ಇಂಡಿ

ಕಾಮಗೊಂಡ ಅಭಿಮಾನಿ ಬಳಗದ ಕಾರ್ಯಕರ್ತರಿಂದ ವಿಶೇಷ ಪೂಜೆ

ಕಾಮಗೊಂಡ ಅಭಿಮಾನಿ ಬಳಗದ ಕಾರ್ಯಕರ್ತರಿಂದ ವಿಶೇಷ ಪೂಜೆ

ಇಂಡಿ18: ಜೆಡಿಎಸ್ ಮುಖಂಡ ಮಂಜುನಾಥ ಕಾಮಗೊಂಡ ಅವರಿಗೆ ಕೊರೋನಾ ದೃಢಪಟ್ಟಿದ್ದು ಅವರು ಬೇಗನೆ ಗುಣಮುಖರಾಗಲೆಂದು ಜೆಡಿಎಸ್ ಕಾರ್ಯಕರ್ತರು ಹಾಗೂ ಕಾಮಗೊಂಡ ಅಭಿಮಾನಿ ಬಳಗದ ಕಾರ್ಯಕರ್ತರು ತಾಲೂಕಿನ ಸಾತಲಗಾಂವ ಗ್ರಾಮದ ಶಿವಯೋಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಿದರು. 

ಶರಣು ಆದಗೊಂಡ, ಮಹೇಶ ನಾರಾಯಣ್ ಮಾತನಾಡಿ ಸಮಾಜ ಸೇವಕರಾದ ಮಂಜು ಕಾಮಗೊಂಡ ಅವರು ತಾಲೂಕಿನಲ್ಲಿ ಪ್ರವಾಹ ಬಂದಾಗ ಸಂಸತ್ರಸ್ಥರ ನೆರವಿಗೆ ಧಾವಿಸಿದ್ದರು. ಕೆಲವು ಹಳ್ಳಿಗಳಲ್ಲಿ ಆಕಸ್ಮಿಕವಾಗಿ ಮನೆಗೆ ಬೆಂಕಿ ತಗುಲಿ ಮನೆ ಸುಟ್ಟುಕೊಂಡವರಿಗೆ ಆಹಾರ ಧಾನ್ಯ, ಹಾಸಿಗೆ ಹೊದಿಕೆ ಸೇರಿದಂತೆ ಒಂದಷ್ಟು ಧನಸಹಾಯ ಮಾಡಿದ್ದಾರೆ. ಅಲ್ಲದೆ ಕಷ್ಟ ಎಂದು ಹೇಳಿಕೊಂಡು ಬಂದವರಿಗೆ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ. ಇಂದು ಅವರಿಗೆ ಕೊರೋನಾ ದೃಢಪಟ್ಟಿದ್ದು ಅವರು ಬೇಗನೆ ಗುಣಮುಖರಾಗಿ ಮತ್ತೆ ಜನಸೇವೆ ಮಾಡಲು ಬರಲಿ ಎಂದು ದೇವರಿಗೆ ವಿಶೇಷ ಪೂಜೆ ಸಲ್ಲಿಸಿರುವುದಾಗಿ ತಿಳಿಸಿದರು. 

ಶಿವಯೋಗೆಪ್ಪ ತಾಪಸೆ, ಶಿವಕುಮಾರ ಬರಡೋಲ, ಮುತ್ತು ಆದಗೊಂಡ, ಸಂಗು ಸಗರಗೊಂಡ, ಅಲ್ಲಾವುದ್ದಿನ್ ಮುಲ್ಲಾ, ಅಮೋಗಿ ಬಮಗೊಂಡ, ಕುಮಾರ ಬಿರಾದಾರ, ಅಮೋಗಿ ಒಡೆಯರ್, ಸಾಗರ್ ಸರೂರ, ಸುರೇಶ ಗುಂಜಟ್ಟಿ, ಸಿದ್ದು ಹದರಿ, ಮಹೇಶ ಕಣದಾಳ, ಗುರು ಗುಂಜಟ್ಟಿ, ಕುಮಾರ ನಾವಿ, ರಫೀಕ್ ಕಾಖಂಡಕಿ, ಮಾದುಲಿಂಗ ಒಡೆಯರ್, ಶ್ರೀಕಾಂತ ಹಿರೇಮಠ, ಸಿದ್ದು ಹಿಕ್ಕಲಗುಂತಿ, ಮಲಕಾರಸಿದ್ದ ಬಡಿಗೇರ, ಚಂದು ಮಡಗೊಂಡ, ಮಹೇಶ ಬಿರಾದಾರ, ಶರಣು ಆದಗೊಂಡ, ಸತೀಶ ಇಂಡಿ ಸೇರಿದಂತೆ ಎಪ್ಪತ್ತಕ್ಕೂ ಹೆಚ್ಚು ಯುವಕರು ಪೂಜೆಯಲ್ಲಿ ಭಾಗಿಯಾಗಿದ್ದರು. 

ಸುದ್ದಿ ಓದಿ