ಚಿಕ್ಕೋಡಿ

ತಂಬಾಕು ಕಟಾವು ಪ್ರಾರಂಭ: ಆತಂಕ ತಂದ ನೀರಮಂಜು

ತಂಬಾಕು ಕಟಾವು ಪ್ರಾರಂಭ: ಆತಂಕ ತಂದ ನೀರಮಂಜು

ಮಾಂಜರಿ 25: ಚಿಕ್ಕೋಡಿ ಮತ್ತು ನಿಪ್ಪಾಣಿ  ತಾಲೂಕಿನಲ್ಲಿನ ವಿವಿಧ ಗ್ರಾಮಗಳಲ್ಲಿ ಕಳೆದ ಅಗಷ್ಟ ಮತ್ತು ಸಪ್ಟೆಂಬರ ತಿಂಗಳಲ್ಲಿ ನಾಟಿ ಮಾಡಿದ ತಂಬಾಕು ಕಟಾವು ಪ್ರಾರಂಭವಾಗಿದ್ದು, ಕಳೆದ ಎರಡು ದಿನಗಳಿಂದ ನೀರಮಂಜು ಸುರಿಯತ್ತಿರುವುದರಿಂದ ತಂಬಾಕು ಉತ್ಪಾದಕರಲ್ಲಿ ಆತಂಕ ಮೂಡಿಸಿದೆ.  

ಡಿಸೆಂಬರ ಕೊನೆಯವಾರ ಮತ್ತು ಇದೆ ತಿಂಗಳ ಮೊದಲವಾರದಲ್ಲಿ ಶೇ 40 ರಷ್ಟು ರೈತರು ಮಾಡಿದ್ದರು. ಉಳಿದ ಶೇ 60 ರಷ್ಟು ರೈತರು ಪೋಷಕ ವಾತಾವರಣ ಇರುವುದರಿಂದ ಕಳೆದ ಎರಡು ದಿನಗಳಿಂದ ಮತ್ತೆ ಪ್ರಾರಂಭಿಸಿದ್ದರು. ಕಳೆದ ಎರಡು ದಿನಗಳಿಂದ ನೀರಮಂಜು ಸುರಿಯುತ್ತಿರುವುದರಿಂದ ರೈತರಲ್ಲಿ ಆತಂಕ ಹೆಚ್ಚಿಸಿದೆ.  ತಂಬಾಕು ಕಟಾವುಮಾಡಿ ಒಣಗಿಸಲು ಹಾಕಿದ್ದು, ತಂಬಾಕು ಒಣಗಲಿಕ್ಕೆ 15 ದಿನಗಳಕಾಲ ಬೇಕು. ಸಂಪೂರ್ಣವಾಗಿ ಒಣಗಿ ಮನೆಗೆ ಯಾವೂದೆ ತೊಂದರೆ ಇಲ್ಲದೆ ಸುರಕ್ಷಿತ ಮನೆಗೆ ಬಂದರೆ ಸಾಕು ಎನ್ನತ್ತಾರೆ ಭೋಜ ಗ್ರಾಮದ ತಂಬಾಕು ಉತ್ಪಾದಕ ಅಪ್ಪಾಸಾಹೇಬ ಚೌಗುಲೆಯವರು.    

ಕಳೆದ 3 ದಶಕಗಳ ಹಿಂದೆ ತಾಲೂಕಿನಲ್ಲಿ ಸುಮಾರು 20 ರಿಂದ 25 ಸಾವಿರ ಹೆಕ್ಟರವರೆಗೆ ತಂಬಾಕು ಉತ್ಪಾದನೆ ಮಾಡುತ್ತಿದ್ದರು. ಸುಮಾರು 6000 ಹೆಕ್ಟರ ಗುರಿಹೊಂದ ಲಾಗಿತ್ತು ಆದರೆ ಈ ಸಾಲಿನಲ್ಲಿ ಮಳೆಯ ಕೋರತೆಯಿಂದಾಗಿ ಚಿಕ್ಕೋಡಿ ತಾಲೂಕಿನಲ್ಲಿ 2,100 ಹೆಕ್ಟರ ಮತ್ತು ನಿಪ್ಪಾಣಿ ತಾಲೂಕಿನಲ್ಲಿ 3,500 ಹೆಕ್ಟರ ಹೀಗೆ ಒಟ್ಟು 5,900 ಹೆಕ್ಟರ ಮಾತ್ರ ಉತ್ಪಾದನೆಯಾಗಿದೆ.  

ಚಿಕ್ಕೋಡಿ ತಾಲೂಕಿನ ಪಶ್ಚಿಮ ಮತ್ತು ಉತ್ತರ ಭಾಗದಲ್ಲಿ ತಂಬಾಕು ಬೆಳೆಯುತ್ತಾರೆ. ಅದರಲ್ಲಿ ಪಶ್ಚಿಮ ಭಾಗದ ನಿಪ್ಪಾಣಿ ಪರಿಸರದ ಅಕ್ಕೊಳ, ಖಡಕಲಾಟ, ಪಟ್ಟಣಕುಡಿ, ಗಳತಗಾ, ತಪಕರವಾಡಿ, ಶಿವಾಪೂರವಾಡಿ, ಸಿದ್ನಾಳ, ಕುನ್ನೂರ, ಹುನ್ನರಗಿ, ಶಿರಗಾಂವ, ಗಿರಗಾಂವ, ರಾಮಪೂರ ಮುಂತಾದ ಗ್ರಾಮಗಳಲ್ಲಿ ಮಾತ್ರ ಹೆಚ್ಚಿನ ಪ್ರಮಾಣದಲ್ಲಿ ಇಂದಿಗೂ ರೈತರು ತಂಬಾಕು ಬೆಳೆಯುತ್ತಾರೆ.  

ತಂಬಾಕು ಬೆಳೆಯಲು ಅಧಿಕ ಪರಿಶ್ರಮದ ಅಗತ್ಯವಿದ್ದು, ನಾಟಿ ಮಾಡಿದ ದಿನದಿಂದ ಬೆಳೆ ಕಟಾವು ಮಾಡಿ ಸಂಸ್ಕರಿಸುವ ತನಕವೂ ತೀವ್ರ ನಿಗಾ ವಹಿಸಬೇಕಾಗುತ್ತದೆ. ಗೋಬ್ಬರ, ಕೀಟನಾಶಕ, ಕೂಲಿಕಾರ್ಮಿಕರ ಸಂಬಳ ಹೀಗೆ ಉತ್ಪದನಾ ವೆಚ್ಚ ಅಧಿಕವಾಗಿದ್ದು, ರೈತರು ಬೆಳೆದ ತಂಬಾಕಿಗೆ ಸಮರ್ಪಕವಾದ ಬೆಲೆ ದೊರಕಬೇಕಷ್ಟೆ ಎನ್ನುತ್ತಾರೆ ರೈತರು. 


ಸುದ್ದಿ ಓದಿ