ರಾಷ್ಟ್ರೀಯ

ಆಯೋಧ್ಯೆ ವಿಮಾನ ನಿಲ್ದಾಣಕ್ಕೆ ಶ್ರೀರಾಮನ ಹೆಸರು.. ಯೋಗಿ ಸರ್ಕಾರ ತೀರ್ಮಾನ

ಆಯೋಧ್ಯೆ ವಿಮಾನ ನಿಲ್ದಾಣಕ್ಕೆ ಶ್ರೀರಾಮನ ಹೆಸರು.. ಯೋಗಿ ಸರ್ಕಾರ ತೀರ್ಮಾನ

ಲಕ್ನೋ, ನವೆಂಬರ್ 25:ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಗೊಳ್ಳುತ್ತಿರುವ  ಹಿನ್ನೆಲೆಯಲ್ಲಿ    ಪವಿತ್ರ ನಗರಿಯಲ್ಲಿ  ವಿಮಾನ ನಿಲ್ದಾಣ ನಿರ್ಮಿಸಲು ಉತ್ತರ ಪ್ರದೇಶ ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆಯೂ ಪ್ರಾರಂಭವಾಗಿದೆ.  ಈಗ ವಿಮಾನ ನಿಲ್ದಾಣದ ಹೆಸರಿಗೆ ಸಂಬಂಧಿಸಿದಂತೆ ಸರ್ಕಾರ ಪ್ರಮುಖ ನಿರ್ಧಾರ ಕೈಗೊಂಡಿದೆ.   ಅಯೋಧ್ಯೆ ನಗರದಲ್ಲಿರುವ ವಿಮಾನ ನಿಲ್ದಾಣಕ್ಕೆ  ಭಗವಾನ್  ಶ್ರೀ ರಾಮನ ಹೆಸರಿಸಲು ಉತ್ತರ ಪ್ರದೇಶ ಸಚಿವ ಸಂಪುಟ ನಿರ್ಧರಿಸಿದೆ.

ಶ್ರೀ ರಾಮ ಜನ್ಮಭೂಮಿ ಅಯೋಧ್ಯೆ ನಗರದ ವಿಮಾನ ನಿಲ್ದಾಣಕ್ಕೆ  ಮರ್ಯಾದಾ   ಪುರುಷೋತ್ತ ಶ್ರೀರಾಮ್ ಅವರ ಹೆಸರನ್ನು ಇಡಲು ನಿರ್ಧರಿಸಿದ್ದಾರೆ.

ಅಯೋಧ್ಯೆಯಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ಭೂಸ್ವಾಧೀನವನ್ನೂ ಸರ್ಕಾರ  ಪ್ರಾರಂಭಿಸಿದೆ. ಭೂಸ್ವಾಧೀನ ಪ್ರಕ್ರಿಯೆ  ಪೂರ್ಣಗೊಂಡ ನಂತರ, ಕೇಂದ್ರ ನಾಗರಿಕ ವಿಮಾನಯಾನ  ಸಚಿವಾಲಯ ವಿಮಾನ ನಿಲ್ದಾಣ ನಿರ್ಮಾಣವನ್ನು ಕೈಗೊಳ್ಳಲಿದೆ. ಅಯೋಧ್ಯ ವಿಮಾನ ನಿಲ್ದಾಣಕ್ಕೆ ಭಗವಾನ್ ರಾಮನ ಹೆಸರಿಡಲು  ಸರ್ಕಾರ ನಿರ್ಧರಿಸಿರುವುದಕ್ಕೆ ಹಿಂದೂ ಸಂಘಟನೆಗಳು  ಹಾಗೂ  ಸಂತರು ಸಂತಸ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ, ಅಯೋಧ್ಯೆಯಲ್ಲಿ  ದೀಪಾವಳಿಯ  ಅಂಗವಾಗಿ ರಾಮ ಜನ್ಮಭೂಮಿ ಪ್ರದೇಶದಲ್ಲಿ ದೊಡ್ಡ  ಸಂಖ್ಯೆಯ ದೀಪಗಳನ್ನು ಬೆಳಗಿಸಲಾಯಿತು. ಇದು ಗಿನ್ನೆಸ್ ಬುಕ್ ಆಫ್ ವರ್ಲ್ಡ್  ದಾಖಲೆಯಲ್ಲಿ ಸೇರಿತು.   ಕಳೆದ ಆಗಸ್ಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಮ ಜನ್ಮಭೂಮಿಯಲ್ಲಿ ಶಿಲಾ ಪೂಜೆ, ಭೂಮಿ ಪೂಜೆ ಹಾಗೂ  ಕರ್ಮ ಶಿಲಾ ಪೂಜೆ ನರವೇರಿಸಿದ್ದರು.

ಭೂಮಿ ಪೂಜೆಯ ಭಾಗವಾಗಿ  ರಾಮಮಂದಿರ  ನಿರ್ಮಾಣಕ್ಕೆ  ಪ್ರಧಾನಿ ಮೋದಿ  ಶಂಕುಸ್ಥಾಪನೆ ನೆರವೇರಿಸಿದ್ದರು.   ಅಂದಿನಿಂದ ಅಯೋಧ್ಯೆಗೆ ಹರಿದು ಬರುತ್ತಿರುವ ಭಕ್ತರ ಸಂಖ್ಯೆಯೂ ಹೆಚ್ಚಾಗಿದೆ.  ರಾಮ ಮಂದಿರ  ನಿರ್ಮಾಣ ಪೂರ್ಣಗೊಂಡ ನಂತರ ಭಕ್ತರು ಆಗಮಿಸುವ ಸಂಖ್ಯೆ ಮತ್ತಷ್ಟು  ಹೆಚ್ಚಲಿದೆ ಎಂದು ನಿರೀಕ್ಷಿಸಿರುವ ಉತ್ತರ ಪ್ರದೇಶ ಸರ್ಕಾರ,  ವಿಮಾನ ನಿಲ್ದಾಣ ನಿರ್ಮಾಣವನ್ನು ಪ್ರಾರಂಭಿಸಿದೆ.

ಸುದ್ದಿ ಓದಿ