ಬೆಳಗಾವಿ

ಶ್ರೀ ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವ

ಶ್ರೀ ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವ

ಲೋಕದರ್ಶನ ವರದಿ 

ಹರಗೂಗೇರಿ 29: ಪಟ್ಟಣದ ವಿವೇಕಾನಂದ ನಗರದಲ್ಲಿರುವ   ಉತ್ತರಾಧಿ ಮಠದ ಶಾಖೆ ರಾಘವೇಂದ್ರ ಸ್ವಾಮಿಗಳ ಮೃತ್ತಿಕಾ ಬೃಂದಾವನ ಸನ್ನಿಧಿಯಲ್ಲಿ 355ನೇ ಆರಾಧನಾ ಮಹೋತ್ಸವದ ಪೂರ್ವಾರಾಧನೆ ಶನಿವಾರ ನಡೆಯಿತು. ಈ ಸಂದರ್ಭದಲ್ಲಿ ವೇದ ಪಾರಾಯಣ, ಪಂಚಾಮೃತ ಅಭಿಷೇಕ, ಅಷ್ಟೋತ್ತರ, ಮಹಾ ಮಂಗಳಾರತಿ, ಪಾಲಕಿ ಸೇವೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಋಗ್ವೇದ, ಯಜುರ್ವೇದ, ಸಾಮವೇದ ಹಾಗೂ ಅಥರ್ವವೇದಗಳ ಆಯ್ದ ಮಂತ್ರಗಳನ್ನು ಪಂಡಿತರು ಸಾಮೂಹಿಕವಾಗಿ ಪಠಿಸಿದರು. ಭಾನುವಾರ ಮಧ್ಯಾರಾಧನೆ ಹಾಗೂ ಸೋಮವಾರ ಉತ್ತರಾಧನೆ ಅಂಗವಾಗಿ ವಿವಿಧ ಪೂಜೆ, ಪಾಲಕಿ ಸೇವೆ, ಮಹಾಮಂಗಳಾರತಿ, ಅನ್ನಸಂತರೆ​‍್ಣ ಮತ್ತು ದಾಸವಾಣಿ ಕಾರ್ಯಕ್ರಮಗಳು ನಡೆಯಲಿವೆ. 


ಸುದ್ದಿ ಓದಿ