ಜ್ಞಾನ ವಿಕಾಸಕಾಗಿ ವಿದ್ಯಾರ್ಥಿಗಳಿಗೆ ಕಥೆ, ಕಾವ್ಯಗಳು ಅವಶ್ಯ: ಸುರೇಶ ಕುಲಕರ್ಣಿ
ಶಿಗ್ಗಾವಿ 03: ಜ್ಞಾನ ವಿಕಾಸಕ್ಕಾಗಿ ವಿದ್ಯಾರ್ಥಿಗಳಿಗೆ ತರಗತಿಯಲ್ಲಿ ಪಠ್ಯದ ಜತೆಗೆ ಕಥೆ,ಕಾವ್ಯ, ವಚನಗಳ ಪಠಣ ಮಾಡುವುದು ಮುಖ್ಯವಾಗಿದೆ. ಅದರಿಂದ ಭವಿಷ್ಯದ ಬದುಕು ಗಟ್ಟಿಯಾಗಲು ಸಾಧ್ಯವಿದೆ ಎಂದು ಗದಗದ ಪಾಲಕರಿಗೆ, ಶಿಕ್ಷಕರಿಗೆ ಸಲಹೆ ನೀಡಿದರು.
ಪಟ್ಟಣದಲ್ಲಿ ಭಾರತ ಸೇವಾ ಸಂಸ್ಥೆ ವತಿಯಿಂದ ನಡೆದ ಎಸ್.ಎಸ್.ಎಲ್.ಸಿ, ಪಿಯುಸಿ, ಪದವಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಶಿಕ್ಷಕರ ಬಗ್ಗೆ ಪಾಲಕರು, ಪಾಲಕ, ಶಿಕ್ಷಕರು, ಪಾಲಕ, ಶಿಕ್ಷಕರಿಬ್ಬರ ಬಗ್ಗೆ ಮಕ್ಕಳು ಟಿಕೆ ಮಾಡುವುದನ್ನು ಬಿಡಬೇಕು. ಮಕ್ಕಳ ಸರ್ವಾಂಗೀಣ ಏಳ್ಗೆಯಲ್ಲಿ ಪ್ರತಿಯೊಬ್ಬರ ಜವಾಬ್ದಾರಿಯಿದೆ. ಅದರ ತಕ್ಕಂತೆ ವರ್ತನೆ ಮಾಡುವದು ಮುಖ್ಯವಾಗಿದೆ. ಇತರರು ಹೇಳುವ ಜ್ಞಾನ ಅರಿಯದಿದ್ದಾಗ ಕಲಿಕೆಯಲ್ಲಿ ಹಿಂಬಿಳಲು ಸಾಧ್ಯವಿದೆ. ಆದರೆ ಕಲಿಕೆಯಲ್ಲಿ ಹಿಂದುಳಿದ ಮಕ್ಕಳು ದಡ್ಡರಲ್ಲ. ತಾಯಿ ನೀಡುವ ಪಾಠ, ಸಂಸ್ಕಾರಗಳು ಯಾವ ವಿಶ್ವವಿದ್ಯಾಲಯದಲ್ಲಿ ನೀಡಲು ಸಾಧ್ಯವಿಲ್ಲ. ಒಂದು ಚಿತ್ರದ ಪ್ರತಿ ಉತ್ತಮ ಜ್ಞಾನ ನೀಡಲು ಸಾಧ್ಯವಿದೆ ಎಂದು ಸತ್ಯವನ್ನು ಮರೆಯಬಾರದು ಎಂದರು.
ಭಾರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ನೇತೃತ್ವವಹಿಸಿ ಮಾತನಾಡಿ, ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಪ್ರತಿಯೊಬ್ಬರ ಪಾತ್ರ ಮುಖ್ಯವಾಗಿದೆ. ಮಕ್ಕಳಿಗೆ ಸ್ಪೂರ್ತಿ, ಪ್ರೋತ್ಸಾಹ ನೀಡಿದಾಗ ಮಾತ್ರ ಬಲಿಷ್ಟ ನಾಯಕರಾಗಲು ಸಾಧ್ಯವಿದೆ. ಹೀಗಾಗಿ ಮಕ್ಕಳ ಪ್ರತಿಭೆ ಗುರುತಿಸಿ ಬೆಂಬಲಿಸುವ ಜತೆಗೆ ಮಾರ್ಗದರ್ಶನ ನೀಡುವುದು ಮುಖ್ಯವಾಗಿದೆ. ಐಎಎಸ್, ಕೆಎಎಸ್ ಮಾಡುವ ಸಾಮರ್ಥ್ಯ ಗ್ರಾಮೀಣ ಭಾಗದ ಮಕ್ಕಳಲಿದ್ದು, ಅದಕ್ಕೆ ಪ್ರೇರಣೆಯಾಗಿ ನಿಲ್ಲಬೇಕಾಗಿದೆ ಎಂದರು.
ಹಿರೇಮಣಕಟ್ಟಿ ವಿಶ್ವಾರಾಧ್ಯ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿ, ಪ್ರಾಮಾಣಿಕವಾಗಿ ದುಡಿದ ಗಳಿದ ಸಂಪತ್ತಿನಲ್ಲಿ ದಾನಧರ್ಮ ಮತ್ತು ಇತರರಿಗೆ ಪರೋಪಕಾರದ ಗುಣಗಳು ಪ್ರತಿಯೊಬ್ಬರಲ್ಲಿ ಬೆಳೆಯಬೇಕು. ಅದರಿಂದ ಶಿಕ್ಷಣ ಕ್ಷೇತ್ರ ಬದಲಾವಣೆಯಾಗಲು ಸಾಧ್ಯವಿದೆ. ಶ್ರೀಕಾಂತ ದುಂಡಿಗೌಡ್ರ ಮಾಡುವ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದೆ ಎಂದರು.
ಬಂಕಾಪುರ ಅರಳೆಲೆಮಠದ ರೇವಣಸಿದ್ದೇಶ್ವರ ಸ್ವಾಮೀಜಿ, ವಿರಕ್ತಮಠದ ಸಂಗನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮುಖಂಡರಾದ ತಿಪ್ಪಣ್ಣ ಸಾತಣ್ಣವರ, ಎಂ.ಎನ್.ವೆಂಕೋಜಿ, ಹನುಮರಡ್ಡಿ ನಡುವಿನಮನಿ, ಜಯಣ್ಣ ಹೆಸರೂರ, ಪ್ರಸಾದ ಸುರಗಿಮಠ, ರಾಘು ದೇಶಪಾಂಡೆ, ನವೀನ ಸಾಸನೂರ, ರವಿ ಮಡಿವಾಳರ, ಚೇತನ ಮಡಿವಾಳರ, ಶಶಿಕಾಂತ ರಾಠೋಡ, ಪ್ರವೀಣ ಕೊಳೆಕರ, ವಿಶ್ವನಾಥ ಗಾಣಿಗೇರ, ಬಸಣ್ಣ ನಾರಾಯಣಪುರ ಸೇರಿದಂತೆ ಅನೇಕ ಗಣ್ಯರು ಇದ್ದರು.
ಜಾನಪದ ಕಲಾವಿದ ಬಸವರಾಜ ಶಿಗ್ಗಾವಿ ಕಲಾ ತಂಡದಿಂದ ಸಂಗೀತ ಕಾರ್ಯಕ್ರಮ ಜರುಗಿತು. ಶ್ರೀಕಾಂತ ದುಂಡಿಗೌಡ್ರ 42 ನೇ ವರ್ಷದ ಹುಟ್ಟು ಹಬ್ಬದ ನಿಮಿತ್ಯ ತಾಲೂಕಿನ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ, ಪದವಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ 67 ವಿಧ್ಯಾರ್ಥಿಗಳಿಗೆ ಸನ್ಮಾನಿಸಿ ತಲಾ 2 ಸಾವಿರ ಆರ್ಥಿಕ ಸಹಾಯ ಮಾಡಲಾಯಿತು.
ಭಾರತ ಸೇವಾ ಸಂಸ್ಥೆ ಶಿಗ್ಗಾವಿ.