ಸೌಂದತ್ತಿ

ದೈಹಿಕ, ಬೌದ್ಧಿಕ ಬೆಳವಣಿಗೆಗೆ ಕ್ರೀಡೆಗಳು ಅತ್ಯಂತ ಸಹಕಾರಿ: ವೈದ್ಯ

ದೈಹಿಕ, ಬೌದ್ಧಿಕ ಬೆಳವಣಿಗೆಗೆ ಕ್ರೀಡೆಗಳು ಅತ್ಯಂತ ಸಹಕಾರಿ: ವೈದ್ಯ

ಸವದತ್ತಿ 04: ದೈಹಿಕ ಮಾನಸಿಕ ಹಾಗೂ ಬೌದ್ಧಿಕ ಬೆಳವಣಿಗೆಗೆ ಕ್ರೀಡೆಗಳು ಅತ್ಯಂತ ಸಹಕಾರಿ ಯಾಗುತ್ತದೆ. ಆದ್ದರಿಂದ ದಿನನಿತ್ಯದ ಜೀವನದಲ್ಲಿ ಕ್ರೀಡೆಗಳನ್ನು ಅಳವಡಿಸಿಕೊಂಡು ಲವಲವಿಕೆಯಿಂದ ಇರಬೇಕು ಎಂದು ಕಾಂಗ್ರೆಸ್ ಮುಖಂಡ ವಿಶ್ವಾಸ  ವೈದ್ಯ ಹೇಳಿದರು. 

ಮಬನೂರ ಗ್ರಾಮದ ಕರೆಮ್ಮಾದೇವಿ ಜಾತ್ರಾ ಮಹೋತ್ಸವ ಪ್ರಯುಕ್ತವಾಗಿ ಎಸ್ ಆರ್ ಬಾಯ್ಸ್‌ ಹಾಗೂ ಕರಿಸಿದೇಶ್ವರ ಯುವ ಬಳಗ ಇವರ ಆಶ್ರಯದಲ್ಲಿ ದ್ವಿತೀಯ ಬಾರಿಗೆ 55 ಕೆಜಿ ವಿಶ್ವಾಸ್ ಟ್ರೋಫಿ ಪ್ರೋ ಮ್ಯಾಟ್ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಕ್ಕಿರ​‍್ಪ ಹದ್ದನ್ನವರ, ರಾಮಚಂದ್ರ ಪಟಾತ, ಪಡೆಪ್ಪ ನರೀ, ಯಲ್ಲಪ್ಪ ನರಿ, ಬಿ.ಎಸ್ ಅಗಸಿಮನಿ ಇತರರು ಉಪಸ್ಥಿತರಿದ್ದರು.  

ನಿರ್ಣಾಯಕರಾಗಿ ದಾನು ಗದಗಿನ, ಪರುಶುರಾಮ ಕದಂ ಆಗಮಿಸಿದ್ದರು  

ಒಟ್ಟು 16 ತಂಡಗಳು ಬಾಗವಹಿಸಿದ್ದವು. ಅದರಲ್ಲಿ ಪ್ರಥಮ ಮಬನೂರ ಎಸ್‌.ಆರ್‌.ಬಾಯ್ಸ್‌, ದ್ವಿತೀಯ ಬಸಿಡೋನಿಯ ಪವನಪುತ್ರ ತಂಡ ತೃತಿಯ ಅನ್ನಿಗೆರಿಯ ಬಸವೆಶ್ವರ ಸ್ಪೊಡ್ಸ್‌ ಕ್ಲಬ್ ಬಹುಮಾನ ಪಡೆದರು. ಫಕ್ಕಿರ​‍್ಪ ಹಟ್ಟಿ ಕಾರ್ಯಕ್ರಮ ನಿರೂಪಿಸಿದರು. 


ಸುದ್ದಿ ಓದಿ