ಏಳು ಮಕ್ಕಳ ತಾಯಮ್ಮ ದೇವಸ್ಥಾನದಲ್ಲಿ ಶ್ರೀ ದೇವಿ ಶರನ್ನವರಾತ್ರಿ ಉತ್ಸವ

ಏಳು ಮಕ್ಕಳ ತಾಯಮ್ಮ ದೇವಸ್ಥಾನದಲ್ಲಿ ಶ್ರೀ ದೇವಿ ಶರನ್ನವರಾತ್ರಿ ಉತ್ಸವ

ಲೋಕದರ್ಶನ ವರದಿ

ಬಳ್ಳಾರಿ,ಅ.10: ನಗರದ ಹೊಸಪೇಟೆ ರಸ್ತೆಯಲ್ಲಿರುವ ಏಳು ಮಕ್ಕಳ ತಾಯಮ್ಮ ದೇವಸ್ಥಾನದಲ್ಲಿ ಶ್ರೀ ದೇವಿ ಶರನ್ನವರಾತ್ರಿ ಉತ್ಸವಗಳನ್ನು ಬುಧವಾರ ತಾಯಿಯ ವಿಗ್ರಹಗಳನ್ನು ನಗರದ ಅದಿದೇವತೆ ಶ್ರೀ ಕನಕದುರ್ಗಮ್ಮ ದೇವಸ್ಥಾನದಿಂದ ಬೆಂಗಳೂರು ರಸ್ತೆ, ಬ್ರೂಸ್ಪೇಟೆ ಮಾರ್ಗವಾಗಿ ಏಳು ಮಕ್ಕಳ ತಾಯಿ ದೇವಸ್ಥಾನಕ್ಕೆ ಮೆರವಣಿಗೆ ಮೂಲಕ ವಿಜೃಂಭಣೆಯಿಂದ ತಾಳ, ಮೇಳ, ಪೂರ್ಣ ಕುಂಭದೊಂದಿಗೆ ದೇವಸ್ಥಾನಕ್ಕೆ ತಲುಪಿತು. ಇಂದಿನಿಂದ ಪ್ರತಿದಿನ ಹೋಮ, ಹವನಗಳೊಂದಿಗೆ ಪೂಜಾ ಕೈಂಕರ್ಯಗಳನ್ನು ನೇರವೇರಿಸಲಾಗುವುದು. ಬ್ರಹ್ಮಿಣಿ ಹೋಮ, ಅ.11ರಂದು ವೈಷ್ಣವಿ ಹೋಮ, 12ರಂದು ಕೌಮಾರಿ ಹೋಮ, 13ರಂದು ನಾರಸಿಂಹಿಣಿ ಹೋಮ, 14ರಂದು ಮಹೇಂದ್ರಿ ಹೋಮ, 15ರಂದು ಬಗಳಾಮುಖಿ ಹೋಮ, 16ರಂದು ಕಾತ್ಯಾಯಿನಿ ಮಾತಂಗಿ ಹೋಮ, 17ರಂದು ಮಹಾಕಾಳಿ ದುರ್ಗ ಹೋಮ, 18ರಂದು ಚಂಡಿಹೋಮ ಹಾಗೂ 19ರಂದು ವಿಜಯದಶಮಿ ಕಮಲಾತ್ಮಿಕ ಪೂಣರ್ಾಹುತಿ ಹೋಮವನ್ನು ಜರುಗಿಸಲು ಭಕ್ತಾದಿಗಳು ಸಹಕಾರ ನೀಡಿ, ಕನಕದುರ್ಗಮ್ಮ ದೇವರ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನದ ಟ್ರಸ್ಟಿಗಳಾದ ಗೋವಿಂದರಾಜುಲು ವಿನಂತಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ 16 ಪೂರ್ಣಕುಂಭಗಳೊಂದಿಗೆ ಭವ್ಯ ಮೆರವಣಿಗೆಯನ್ನು ಏರ್ಪಡಿಸಿದ್ದರು.


ಸುದ್ದಿ ಓದಿ