ಶಿರಗುಪ್ಪಿಯಲ್ಲಿ ಶ್ರೀ ಸ್ವಾಮಿ ಸಮರ್ಥರ ರಥಯಾತ್ರೆ ಭಕ್ತಿಭಾವದ ಸಂಭ್ರಮ
ಕಾಗವಾಡ 15: ಶ್ರೀ ದತ್ತಾತ್ರೇಯರ ನಾಲ್ಕನೇ ಅವತಾರವಾಗಿರುವ ಶ್ರೀ ಸ್ವಾಮಿ ಸಮರ್ಥ ಮಹಾರಾಜರು, ಸಮಾಜದ ಎಲ್ಲರಿಗೂ ರಕ್ಷಣೆಯ ಅಭಯ ಮಂತ್ರ ನೀಡಿದವರು. ಅಪಾರ ಭಕ್ತರಲ್ಲಿ ಆತ್ಮಬಲ ತುಂಬಿದವರು ಎಂದು ಗೋವಾದ ಶಿನೋಳಿ ಗ್ರಾಮದ ಶ್ರೀ ಸ್ವಾಮಿ ಸಮರ್ಥ ಸೇವಾ ಕೇಂದ್ರದ ಅಧ್ಯಕ್ಷರು ಹಾಗೂ ಬೃಹ್ಮಾಂಡ ನಾಯಕ ಎಂಬ ಸಮರ್ಥ ಮಹಾರಾಜರ ಕುರಿತಾದ ಚಲನಚಿತ್ರದ ಮುಖ್ಯ ಪಾತ್ರಧಾರಿ ನೀಲೇಶ್ ವೇರ್ನೆಕರ್ ಹೇಳಿದ್ದಾರೆ.
ಗೋವಾದಿಂದ ಅಕ್ಕಲಕೋಟದ ವರೆಗೆ ಹಮ್ಮಿಕೊಂಡಿರುವ ಸ್ವಾಮಿ ಸಮರ್ಥರ ರಥಯಾತ್ರೆಯು ಮಾರ್ಗಮಧ್ಯೆದ ತಾಲೂಕಿನ ಶಿರಗುಪ್ಪಿಗೆ ಶನಿವಾರ ದಿ. 13 ರಂದು ಆಗಮಿಸಿದ ವೇಳೆ ಸದ್ಭಕ್ತರನ್ನು ಉದ್ದೇಶಿಸಿ, ಅವರು ಮಾತನಾಡುತ್ತಿದ್ದರು.
ಶಿರಗುಪ್ಪಿ ಸ್ವಾಮಿ ಸಮರ್ಥ ಸೇವಾ ಕೇಂದ್ರದ ಸಂಸ್ಥಾಪಕ ಅಧ್ಯಕ್ಷೆ ಧನಶ್ರೀ ಸುಳಕೂಡೆ ಮಾತನಾಡಿ, ಶಿರಗುಪ್ಪಿಯಲ್ಲಿ ಶ್ರೀ ಸ್ವಾಮಿ ಸಮರ್ಥ ಶಾಖೆಯನ್ನು ಆರು ತಿಂಗಳ ಹಿಂದೆ ಪ್ರಾರಂಭಿಸಲಾಗಿದೆ. ಇಲ್ಲಿ ಎಲ್ಲ ಸಮಾಜದವರು ಪ್ರತಿದಿನ ಪ್ರಾರ್ಥನೆ, ಮಂತ್ರೋಪಚಾರ ಹಾಗೂ ಸಮರ್ಥರ ಸಂದೇಶವನ್ನು ಪ್ರತಿಯೊಬ್ಬರಿಗೂ ತಲುಪಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಈ ವೇಳೆ ಸ್ವಾಮಿ ಸಮರ್ಥ ಸೇವಾ ಕೇಂದ್ರದ ಸಂಸ್ಥಾಪಕ ಅಧ್ಯಕ್ಷೆ ಧನಶ್ರೀ ಸುಳಕೂಡೆ, ಸಮಿತಿಯ ಸದಸ್ಯರಾದ ಹರ್ಷಲಾ ಮುಂಜೆ, ಮಹಾನಂದ್ ಪಾಟೀಲ್, ಅನಿತಾ ಚೌಗುಲೆ, ಶೀಲಾ ಮಲಾಯಿ, ಸುನೀತಾ ಚೌಗುಲೆ, ಅಪರ್ಣಾ ಪಾಟೀಲ್, ಕಾರ್ತಿಕ್ ಮುಂಜೆ, ಸರ್ವೇಶ್ ಚೌಗುಲೆ, ಗಣೇಶ್ ಪವಾರ್, ಆಯುಷ್ ಸುಳಕೂಡೆ ಸೇರಿದಂತೆ ಸ್ವಾಮಿ ಸಮರ್ಥ ಸೇವಾ ಸಮಿತಿಯ ಎಲ್ಲ ಸದಸ್ಯರು, ಭಕ್ತರು, ಗ್ರಾಮಸ್ಥರು ಉಪಸ್ಥಿತರಿದ್ದರು.