ಮಾರುತಿ ನಗರದಲ್ಲಿ ಶ್ರೀರಾಮ್ ನವಮಿ ತೊಟ್ಟಿಲೋತ್ಸವ
ರಾಣೇಬೆನ್ನೂರು 12: ಇಲ್ಲಿನ ಮಾರುತಿ ನಗರದ ಶ್ರೀ ರಾಮ್ ದೇವಸ್ಥಾನ ಸಭಾಂಗಣದಲ್ಲಿ ರಾಮನವಮಿ ನಿಮಿತ್ತ ವಾರ್ಷಿಕ ಸಂಪ್ರದಾಯದ ರಾಮ ನವಮಿ ಧಾರ್ಮಿಕ ಜಾಗೃತಿ ಕಾರ್ಯಕ್ರಮವು ನಡೆಯಿತು. ಇದೇ ಸಂದರ್ಭದಲ್ಲಿ ಈ ನಿಮಿತ್ತ ಜೆಸಿಐ ಸಂಸ್ಥೆಯಿಂದ ಮಕ್ಕಳಿಗಾಗಿ ಶ್ರೀರಾಮನ ವೇಷಭೂಷಣ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ವಿಜೇತ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಶ್ರೀರಾಮ್ನಿಗೆ ಸಾಂಪ್ರದಾಯಕವಾಗಿ ಭಕ್ತರು ತೊಟ್ಟಿಲೋತ್ಸವ ನೆರವೇರಿಸಿದರು. ದೇವಸ್ಥಾನ ಸಮಿತಿಯ ನಿರ್ದೇಶಕರಾದ ವಿ.ಬಿ.ನೇಕಾರ, ಪಾಂಡುರಂಗ ನೇಕಾರ, ಜೆಸಿ ಸಂಸ್ಥೆಯ ಪ್ರಕಾಶ ಗಚ್ಚಿನಮಠ, ಲಕ್ಷ್ಮೀ ಅಡಕಿ. ಸರೋಜಾ ಕುಬುಸದ, ಪ್ರವೀಣ ಸುರಹೊನ್ನಿ, ಚೇತನಾ ಪಾಟೀಲ, ಲಕ್ಷ್ಮೀ ವೆಂಕಟೇಶ್ ಕಾಕಿ ಸೇರಿದಂತೆ ಮತ್ತಿತರ ಗಣ್ಯರು, ಸಮಿತಿ ಸದಸ್ಯರು, ಜೆಸಿ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಭಕ್ತ ಸಮುದಾಯಕ್ಕೆ ಪ್ರಸಾದ ನೆರವೇರಿಸಲಾಯಿತು.