಾಮಗೌಡ, ಸುಜಾತಾ ಮಗದುಮ್ಮ, ಸಾವಿತ್ರಿ ಹಳಕಲ, ಸತ್ರಾಂಮ ಮಯೂರ, ಮಾರುತಿ ಕಮತೆ ಹಾಗೂ ಇತರರು ಇದ್ದರು. 


ಸುದ್ದಿ ಓದಿ