ಚಿಕ್ಕೋಡಿ

ಮುಂದಿನ ವರ್ಷದಿಂದ ಮೊಲ್ಯಾಸಿಸ್ ಘಟಕ ಆರಂಭ

ಮುಂದಿನ ವರ್ಷದಿಂದ ಮೊಲ್ಯಾಸಿಸ್ ಘಟಕ ಆರಂಭ

ಚಂದ್ರಕಾಂತ ಕೋಠಿವಾಲೆ ಹೇಳಿಕೆ:  ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯ ಬಾಯ್ಲರ ಪ್ರದೀಪನ ಸಮಾರಂಭ

ಚಿಕ್ಕೊಡಿ 19: ಇಥೆನಾಲ್ ಪ್ರೊಜೆಕ್ಟ್‍ವನ್ನು ಮುಂದಿನ ವರ್ಷದಿಂದ ಆರಂಭಿಸಲಾಗುವುದು. ಸಕ್ಕರೆಯ ದರದಲ್ಲಿ ಏರು-ಪೇರು ಆಗುವುತ್ತಿರುವುದರಿಂದ ಹಾಗೂ ಅಪಾರ ಬಡ್ಡಿ ತುಂಬುತ್ತಿರುವ ಪರಿಣಾಮ ಕಾರ್ಖಾನೆ ಸಂಕಷ್ಟದಲ್ಲಿದ್ದು ಇಥೆನಾಲ್ ಪ್ರೊಜೆಕ್ಟ್‍ದಿಂದ ಕಾರ್ಖಾನೆಗೆ ಸಹಕಾರಿಯಾಗಲಿದೆ ಎಂದು ಸ್ಥಳೀಯ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯ ಚೇರಮನ್ ಚಂದ್ರಕಾಂತ ಕೋಠಿವಾಲೆ ಹೇಳಿದರು. 

ನಿಪ್ಪಾಣಿಯ  ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯ 2021-22ನೇ ಸಾಲಿನ ಕಾರ್ಖಾನೆಯ ಕಬ್ಬು ನುರಿಸುವ ಹಂಗಾಮಿನ ಪ್ರಯುಕ್ತ ಕಾರ್ಖಾನೆಯಲ್ಲಿ ಭಾನುವಾರ ಜರುಗಿದ (ಬಾಯ್ಲರ್)ದ ಅಗ್ನಿಪ್ರದೀಪನ ಕಾಯಕ್ರಮದಲ್ಲಿ ಅವರು ಮಾತನಾಡಿದರು. ಸಂಸದ ಅಣ್ಣಾಸಾಹೇಬ ಜೊಲ್ಲೆ ಹಾಗೂ ಸಚಿವೆ ಶಶಿಕಲಾ ಜೊಲ್ಲೆಯವರ ಸಹಕಾರ ಹಾಗೂ ಮಾರ್ಗದರ್ಶನದಡಿಯಲ್ಲಿ ಕಾರ್ಖಾನೆಯು ಪ್ರಗತಿಯಲ್ಲಿದ್ದು ಸುಮಾರು 50ರಷ್ಟು ಹೊಸ ಎತ್ತಿನ ಗಾಡಿಗಳನ್ನು ತಯಾರಿಸಿಕೊಳ್ಳಲಾಗಿದೆ. ಹಂಗಾಮಿನ ಸಕಲ ಸಿದ್ಧತೆಗಳನ್ನು ನಡೆದಿದ್ದು ಇದೆ ಅ.4ರಂದು ಕಬ್ಬು ನುರಿಸಲು ಆರಂಭಿಸಲಾಗುವುದು ಎಂದರು.

ಅಗ್ನಿಪ್ರದೀಪನಕ್ಕೆ ಚಾಲನೆ ನೀಡಿದ ಹಾಗೂ ನಂತರ ಜರುಗಿದ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿಸದ್ದ ನಿಡಸೋಸಿಯ ಸಿದ್ಧಸಂಸ್ಥಾನಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಮಾತನಾಡಿ ರೈತ ದೇಶದ ಬೆನ್ನೆಲುಬು. ರೈತ ಬದುಕಿದಲ್ಲಿ ಕಾಕನೆಗಳು ಬದುಕುತ್ತವೆ, ದೇಶ ಬೆಳೆಯುತ್ತದೆ. ಸಂಸದ ಜೊಲ್ಲೆ ಹಾಗೂ ಚೇರಮನ್ ಕೋಠಿವಾಲೆ ಇವರು ಕಾರ್ಖಾನೆಯ ಮೇಲೆ ಹಿಡಿತ ಸಾಧಿಸಿರುವ ಪರಿಣಾಮ ಅದು ಒಳ್ಳೆಯ ರೀತಿಯಲ್ಲಿ ನಡೆದಿದೆ, ಕಾರ್ಖಾನೆ ಎತ್ತರಕ್ಕೆ ಬೆಳೆಯಲಿ ಎಂದು ಆಶೀರ್ವಚನ ನೀಡಿದರು.

ವ್ಯವಸ್ಥಾಪಕ ನಿರ್ದೇಶಕ ಶಿವ ಕುಲಕರ್ಣಿ ಮಾತನಾಡಿ ಪ್ರಸಕ್ತ ಹಂಗಾಮಿನಲ್ಲಿ ಸುಮಾರು 5 ಲಕ್ಷ ಮೆ.ಟನ್ ಕಬ್ಬು ನುರಿಸಿ 6 ಲಕ್ಷ ಮೆ.ಟನ್ ಸಕ್ಕರೆ ಉತ್ಪಾದಿಸುವ ಗುರಿ ಹೊಂದಲಾಗಿದೆ’ ಎಂದರು. 

ಪೂರ್ಣಗೊಂಡ ಸುಮಾರು 80 ಟನ್ ಸಾಮರ್ಥ್ಯದ ತೂಕಯಂತ್ರವನ್ನು ಉದ್ಘಾಟಿಸಿದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ 6 ಸಾವಿರ ಮೆ.ಟನ್ ಸಾಮರ್ಥ್ಯದ ಕಾಕುಂಬಿ(ಮೊಲ್ಯಾಸಿಸ್) ಘಟಕದ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದರು. 

ಸಂಚಾಲಕ ಅಪ್ಪಾಸಾಹೇಬ ಜೊಲ್ಲೆ, ಅವಿನಾಶ ಪಾಟೀಲ, ವಿಶ್ವನಾಥ ಕಮತೆ, ರಾಮಗೊಂಡಾ ಪಾಟೀಲ, ಸಮಿತ ಸಾಸನೆ, ಸುಕುಮಾರ ಪಾಟೀಲ, ಮ್ಹಾಳಪ್ಪಾ ಪಿಸೂತ್ರೆ, ರಾಜಾರಾಮ ಖೋತ, ಪ್ರತಾಪ ಮೇತ್ರಾಣಿ, ಕಲ್ಲಪ್ಪಾ ನಾಯಿಕ, ಉಜ್ವಲಾ ಶಿಂಧೆ, ಆಶಾಜೋತಿ ವಿಶೇಷ ಮಕ್ಕಳ ಶಾಲೆಯ ಅಧ್ಯಕ್ಷ ಜೋತಿಪ್ರಸಾದ ಜೊಲ್ಲೆ, ಬೀರೇಶ್ವರ ಕ್ರೆಡಿಟ್ ಸಹಕಾರಿ ಪತ್ತಿನ ಸಂಸ್ಥೆಯ ಚೇರಮನ್ ಜಯಾನಂದ ಜಾಧವ, ಪ್ರಕಾಶ ಶಿಂಧೆ, ವೈಭವ ರಾಂಗೋಳೆ, ನಗರಸಭೆ ಅಧ್ಯಕ್ಷ ಜಯವಂತ ಭಾಟಲೆ, ರಾವಸಾಹೇಬ ಪಾಟೀಲ, ಮೊದಲಾದವರು ಉಪಸ್ಥಿತರಿದ್ದರು. ಸಂಚಾಲಕ ಆರ್.ವೈ. ಪಾಟೀಲ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧೀಕ್ಷಕ ರಾಜೇಂದ್ರ ಖರಾಬೆ ಕಾರ್ಯಕ್ರಮ ನಿರೂಪಿಸಿದರು. ವಾಯಿಸ್-ಚೇರಮನ್ ಎಂ.ಪಿ. ಪಾಟೀಲ ವಂದಿಸಿದರು.

ಸುದ್ದಿ ಓದಿ