ಮಾಜಿ ಸಿಎಂ ಬೊಮ್ಮಾಯಿ ಗುಣಮುಖವಾಗಲು ಮಾಳಗಿಯವರಿಂದ ವಿಶೇಷ ಪೂಜೆ
ಲೋಕದರ್ಶನ ವರದಿ
ಶಿಗ್ಗಾವಿ 26: ರಾಜ್ಯದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹೃದಯ ಶಸ್ತ್ರ್ರಚಿಕಿತ್ಸೆಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದು ಅವರು ಶೀಘ್ರವಾಗಿ ಗುಣಮುಖರಾಗಲೆಂದು ರಾಜ್ಯ ದಲಿತ ಮುಖಂಡ ಹಾಗೂ ರಾಜ್ಯ ಲಿಡ್ಕರ್ ಮಾಜಿ ಉಪಾಧ್ಯಕ್ಷ ಡಿ ಎಮ್ ಮಾಳಗಿಯವರ ನೇತೃತ್ವದಲ್ಲಿ ಅಹಿಂದ ಮುಖಂಡರು ತಾಲೂಕಿನ ತೋಪಿನ ದುರ್ಗಾದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪಾರ್ಥಿಸಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ರಾಜ್ಯ ದಲಿತ ಮುಖಂಡ ಡಿ ಎಸ್ ಮಾಳಗಿ ಮಾತನಾಡಿ ಮಾಜಿ ಸಿ ಎಂ ಬೊಮ್ಮಾಯಿಯವರು ಶೀಘ್ರವಾಗಿ ಗುಣಮುಖರಾಗಬೇಕು, ಅವರ ಆರೋಗ್ಯ ಸುಧಾರಣೆಯಾಗಬೇಕು,ಭಗವಂತ ಅವರಿಗೆ ಹೆಚ್ಚು ಆಯುಷ್ಯ ನೀಡಬೇಕೆಂದು ಪ್ರಾರ್ಥಿಸಿ ಇಂದು ದುರ್ಗಾದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದೆವೆ,
ಅವರು ಬೇಗ ಗುಣಮುಖರಾಗಿ ಬಂದು ತಾಲೂಕಿನ ಜನತೆಯ ಸೇವೆಯನ್ನು ಮುಂದುವರೆಸಬೇಕು, ಅವರಿಗೆ ಭಗಂತದ ಶಕ್ತಿ ತುಂಬಬೇಕು ಎಂದು ಪ್ರಾರ್ಥಿಸಲಾಗಿದೆ ಎಂದರು.
ಮಾಜಿ ಜಿಪಂ ಸದಸ್ಯ ಎಸ್ ಬಿ ಗಚ್ಚಿನಮಠ, ಸವಣೂರ ತಾಪಂ ಮಾಜಿ ಅಧ್ಯಕ್ಷ ಬಸಯ್ಯ ಗ್ವಾನಾಳ, ಮುಖಂಡರಾದ ನಾಗರಾಜ ಹಾವೇರಿ, ರಾವಪ್ಪ ಕುಬಸದ, ಮಾಳಗಿಯವರ ಆಪ್ತ ಕಾರ್ಯದರ್ಶಿ ನಿರಂಜನ ಬಳಿಗಾರ ಉಪಸ್ಥಿತರಿದ್ದರು