ದೈವಜ್ಞ ಸಮಾಜ ವತಿಯಿಂದ ವಿಶೇಷ ಪೂಜೆ, ಪ್ರಸಾದ ಸೇವೆ
ಶಿಗ್ಗಾವಿ 24: ಪಟ್ಟಣದ ಹಳೇಪೇಟಿ ಓಣಿಯ ಗಣಪತಿ ದೇವಸ್ಥಾನದಲ್ಲಿ ದೈವಜ್ಞ ಸಮಾಜ ಹಾಗೂ ಸರಾಫ ಸಂಘದ ವತಿಯಿಂದ ಅಯೋದ್ಯೆಯ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ನಿಮಿತ್ಯ ನಡೆದ ಶ್ರೀರಾಮನ ಮೂರ್ತಿಗೆ ವಿಶೇಷ ಪೂಜೆಯನ್ನು ಸಲ್ಲಿಸಿ ನಂತರ ಇಡಗುಂಜಿ ಗಣಪತಿಗೆ ವಿಶೇಷ ಪೂಜೆಯನ್ನು ಸಲ್ಲಿಸಿ ನಂತರ ದೀಪೋತ್ಸವ ಹಚ್ಚಲಾಯಿತು ಹಾಗೂ ದೈವಜ್ಙ ಸಮಾಜ ಮಹಿಳಾ ಮಂಡಳದ ಸದಸ್ಯರಿಂದ ವಿಶೇಷ ಭಜನೆಯನ್ನು ಸಲ್ಲಿಸಿದರು ನಂತರ ಪ್ರಸಾದ ಸೇವೆಯನ್ನು ಸಲ್ಲಿಸಲಾಯಿತು ಹಾಗೂ ಶ್ರೀರಾಮನ ಪಾಕೇಟ ಕ್ಯಾಲೇಂಡರ ವಿತರಿಸಲಾಯಿತು.
ಈ ಸಂದರ್ಭದಲ್ಲಿ ದೈವಜ್ಙ ಸಮಾಜ ಅಧ್ಯಕ್ಷ ಸುಧಾಕರ ದೈವಜ್ಞ, ಸರಾಫ ಸಂಘ ಅಧ್ಯಕ್ಷ ಚಂದ್ರಕಾಂತ ಪಾಲನಕರ, ಮಾಜಿ ಅಧ್ಯಕ್ಷ ಪ್ರಕಾಶ ವೇರ್ಣೇಕರ, ಉಪಾಧ್ಯಕ್ಷ ಸಂಕೇತ ರಾಯ್ಕರ, ಕಾರ್ಯದರ್ಶಿ ರವಿ ರಾಯ್ಕರ, ವಿನಾಯಕ ರಾಯ್ಕರ, ವಾಸುದೇವ ರಾಯ್ಕರ, ನಾಗರಾಜ ರಾಯ್ಕರ, ನಾಗರಾಜ ಪಾಲನಕರ, ಗಜಾನನ ಶಿರೋಡಕರ, ಮಂಜುನಾಥ ವೇಣೇಕರ, ಆನಂದ ವೇರ್ಣೇಕರ,ನಾಗೇಶ ರಾಯ್ಕರ, ಗಜಾನನ ಶೇಜವಾಡಕರ, ಜಗದೀಶ ಶೇಜವಾಡಕರ, ಭೂಷಣ ರೇವಣಕರ, ರಾಘವೇಂದ್ರ ದೈವಜ್ಞ, ಗಣೇಶ ದೈವಜ್ಙ, ನಾಗರಾಜ ಶೇಜವಾಡಕರ, ರಾಘವೇಂದ್ರ ರಾಯ್ಕರ, ಸಂತೋಷ ರಾಯ್ಕರ, ಕೃಷ್ಣಾ ವೇರ್ಣೇಕರ, ಸುರೇಶ ಪಾಲನಕರ, ಅರುಣ ರೇವಣಕರ, ಮಹೇಶ ದೈವಜ್ಞ, ಶರತ, ಮಹಿಳಾ ಮಂಡಳದ ಸರ್ವ ಸದಸ್ಯರು ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.