ಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ವಿಶೇಷ ಪೂಜೆ
ಲೋಕದರ್ಶನ ವರದಿ
ಕುಷ್ಟಗಿ 11: ಶ್ರಾವಣ ಮಾಸದ ಅಂಗವಾಗಿ ಪಟ್ಟಣದ ಶ್ರೀ ಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ಗುರುವಾರ ಬೆಳಗ್ಗೆ ಇಲ್ಲಿನ ಶ್ರೀ ಸಾಯಿಬಾಬಾ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ದೇವಸ್ಥಾನದ ಸ್ವಾಮೀಜಿ ನಾಗೇಂದ್ರ ದುವೇದಿ ನೇತೃತ್ವದಲ್ಲಿ ಬೆಳಗ್ಗೆ ಕಾಕಡಾರತಿ, ಅಷ್ಟೋತ್ತರ, ಕ್ಷೀರಭಿಷೇಕ ಮಧ್ಯಾಹ್ನ ಆರತಿ ನಂತರ ಮಹಾಪ್ರಸಾದ ವಿತರಿಸಿದರು. ಸಂಜೆ ಆರತಿ, ಪಲ್ಲಕ್ಕಿ ಸೇವೆ, ಶೇಜಾರತಿ ವಿಜೃಂಭಣೆಯಿಂದ ನಡೆಯಿತು. ಪಟ್ಟಣ ಸೇರಿದ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದ ಸದ್ಭಕ್ತರು ಶ್ರೀ ಸಾಯಿ ಬಾಬಾ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ಹೂವು, ಹಣ್ಣು, ಕಾಯಿಗಳನ್ನು ಸಮರ್ಿಸಿ ಭಕ್ತಿ ಮೆರೆದರು.