ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೇಟ ನೀಡಲು ವಿಶೇಷ ಸಭೆ
ಶಿಗ್ಗಾವಿ 15: ಹುಬ್ಬಳ್ಳಿಯ ಖಾಸಗೇ ಹೋಟೆಲನಲ್ಲಿ ಧಾರವಾಡ, ಹುಬ್ಬಳ್ಳಿ, ಶಿಗ್ಗಾವಿ, ಸವಣೂರ, ಬಂಕಾಪೂರ, ತಡಸ, ಕಾರಡಗಿ, ಹುಲಗೂರ ಸೇರಿದಂತೆ ಅಂಜುಮನ ಎ ಇಸ್ಲಾಂ ಸಂಸ್ಥೆಗಳ ಎಲ್ಲಾ ಪದಾಧಿಕಾರಿಗಳ ನೇತೃತ್ವದಲ್ಲಿ ಶಿಗ್ಗಾವಿ-ಸವಣೂರ ವಿಧಾನಸಭಾ ಮತ ಕ್ಷೇತ್ರದಲ್ಲಿ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿದರು. ಮೋಹರಂ ಹಬ್ಬದ ನಂತರ ಸಚಿವ ಜಮೀರಹ್ಮದ, ರಹೀಂಖಾನ, ವಿಧಾನಪರಿಷತ್ತ ಮುಖ್ಯ ಸಚೇತಕ ಸಲೀಂ ಅಹ್ಮದ ರವರನ್ನು ಬೇಟಿ ಮಾಡಿ ನಂತರ ಡಿ.ಕೆ.ಶಿವಕುಮಾರ, ಮುಖ್ಯಮಂತ್ರಿ ಸಿದ್ದರಾಮಯ್ಯ, ಈಶ್ವರ ಖಂಡ್ರೆ, ಸತೀಶ ಜಾರಕಿಹೊಳಿ ಸೇರಿದಂತೆ ಪ್ರಮುಖರನ್ನು ಬೇಟಿ ಮಾಡಲಿದ್ದೇವೆ. ಪಕ್ಷವು ಮುಸ್ಲೀಂರಿಗೆ ಟಿಕೇಟ ನೀಡುವ ಭರವಸೆ ಇದೆ ಎಂದು ಆಶಯ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಅಂಜುಮನ ಎ ಇಸ್ಲಾಂ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.