ಮಕ್ಕಳು ದೈಹಿಕವಾಗಿ ಬಲಿಷ್ಠರಾಗಲು ಕ್ರೀಡೆ ಅಗತ್ಯ: ಮಲೇದ
ಸಿಂದಗಿ 26: ಸದೃಢ ದೇಹದಲ್ಲಿ ಸದೃಢ ಮನಸ್ಸು ಇರುವುದು. ಮಕ್ಕಳಿಗೆ ಕ್ರಿಡಾಂಗಣದಲ್ಲಿ ಆಟ ಆಡುವುದರ ಮೂಲಕ ಮಕ್ಕಳು ದೈಹಿಕವಾಗಿ ಬಲಿಷ್ಠರಾಗುವರು. ಯಾವುದೇ ಅನಾರೋಗ್ಯಕ್ಕೆ ಒಳಗಾಗದೆ ಮಾನಸಿಕ ವಿಕಾಸಕ್ಕೆ ಪ್ರೇರೆಪಿಸುವುದು ಎಂದು ದೈಹಿಕ ಶಿಕ್ಷಕ ಸಂಗಮೇಶ ಮಲೇದ ಅಭಿಮತ ವ್ಯಕ್ತಪಡಿಸಿದರು.
ಪಟ್ಟಣದ ಹೊರವಲಯ ಭೀಮಾ ಶಾಲೆಯಲ್ಲಿ ಹಮ್ಮಿಕೊಂಡಿರುವ ಕ್ರೀಡಾ ಮಹೋತ್ಸವದಲ್ಲಿ ಕ್ರೀಡಾಜ್ಯೋತಿಗೆ ಚಾಲನೆ ನೀಡಿ ಮಾತನಾಡಿ, ಇನ್ನೂ ಗುಂಪು ಆಟಗಳಾದ ಖೋಖೋ, ವಾಲಿಬಾಲ, ಥ್ರೂಬಾಲ, ಫುಟ್ಬಾಲ್, ಹ್ಯಾಂಡ್ ಬಾಲ್ ಆಡುವುದರ ಮೂಲಕ ಮಕ್ಕಳಲ್ಲಿ ಒಗ್ಗಟ್ಟಿನ ಮನೋಭಾವ ಬೆಳೆಯುವುದರ ಜೋತೆಗೆ ದೈಹಿಕವಾಗಿ ಗಟ್ಟಿಮುಟ್ಟರಾಗುವರು ಎಂದರು.
ಶಾಲೆಯ ಪ್ರಾಂಶುಪಾಲೆ ಹೀಮಾಬಿಂದು ಮಾತನಾಡಿ, ಮಕ್ಕಳು ಸರ್ವತೋಮುಖ ಅಭಿವೃದ್ದಿಗಾಗಿ ಪಾಠದ ಜೋತೆಗೆ ಆಟವನ್ನು ಆಡುವುದರಿಂದ ಮಕ್ಕಳ ಕಲಿಕೆಗೆ ಸಹಕಾರಿಯಾಗುವುದು ಎಂದು ಹೇಳಿದರು.
ಸಂಸ್ಥೆಯ ಅಧ್ಯಕ್ಷ ವಿಠ್ಠಲ ಕೊಳ್ಳೂರ ಸಹನಿರ್ದೇಕರಾದ ಡಾ. ಎಂ.ಎಂ.ಪಡಶೆಟ್ಟಿ, ಜಿ.ಕೆ. ಪಡಗಾನೂರ, ಶ್ರೀಮಂತ್ ಮಲ್ಲೆದ, ಭೀಮಾಶಂಕರ ತಾರಾಪುರ, ಪ್ರಶಾಂತ ಕಮತಗಿ, ದತ್ತು ಮಾವೂರ, ಶರಣು ಮಾವೂರ, ಶಾಂತು ಕುಂಬಾರ ಉಪಸ್ಥಿತರಿದ್ದರು.