ಶಿಗ್ಗಾವ್

MBBS ವಿದ್ಯಾರ್ಥಿಗೆ ಧನ ಸಹಾಯ ಮಾಡಿದ ಶ್ರೀಕಾಂತ ದುಂಡಿಗೌಡ್ರ

MBBS ವಿದ್ಯಾರ್ಥಿಗೆ ಧನ ಸಹಾಯ ಮಾಡಿದ ಶ್ರೀಕಾಂತ ದುಂಡಿಗೌಡ್ರ

ಶಿಗ್ಗಾವಿ 11 : ತಾಲೂಕಿನ ಮುಗಳಿ ಗ್ರಾಮದಲ್ಲಿ ಅತ್ಯಂತ ಬಡವ  ಜಾನಪದ ಕಲಾವಿದ ಗುರುನಾಥ ಹುಬ್ಬಳ್ಳಿ ಅವರ ಮಗನಾದ ಮಲ್ಲಿಕಾರ್ಜುನ ಗುರುನಾಥ ಹುಬ್ಬಳ್ಳಿ ಎಂಬುವ ವಿದ್ಯಾರ್ಥಿ ಪಿ.ಯು.ಸಿ ವಿಜ್ಞಾನ  ವಿಭಾಗದಲ್ಲಿ  ಅಲ್ಲಿ ಪ್ರತಿಶತ 97 ಅಂಕಗಳನ್ನುಗಳಿಸಿ ತಾಲೂಕಿನ ಕೀರ್ತಿಯನ್ನು ಹೆಚ್ಚಿಸುವುದರ ಜೊತೆಗೆ ನೀಟ್ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನುಗಳಿಸಿ ಸರ್ಕಾರದಿಂದ ಉಚಿತವಾಗಿ ಸೀಟನ್ನು ಪಡೆದ ವಿದ್ಯಾರ್ಥಿಗೆ ಭಾರತ ಸೇವಾ ಸಂಸ್ಥೆಯ ಅಧ್ಯಕ್ಷ  ಶ್ರೀಕಾಂತ ದುಂಡಿಗೌಡ್ರ  ಗೌರವಿಸಿ ಧನ ಸಹಾಯ ಮಾಡಿ  ಸನ್ಮಾನಿಸಿದರು. 

ಈ ಸಂದರ್ಭದಲ್ಲಿ ಮಾತನಾಡಿದ  ನಿವೃತ್ತ ನೌಕರ ಸಿ.ವ್ಹಿ. ಮತ್ತಿಗಟ್ಟಿ  ಮಾತನಾಡಿ ಪ್ರಾಮಾಣಿಕ ವಿದ್ಯಾರ್ಥಿಗಳು ತಂದೆ ತಾಯಿಯ ಋಣ ತೀರಿಸಲು ಸಿಕ್ಕ ಅವಕಾಶದ ಸದುಪಯೋಗ ಪಡೆದ ಮಲ್ಲಿಕಾರ್ಜುನ ಅವರ ಭವಿಷ್ಯ ಉಜ್ವಲವಾಗಲಿ  ಎಂದು ಶುಭ ಹಾರೈಸಿದರು. 

ಈ ಸಂದರ್ಭದಲ್ಲಿ ಹಿರಿಯರಾದ ಡಿ.ಎ. ಗೊಬ್ಬರಗುಂಪಿ, ಜಿ ಎನ್ ಯಲಿಗಾರ, ಶಶಿಧರ ಸುರಗೀಮಠ, ರಾಘವೇಂದ್ರ ದೇಶಪಾಂಡೆ, ಬಸವರಾಜ ಮಿರ್ಜಿ, ಡಾ.ಜಕ್ಕನಗೌಡ್ರ, ಪ್ರಕಾಶ ಗೌಳಿ ಇವರೊಂದಿಗೆ ಗ್ರಾಮದ ಹಿರಿಯರಾದ ನಾಗಪ್ಪ ದುಂಡಪ್ಪನವರ, ಮಹದೇವಪ್ಪ ತಳವಾರ, ಈಶ್ವರಗೌಡ ಪಾಟೀಲ, ಮುತ್ತಪ್ಪ ಮಲ್ಲಣ್ಣವರ, ಉಳವನಗೌಡ ಪಾಟೀಲ, ಸಣ್ಣಕಲ್ಲಪ್ಪ ಶಿವಪುರ, ಶಿವಾನಂದ ಬಿಶೆಟ್ಟಿ ,ನಾಗಾಪ್ಪ ಬಡಿಗೇರ, ಶಿವಲಿಂಗಯ್ಯ ಕಲಸಗೇರಿಮಠ, ಕಲ್ಲಪ್ಪ ಗುಬ್ಬಿ, ಬಸವರಾಜ ಪೂಜಾರ, ನಾಗಪ್ಪ ಕಬನೂರ, ಶಂಕರ ಗೋಬ್ಬಿ ಹಾಗೂ ಗ್ರಾಮದ ಹಿರಿಯರು ,ಮುಖಂಡರು ಯುವಕರು ಉಪಸ್ಥಿತರಿದ್ದರು. 


ಸುದ್ದಿ ಓದಿ