ಕುಷ್ಟಗಿ

ನಾಳೆಯಿಂದ ಗುರು ಪೂರ್ಣಿಮಾ ಪ್ರಯುಕ್ತ ಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ವಿಶೇಷ ಪೂಜೆ

ನಾಳೆಯಿಂದ ಗುರು ಪೂರ್ಣಿಮಾ ಪ್ರಯುಕ್ತ ಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ವಿಶೇಷ ಪೂಜೆ

ಕುಷ್ಟಗಿ30: ಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ಜು.2 ರವಿವಾರ ಮತ್ತು ಜು.03 ಸೋಮವಾರದಂದು ಗುರು ಪೂರ್ಣಿಮಾ ಆಚರಣೆ ಹಾಗೂ ಪಟ್ಟಣದ ಶಿರಡಿ ಸಾಯಿಬಾಬಾ ದೇವಸ್ಥಾನದ ಕಳಸ ಸ್ಥಾಪನೆ ಮತ್ತು ಕುಂಭಾಭಿಷೇಕ ಪೂಜೆ ಪ್ರಯುಕ್ತ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ ಎಂದು ಸಂಸ್ಥಾಪಕ ಪಿ.ಲಕ್ಷ್ಮೀ ರೆಡ್ಡಿ ತಿಳಿಸಿದ್ದಾರೆ. 

ಶ್ರೀ ಶಿರಡಿ ಸಾಯಿಬಾಬಾ ದೇವಸ್ಥಾನ ಸ್ಥಾಪನೆಗೊಂಡು ಇಂದಿಗೆ10 ವರ್ಷವಾಗಿದೆ. ಜು.02 ರವಿವಾರ ಬೆಳಿಗ್ಗೆ 9 ಗಂಟೆಗೆ ಗೋಪುರಕ್ಕೆ ಹೊಸ ಕಳಸ ಸ್ಥಾಪನೆ ಮತ್ತು ಕಳಸಕ್ಕೆ ಕುಂಬಾಭಿಷೇಕ ಪೂಜೆ ಮಾಡಲಾಗುತ್ತದೆ. 

ಜು.03 ಸೋಮವಾರ ಗುರು ಪೂಣರ್ಿಮಾ ಅಂಗವಾಗಿ ಬೆಳಗ್ಗೆ 5 ಗಂಟೆಗೆ ಕಾಕಡ ಆರತಿ, 6 ಗಂಟೆಗೆ ಕ್ಷೀರಾಭೀಷಕ, 9 ಗಂಟೆಗೆ ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ 12 ಗಂಟೆಗೆ ಆರತಿ, 1 ಗಂಟೆಗೆ ಸಾರ್ವಜನಿಕ ಅನ್ನಸಂತರ್ಪಣೆ ನಡೆಯುತ್ತದೆ. 

ಸಂಜೆ 6:30 ಕ್ಕೆ ಆರತಿ, 7 ಗಂಟೆಗೆ ಪಲ್ಲಕ್ಕಿ ಸೇವೆ, 8 ಗಂಟೆಗೆ ಶೇಜಾರತಿ ನಡೆಯುತ್ತದೆ ಕಾರಣ ಕುಷ್ಟಗಿ ಪಟ್ಟಣ ಹಾಗೂ ಸುತ್ತ ಮುತ್ತಲಿನ ಗ್ರಾಮದ ಭಕ್ತರು ಶ್ರೀ ಶಿರಡಿ ಸಾಯಿಬಾಬಾನ ಸಕಲ ಪೂಜಾ ಕಾರ್ಯಕ್ರಮ ದಲ್ಲಿ ಭಾಗವಹಿಸಿ ತನು,ಮನ,ಧನದಿಂದ ಸೇವೆ ಸಲ್ಲಿಸಬೇಕು ಎಂದು  ಶಿರಡಿ ಸಾಯಿಬಾಬಾ ದೇವಸ್ಥಾನದ ಶಾಸ್ತ್ರಿ ಅಸೀತೋಷ್ ಪಾಂಡೆ ಮಹಾರಾಜ ಪ್ರಕಟಣೆಯಲ್ಲಿ ತಿಳಿಸಿದ್ದಾರೆ 

ಸುದ್ದಿ ಓದಿ