ಪ್ರದೇಶ ಕಾಂಗ್ರೆಸ್ ಸಮಿತಿ ಶಿಕ್ಷಕರ ಘಟಕಕ್ಕೆ ಕಾರ್ಯದರ್ಶಿಯಾಗಿ ಶ್ರೀನಿವಾಸಲು ನೇಮಕ
ಬಳ್ಳಾರಿ 16: ಕಾಂಗ್ರೆಸ್ ಪಕ್ಷದ ಅಧ್ಯಕ್ಷರು, ರಾಜ್ಯ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆದೇಶದ ಮೇರೆಗೆ ಬೆಸ್ಟ್ ಸ್ಕೂಲ್ ಶ್ರೀನಿವಾಸ ರವರನ್ನು ಪ್ರದೇಶಕ ಕಾಂಗ್ರೆಸ್ ಸಮಿತಿಯ ಶಿಕ್ಷಕರ ವಿಭಾಗದಲ್ಲಿ ಶಿಕ್ಷಕರ ಘಟಕಕ್ಕೆ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ ಎಂದು ಅಧ್ಯಕ್ಷ ಬಸವರಾಜು ಕುರಿಕಾರ ನೇಮಕಾತಿ ಆದೇಶ ಪತ್ರ ಹೊರಡಿಸಿದ್ದಾರೆ. ನಂತರ ಶ್ರೀನಿವಾಸ ರವರು ಈ ತಕ್ಷಣದಿಂದಲೇ ನೀಡಿರುವ ಜವಾಬ್ದಾರಿಯನ್ನು ವಹಿಸಿಕೊಂಡು ರಾಜ್ಯ ಮತ್ತು ಜಿಲ್ಲಾ ಕಾಂಗ್ರೆಸ್ ಸಮಿತಿಯ ಮಾರ್ಗದರ್ಶನದಲ್ಲಿ ಸ್ಥಳೀಯ ನಾಯಕರ ಸಹಯೋಗದಲ್ಲಿ ಶಿಕ್ಷಕರ ಘಟಕವನ್ನು ಪಕ್ಷ ಸಂಘಟನೆಯ ಬಲವರ್ತನೆಗೆ ಶ್ರಮಿಸಬೇಕೆಂದು ಸೂಚಿಸಲಾಗಿದೆ.