ಶ್ರೀ ಕುಮಾರಸ್ವಾಮಿ ದೇವಸ್ಥಾನದಲ್ಲಿ ಸಂಭ್ರಮದ ಆಡಿ ಕೃತಿಕ ಮಹೋತ್ಸವ
ಬಳ್ಳಾರಿ 09: ಬಳ್ಳಾರಿ ನಗರದ
ಇನ್ ಪ್ಯಾಂಟ್ರಿ ರಸ್ತೆಯ ಫೈರ್ ಸ್ಟೇಷನ್ ಹತ್ತಿರದ ಶ್ರೀ ಕುಮಾರಸ್ವಾಮಿ ದೇವಸ್ಥಾನದಲ್ಲಿ ಬುಧವಾರ
ಮುಂಜಾನೆಯಿಂದ ರಾತ್ರಿವರೆಗೆ ಶ್ರೀ ಸುಬ್ರಹ್ಮಣ್ಯಸ್ವಾಮಿಗೆ ಆಡಿ ಕೃತಿಕ ಮಹೋತ್ಸವ
ನಿಮಿತ್ತ ವಿವಿಧ ಪೂಜಾ ಕಾರ್ಯಕ್ರಮಗಳನ್ನು ನೆರೆವೇರಿಸಲಾಯಿತು ಎಂದು ದೇವಸ್ಥಾನದ ಅಧ್ಯಕ್ಷರಾದ ವಿಜಯ್ ಕುಮಾರ್ ತಿಳಿಸಿದರು.
ಮುಂಜಾನೆ 05ರಿಂದ 6.30ರವರೆಗೆ ಕೃತಕ ನಕ್ಷತ್ರದಲ್ಲಿ ಶ್ರೀ ಸುಬ್ರಹ್ಮಣ್ಯ ಸ್ವಾಮಿಗೆ ಮಹಾಪಂಚಾಮೃತ ಅಭಿಷೇಕ, ಪುಷ್ಪ ಮತ್ತು ಬೆಳ್ಳಿ ಬಂಗಾರದ ಆಭರಗಳಿಂದ ಅಲಂಕರಿಸಿ ಪೂಜೆಗಳನ್ನು ಅರ್ಚಕರಾದ ಸುಬ್ಬಾರೆಡ್ಡಿಯವರು ನಡೆಸಿಕೊಟ್ಟರು. ಹಿಂದು ಧಾರ್ಮಿಕ ದತ್ತಿ ಇಲಾಖೆಯಿಂದ ಅನುಕೂಲವಾಗಿ ದರ್ಶನ ಮಾಡಲು ಕ್ಯೂ ಲೈನ್ ಪದ್ದತಿ ಮತ್ತು ನೆರೆದ ಸಾವಿರಾರು ಭಕ್ತಾಧಿಗಳಿಗೆ ಅನ್ನ ಸಂತರ್ಪಣೆಯನ್ನು ನಡೆಸಲಾಯಿತು ಎಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಹನುಮಂತಪ್ಪ ತಿಳಿಸಿದರು. ಸಂಜೆ 06 ಗಂಟೆಗೆ ಶ್ರೀ ಸುಬ್ರಮಣ್ಯ ಸ್ವಾಮಿ ಉತ್ಸವ ಮೂರ್ತಿಯನ್ನು ಅಲಂಕಾರಿಸಿ ಪಲ್ಲಕಿಯಲ್ಲಿ ಪ್ರಮುಖ ಬೀದಿಗಳಲ್ಲಿ ಅದ್ಧೂರಿಯಾಗಿ ಮೆರವಣಿಗೆಯನ್ನು ಮಾಡಿ ನಂತರ ಆಡಿ ಕೃತಿಕ ಪೂಜೆಗಳನ್ನು ನೆರವೇರಿಸಲಾಯಿತು. ಸ್ವಾಮಿಯ ಸದ್ಭಕ್ತರು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಲ್ಲಿ ಭಾಗವಹಿಸಿ ತನುಮನ, ಧನದೊಂದಿಗೆ ಸ್ವಾಮಿಯ ಸೇವೆ ಮಾಡಿ ಶ್ರೀ ಸುಬ್ರಮಣ್ಯಸ್ವಾಮಿಯ ಕೃಪೆಗೆ ಪಾತ್ರರಾದರು.
ಈ ಸಂದರ್ಭದಲ್ಲಿ ದೇವಸ್ಥಾನದ ಪ್ರಮುಖರಾದ ಆರ್ ಸುಧಾಕರ್, ಬಿ ಪ್ರಕಾಶ್, ಕೃಷ್ಣಮೂರ್ತಿ, ರವಿಚಂದ್ರ, ಗೋವಿಂದು, ಕವಿತಾ, ನಿರ್ಮಲಾ ಹಾಗೂ ಪಾಲಿಕೆ ಸದಸ್ಯರಾದ ಹನುಮಂತು ಸೇರಿದಂತೆ ನಗರದ ಪ್ರಮುಖರು ಮತ್ತು ಸಾವಿರಾರು ಜನ ಭಕ್ತಾಧಿಗಳು ಪಾಲ್ಗೊಂಡಿದ್ದರು.