ಶಿಗ್ಗಾವ್

ದೇಹದ ಆರೋಗ್ಯಕ್ಕೆ ಕ್ರೀಡೆಗಳು ಅವಶ್ಯ: ಪಿಎಸ್ಐ ಸುಜಾತಾ ಪಾಟೀಲ

ದೇಹದ ಆರೋಗ್ಯಕ್ಕೆ ಕ್ರೀಡೆಗಳು ಅವಶ್ಯ: ಪಿಎಸ್ಐ ಸುಜಾತಾ ಪಾಟೀಲ

ಲೋಕದರ್ಶನ ವರದಿ

ಶಿಗ್ಗಾವಿ 29: ದೇಹದ ಆರೋಗ್ಯಕ್ಕೆ ಕ್ರೀಡೆಗಳು ಅವಶ್ಯ, ದಿನನಿತ್ಯ ದೇಹದ ಸದೃಢತೆಗೆ ಯೋಗ, ಪ್ರಾಣಾಯಾಮದ ಜೊತೆಗೆ ಕ್ರೀಡೆಗಳನ್ನು ಆಡಿ ಮನಸ್ಸನ್ನು ಹತೋಟಿಯಲ್ಲಿಡಲು ಸಾದ್ಯವಿದೆ ಆದ್ದರಿಂದ ಮಕ್ಕಳಿಗೆ ಕ್ರೀಡೆಗಳು ಅವಶ್ಯವಾಗಿವೆ ಎಂದು ತಡಸ ಪೋಲೀಸ್ ಠಾಣೆಯ ಪಿಎಸ್ಐ ಸುಜಾತಾ ಪಾಟೀಲ ಹೇಳಿದರು.

ಪಟ್ಟಣದ ಹೊರವಲಯದಲ್ಲಿರುವ ಫಿನಿಕ್ಸ್ ಇಂಟನ್ಯರ್ಾಷನಲ್ ಶಾಲೆಯಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಕ್ರೀಡಾ ದಿನ ಹಾಗೂ ವಿದ್ಯಾರ್ಥಿಗಳ ಪದಗ್ರಹಣ ಕಾರ್ಯಕ್ರಮವನ್ನ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳ ಮಾನಸಿಕ ಸಾಮಥ್ರ್ಯವನ್ನ ಹಿಡಿದಿಡುವ ಕಡೆಗೆ ಪಾಲಕರು, ಶಿಕ್ಷಕರು ಗಮನ ಹರಿಸಬೇಕು, ಮಕ್ಕಳಿಗೆ ಇತ್ತೀಚೆಗೆ ದೈಹಿಕ ಸಾಮಥ್ರ್ಯ ಕಡಿಮೆಯಾಗುತ್ತಿದೆ ಹೀಗಾಗಿ ಮಕ್ಕಳೂ ಸಹಿತ ಕ್ರೀಡೆಗಳಲ್ಲಿ ಭಾಗವಹಿಸಿ ತಮ್ಮ ದೈಹಿಕ ಸಾಮಥ್ರ್ಯವನ್ನ ವ್ಯಕ್ತಪಡಿಸಬೇಕು ಹಾಗೂ ಕರಾಟೆ, ಕಬ್ಬಡ್ಡಿ ಮತ್ತು ವಿವಿಧ ಕ್ರೀಡೆಗಳಲ್ಲಿ ಹೆಚ್ಚು ಗಮನ ಹರಿಸಬೇಕು, ಮಕ್ಕಳಿಗೆ ಪೋಲಿಸ್ ಇಲಾಖೆಯ ಕುರಿತು ಮಾಹಿತಿಯ ಜೊತೆಗೆ ಜ್ಞಾನವಿರಬೇಕೆಂದರು.

ಸಂಸ್ಥೆಯ ಅದ್ಯಕ್ಷ ಡಾ. ಎಂ ಎಂ ತಿರ್ಲಾಪೂರ ಮಾತನಾಡಿ, ಮೊದಲು ಮಕ್ಕಳಿಗೆ ಮನಸ್ಥಿತಿಗಳು ಸರಿಯಾಗಿರಬೇಕು ಜೊತೆಗೆ ದೈಹಿಕ ಸದೃಡತೆಗೆ ಗಮನ ಹರಿಸಬೇಕು, ಪಾಲಕರು ಸಹಿತ ಕ್ರೀಡೆಗಳಲ್ಲಿ ಭಾಗವಹಿಸಲು ಮಕ್ಕಳನ್ನ ಪ್ರೇರೆಪಿಸಬೇಕು, ಸಾಧನೆಗಳು ಸಲೀಸಾಗಿ ಆಗೋಲ್ಲ, ಅದಕ್ಕೆ ಪೂರಕ ಶ್ರಮ, ಶ್ರದ್ದೆ ಬೇಕು, ಸಾಧನೆಗೆ ವಯಸ್ಸಿನ ನಿಭಂದನೆಗಳು ಇಲ್ಲ, ಸಾಧನೆಗೆ ನಿರ್ದಿ ಷ್ಟ ಗುರಿ ಮುಖ್ಯ, ಛಲವಿದ್ದರೆ ಗುರಿ ಸಾಧನೆ ಸನಿಹವಾಗುತ್ತದೆ ಎಂದು ಕಿವಿ ಮಾತು ಹೇಳಿದರು.

ಸಂಸ್ಥೆಯ ಉಪಾದ್ಯಕ್ಷ ನರಹರಿ ಕಟ್ಟಿ ಮಾತನಾಡಿ, ರಾಜ ಮಹಾರಾಜರ ಕಾಲದಿಂದ ಕ್ರೀಡೆಗಳು ನಡೆದುಕೊಂಡ ಬಂದಿವೆ, ಅಂದು ತಾಲೀಮುಗಳು ಎನ್ನುತ್ತಿದ್ದ ಆಟಗಳು ಇಂದು ಕ್ರೀಡೆಗಳಾಗಿವೆ, ಕ್ರೀಡೆಗಳಿಗೆ ಅಪಾರ ಶಕ್ತಿಯಿದೆ, ಮನಸ್ಸನ್ನು ಉಲ್ಲಾಸಭರಿತವಾಗಿಡುವ ಶಕ್ತಿ ಕ್ರೀಡೆಗಳಿಗೆ ಇದೆ ಎಂದರು. ಪ್ರಾಂಶುಪಾಲರಾದ ಮಂಜುನಾಥ ಕೆ ಎಚ್ ಅದ್ಯಕ್ಷೀಯ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಕ್ರೀಡಾಪಟುಗಳಿಗೆ ಪ್ರತಿಜ್ಞಾವಿಧಿ ಭೋಧಿಸಲಾಯಿತು, ನಂತರ ವಿದ್ಯಾರ್ಥಿಗಳ ಪದಗ್ರಹಣ ಕಾರ್ಯಕ್ರಮ ಜರುಗಿತು.

ಸಂಸ್ಥೆಯ ಕಾರ್ಯದರ್ಶಿ ಡಾ. ರಾಣಿ ಎಂ ತಿಲರ್ಾಪೂರ, ಉಪಪ್ರಾಚಾರ್ಯ ಗಿರೀಶ್ ಡಿ ಬಿ ಸೇರಿದಂತೆ ಶಾಲೆಯ ಶಿಕ್ಷಕರು, ಪಾಲಕರು, ವಿದ್ಯಾರ್ಥಿಗಳು, ಸಿಬ್ಬಂದಿಗಳು ಇದ್ದರು 

ಸುದ್ದಿ ಓದಿ