ಕ್ಷೇತ್ರದ ಅಭಿವೃದ್ದಿಗೆ ವಿಶೇಷ ಒತ್ತು ನೀಡಲಾಗುವುದು: ಶಾಸಕ ವಿಶ್ವಾಸ ವೈದ್ಯ
ಸವದತ್ತಿ: ಮತಕ್ಷೇತ್ರದಲ್ಲಿ ಬರುವಂತ ಎಲ್ಲ ಸಮುದಾಯದ ಜನರ ಸಹಕಾರ ಮತ್ತು ಅವರ ಆಶೀರ್ವಾದದಿಂದ ನಾನು ಇಂದು ಶಾಸಕನಾಗಿದ್ದು, ಅವರು ನೀಡಿದ ಶಾಸಕ ಸ್ಥಾನಕ್ಕೆ ನಾನು ಚ್ಯುತಿ ಬರದಂತೆ ನನ್ನ ಕರ್ತವ್ಯವನ್ನು ನಿರ್ವಹಿಸುವದರ ಜೊತೆಗೆ ಕ್ಷೇತ್ರದ ಅಭಿವೃದ್ದಿಗೆ ವಿಶೇಷ ಒತ್ತು ನೀಡಲಾಗುವುದು ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.
ಪಟ್ಟಣದ ಗಿರಿಜನ್ನವರ ಓಣಿಯ ದತ್ತ ಮಂದಿರದಲ್ಲಿ ಸಬನೀಸ ಬಂಧುಗಳಿಂದ ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಕ್ಷೇತ್ರದಲ್ಲಿ ವಿಶೇಷವಾಗಿ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಿ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕಾರ್ಯವನ್ನು ಮಾಡಲಾಗುವುದು ಎಂದರು. ಶ್ರೀ ಕ್ಷೇತ್ರ ಯಲ್ಲಮ್ಮಾ ದೇವಸ್ಥಾನವನ್ನು ವಿಶೇಷವಾದ ರೀತಿಯಲ್ಲಿ ಅಭಿವೃದ್ದಿಗೊಳಿಸಿ ಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗೆ ಎಲ್ಲ ರೀತಿಯ ಸೌಕರ್ಯಗಳನ್ನು ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ಸದ್ಯದಲ್ಲಿಯೇ ಸವದತ್ತಿಯಲ್ಲಿ ಮಲ್ಟಿಸ್ಪೇಶಾಲಿಟಿ ಆಸ್ಪತ್ರೆಯನ್ನು ನಿರ್ಮಿಸುವ ಗುರಿ ಹೊಂದಲಾಗಿದ್ದು, ಕೂಡಲೆ ಆ ಕಾರ್ಯವನ್ನು ಸಹೋದರ ವೆಂಕಟೇಶ ವೈದ್ಯರವರಿಂದ ಯೋಜನೆ ರೂಪಿಸಿ ಚಾಲನೆ ನೀಡಲಾಗುತ್ತಿದೆ ಎಂದರು.
ಡಾ.ಶ್ರೀಪಾದ ಸಬನೀಸ ಪ್ರಾಸ್ತಾವಿಕವಾಗಿ ಮಾತನಾಡಿ, ಯುವ ಶಾಸಕರಿಗೆ ಕ್ಷೇತ್ರದ ಅಭಿವೃದ್ದಿಯ ವಿಚಾರವಾಗಿ ಅಪಾರ ಆಸಕ್ತಿಯಿದ್ದು, ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂಧನೆ ನೀಡಿ ಮೂಲಭೂತ ಸೌಲಭ್ಯಗಳ ಕಲ್ಪಿಸುವದರ ಜೊತೆಗೆ ಜನರ ಆರೋಗ್ಯದ ಕಡೆಗೆ ವಿಶೇಷ ಗಮನ ಹರಿಸಬೇಕೆಂದರು.
ಮಹಾಬಳೇಶ್ವರ ಪುರದಗುಡಿ, ಚಂದ್ರಣ್ಣ ಶಾಮರಾಯನವರ, ಪ್ರಭು ಪ್ರಬುನವರ, ವೆಂಕಟೇಶ ವೈದ್ಯ, ಶಿವಾನಂದ ಶಿಂತ್ರಿ, ಸೋಮಯ್ಯ ವಡಿಯರ, ಅಶೋಕ ವೈದ್ಯ, ಶ್ರೀನಿವಾಸ ಸಬನೀಶ, ಅಲ್ಕಾ ವೈದ್ಯ, ದೀಪಕ ಜಾನವೇಕರ, ಲತೀಪ ಸವದತ್ತಿ, ಅಶ್ವತ ವೈದ್ಯ, ಶಶಿ ಕುಲಕರ್ಣಿ, ಎಸ್.ಆರ್.ಪಾಟೀಲ, ಧರೆಪ್ಪ ಮಡ್ಲಿ, ನೀಲಪ್ಪ ಅಣ್ಣಿಗೇರಿ, ಗಿರೀಶ ಮುನವಳ್ಳಿ, ಸಂತೋಷ ಸಬನೀಸ, ಸಿ.ವಿ.ಕುಲಕಣರ್ಿ, ಮಧು ಸಬನೀಸ ಇತರರು ಉಪಸ್ಥಿತರಿದ್ದರು