ಬಿ. ನಾಗೇಂದ್ರಗೆ ಸಚಿವ ಸ್ಥಾನಕ್ಕೆ ನಗರ ದೇವತೆ ಕನಕ ದುರ್ಗಮ್ಮಗೆ ವಿಶೇಷ ಪೂಜೆ ಸಲ್ಲಿಸಿದರು
ಬಳ್ಳಾರಿ 27 : ರಂದು ವಿಧಾನ ಸಭಾ ಚುನಾವಣೆಯಲ್ಲಿ ಶ್ರೀರಾಮುಲು ಅವರನ್ನು ಅತಿ ಹೆಚ್ಚು ಮತಗಳಿಂದ ಸೋಲಿಸಿ ಜಯಭೇರಿ ಭಾರಿಸಿದ ಬಿ. ನಾಗೇಂದ್ರ ಅವರಿಗೆ ಸಚಿವ ಸ್ಥಾನ ಪಡೆದು ಪ್ರಮಾಣ ವಚನ ಸ್ವೀಕರಿಸಿದ್ದಕ್ಕೆ ಬಳ್ಳಾರಿಯಲ್ಲಿ ಸಚಿವ ನಾಗೇಂದ್ರ ಅವರ ಆಪ್ತರಾದ ಎಂ. ಜಿ ಕನಕ ಮತ್ತು ಬಿ.ಮಾರುತಿ ಅವರ ನೇತೃತ್ವದಲ್ಲಿ ನಗರದ ಆದಿ ದೇವತೆಯಾದ ಕನಕ ದುರ್ಗಮ್ಮಗೆ ವಿಶೇಷ ಪೂಜೆ ಸಲ್ಲಿಸಿ 1001 ತೆಂಗಿನ ಕಾಯಿ ಒಡೆದು ಸಂಭ್ರಮಿಸಿದರು.ಸಚಿವ ಬಿ.ನಾಗೇಂದ್ರ ಅವರ ಪರ ಘೋಷಣೆ ಕೂಗಿದ ಬೆಂಬಲಿಗರುವ ಕಾರ್ಯಕರ್ತರು ಪಟಾಕಿ ಸಿಡಿಸಿ ಪರಸ್ಪರ ಸಿಹಿ ಹಂಚಿ ಸಂಭ್ರಮವನ್ನು ಆಚರಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ಸಾಮಾಜಿಕ ಜಾಲತಾಣ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ. ಜಿ ಕನಕ, ರವರು ಮಾತನಾಡುತ್ತಾ ಬಿ.ನಾಗೇಂದ್ರ ಅವರಿಗೆ ಸಚಿವ ಸ್ಥಾನ ನೀಡಿದ್ದರಿಂದ ಕಾರ್ಯಕರ್ತರಿಗೆ ಹಾಗೂ ಬೆಂಬಲಿಗರಿಗೆ ಸಂತಸವಾಗಿದೆ. ಕನಕ ದುರ್ಗಮ್ಮ ದೇವಿಯು ಅವರಿಗೆ ಒಳ್ಳೆಯ ಆರೋಗ್ಯ ಐಶ್ವರ್ಯ ಜನರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸಚಿವರಿಗೆ ಶಕ್ತಿಯನ್ನು ನೀಡಲಂದು ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಅವರಿಗೆ ಸಚಿವ ಸ್ಥಾನ ನೀಡಿದ್ದರಿಂದ ಬಳ್ಳಾರಿ ಜಿಲ್ಲೆಯ ಅಭಿವೃದ್ದಿಗೆ ಪೂರಕವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ಈ ವೇಳೆ ಅಭಿಮಾನಿಗಳಾದ ಅನಿಲ್ ಕುಮಾರ್, ಬಿ.ಮಲ್ಲಿ, ಅರುಣ್, ನೂರ್, ವಲಿ, ಅಭಿ, ನಿಖಿಲ್, ವಿನೋದ್, ರಾಮಲಿಂಗ, ಪವನ್, ಭೀಮ, ಅಶೋಕ್ ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು ಈ ಕಾರ್ಯಕ್ರಮದಲ್ಲಿ ಉಪಸ್ಥರಿದ್ದರು.