ಚಿಕ್ಕೋಡಿ

ಎಂಜಿಎಂ ಆಸ್ಪತ್ರೆ ಸಂಪೂರ್ಣ ಕೋವಿಡ್ ಆಸ್ಪತ್ರೆಯನ್ನಾ ಮಾಡುವಂತೆ ಕ್ರಮ: ಜೊಲ್ಲೆ

ಎಂಜಿಎಂ ಆಸ್ಪತ್ರೆ ಸಂಪೂರ್ಣ ಕೋವಿಡ್ ಆಸ್ಪತ್ರೆಯನ್ನಾ ಮಾಡುವಂತೆ ಕ್ರಮ: ಜೊಲ್ಲೆ

ಚಿಕ್ಕೋಡಿ04: ನಿಪ್ಪಾಣಿಯ ಎಂಜಿಎಂ ಆಸ್ಪತ್ರೆಯನ್ನು ಸಂಪೂರ್ಣ ಕೋವಿಡ್ ಆಸ್ಪತ್ರೆಯನ್ನಾಗಿ ಮಾಡಲು ಕ್ರಮಕೈಗೊಳ್ಳಲಾಗಿದೆ ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.ಮಂಗಳವಾರ ನಿಪ್ಪಾಣಿ ನಗರದ ಎಂಜಿಎಂ ಆಸ್ಪತ್ರೆ ಹಾಗೂ ನಗರಸಭೆ ಅಧಿಕಾರಗಳ ಸಭೆ ನಡೆಸಿದ ಅವರು, ಆಸ್ಪತ್ರೆಯಲ್ಲಿ 23 ಆಕ್ಸಿಜನ್, ನಾಲ್ಕು ವೆಂಟಿಲೇರ್ಗಳ ಸಹಿತ ಒಟ್ಟು 40 ಹಾಸಿಗೆಯುಳ್ಳ ಕೋವಿಡ್ ಸೆಂಟರ್ ಇನ್ನೇರಡು ದಿನಗಳಲ್ಲಿ  ಕೊರೊನಾ ವೈರಸ್ ಸೋಂಕಿತರಿಗಾಗಿ ಮೀಸಲಿಡಲಾಗುವುದು ಎಂದರು.ಸಾಮಾನ್ಯ ರೋಗಿಗಳಿಗೆ ಅದರ ಪಕ್ಕಕ್ಕಿರುವ ತಾಯಿ ಮತ್ತು ಮಕ್ಕಳ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುವುದು. ಅಧಿಕಾರಿಗಳು ಎಲ್ಲ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.

ನಗರದ ಹೊರವಲಯದಲ್ಲಿ ಜೊಲ್ಲೆ ಉದ್ಯೋಗ ಸಮೂಹದ ಜೊಲ್ಲೆ ಪಬ್ಲಿಕ್ ಸ್ಕೂಲ್ನಲ್ಲಿಯೂ 16 ಆಕ್ಸಿಜನ್ ಸಹಿತ 40 ಹಾಸಿಗೆಯುಳ್ಳ ಕೋವಿಡ್ ಸೆಂಟರ್ ಆರಂಭಿಸಲಾಗುವುದು. ನಿಪ್ಪಾಣಿ ಭಾಗದ ನಾಗರಿಕರಿಗಾಗಿ ಉಚಿತ ಅಂಬ್ಯೂಲೆನ್ಸ್ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ ಎಂದರು.

ಸಾರ್ವಜನಿಕರು ಸರಕಾರದ ನಿದರ್ೇಶನದಂತೆ ಸೂಚನೆಗಳನ್ನು ಪಾಲಿಸಿದಲ್ಲಿ ಕೋವಿಡ್-19ರಿಂದ ನಾವೆಲ್ಲರೂ ಮುಕ್ತರಾಗಲು ಸಾಧ್ಯ. ಆದ್ದರಿಂದ ಎಲ್ಲರೂ ಮಾಸ್ಕ್ ಬಳಸಿ, ಸಾಮಾಜಿಕ ಅಂತರ ಕಾಪಾಡಿ ಸರಕಾರಕ್ಕೆ ಕೈಜೋಡಿಸಬೇಕು ಎಂದು ಕ್ಷೇತ್ರದ ಜನರಲ್ಲಿ ಮನವಿ ಮಾಡಿಕೊಂಡರು.  ಸಂಸದ ಅಣ್ಣಾಸಾಹೇಬ ಜೊಲ್ಲೆ, ಸ್ಥಳೀಯ  ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾಖರ್ಾನೆಯ ಚೇರಮನ್ ಚಂದ್ರಕಾಂತ ಕೋಠಿವಾಲೆ, ವಾಯಿಸ್-ಚೇರಮನ್ ಮಲಗೊಂಡಾ ಪಾಟೀಲ ಹಾಗೂ ಸಂಚಾಳಕರು, ಸ್ಥಳೀಯ ನಗರಸಭೆ ಅಧ್ಯಕ್ಷ ಜಯವಂತ ಭಾಟಲೆ ಹಾಗೂ ಸಸದಸ್ಯರು ಉಪಸ್ಥಿತರಿದ್ದರು.


ಸುದ್ದಿ ಓದಿ