ಸಿಂಧಗಿ

ಕನ್ನಡ ಮಾತಾಡಿ ಕನ್ನಡವನ್ನು ಉಳಿಸಿ ಬೆಳೆಸಿ: ಶಾಸಕ ಭೂಸನೂರ

ಕನ್ನಡ ಮಾತಾಡಿ ಕನ್ನಡವನ್ನು ಉಳಿಸಿ ಬೆಳೆಸಿ: ಶಾಸಕ ಭೂಸನೂರ
ಬಸವೇಶ್ವರ ವೃತ್ತದಲ್ಲಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಹಮ್ಮಿಕೊಂಡ 67ನೇ ಕನ್ನಡ ರಾಜ್ಯೋತ್ಸವ ಸಮಾರಂಭವನ್ನ

ಸಿಂದಗಿ; ಕನ್ನಡ ನಮ್ಮ ತಾಯಿ ಭಾಷೆ ಕಾರಣ ಪ್ರತಿ ಮನೆಯಲ್ಲಿ ನಾವಾಡುವ ಭಾಷೆ ಯಾವುದಾದರೇನು ಕನ್ನಡವನ್ನೆ ಮಾತನಾಡುವುದನ್ನು ರೂಢಿಗತ ಮಾಡಿಕೊಂಡು ಕನ್ನಡ ಉಳಿಸಿ ಬೆಳೆಸುವ ಕಾರ್ಯ ಮಾಡಿದ್ದಾದರೆ ಕನ್ನಡ ಉಳಿಯಲು ಸಾಧ್ಯ ಎಂದು ಶಾಸಕ ರಮೇಶ ಭೂಸನೂರ ಹೇಳಿದರು.

        ಪಟ್ಟಣದ ಬಸವೇಶ್ವರ ವೃತ್ತದಲ್ಲಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್, ಕನರ್ಾಟಕ ಕಾರ್ಯ ನಿರತ ಪತ್ರರ್ತರ ಸಂಘ, ಅವ್ವ ಫೌಂಡೇಷನ್, ರಾಗರಂಜಿನಿ ಸಂಗೀತ ಕೇಂದ್ರ, ಮಕ್ಕಳ ಸಾಹಿತ್ಯ ಪರಿಷತ್, ಮಕ್ಕಳ ಕಲ್ಯಾಣ ಪ್ರತಿಷ್ಠಾನ, ಚುಟುಕು ಸಾಹಿತ್ಯ ಪರಿಷತ್ ಎಬಿಸಿಡಿ ನೃತ್ಯ ಕೇಂದ್ರ, ಸ್ವರ ತರಂಗ ಪಾತಶಾಲೆ, ಎ.ಕೆ.ನೃತ್ಯ ಕೇಂದ್ರ ಇವುಗಳ ಸಹಯೋಗದಲ್ಲಿ ಹಮ್ಮಿಕೊಂಡ 67ನೇ ಕನ್ನಡ ರಾಜ್ಯೋತ್ಸವ, ಸಾಧಕರಿಗೆ ಪ್ರಶಸ್ತಿ ಪ್ರಧಾನ ಹಾಗೂ ಸಾಂಸ್ಕೃತಿಕ ಕಲರವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕನ್ನಡ ನಿತ್ಯನುಡಿಯ ಭಾಷೆ ಆಗಬೇಕು. ಎಲ್ಲೆಡೆ ಕನ್ನಡವನ್ನು ಬಳಸಿ ಕನ್ನಡದ ಹಿರಿಮೆಯನ್ನು ಎಲ್ಲಾ ಕಡೆ ಹರಡಿಸುವ ಕಾರ್ಯ ಮಾಡಬೇಕು ಎಂದರು.

     ಸಾಂಸ್ಕೃತಿಕ ಕಲರವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಹಿರಿಯ ಸಾಹಿತಿ ಡಾ. ಚನ್ನಪ್ಪ ಕಟ್ಟಿ ಮಾತನಾಡಿ, ಎಲ್ಲ ಸಾಂಸ್ಕೃತಿಕ ಸಂಘಟನೆಗಳು ಒಂದೆಡೆ ಸೇರಬೇಕು. ಅಂದಾಗ ಮಾತ್ರ ಕನ್ನಡತನದ ಹಿರಿಮೆ ಬೆಳಗಲು ಸಾದ್ಯ. ಕನ್ನಡ ಎಂಬುದು ಭೂಭಾಗ, ಜನರು, ಭಾಷೆ ಎಂದು ಕರೆಸಿಕೊಳ್ಳುತ್ತದೆ. ನಮ್ಮ ಕನ್ನಡ ಅಭಿಮಾನ ದುರಭಿಮಾನ ಆಗದೆ ಎಲ್ಲ ಭಾಷೆಯ ಜೊತೆ ಸಹೋದರತ್ವ ಕಾಪಾಡಿಕೊಂಡು ಹೋಗಬೇಕು ಎಂದರು.

      ಅಂಕಣಗಾರ ಮಂಜುನಾಥ ಜುನಗೊಂಡ ಉಪನ್ಯಾಸ ನೀಡಿ, ಅತ್ತ ನೆನ್ನಡ ಇತ್ತ ಎಕ್ಕಡ್ ಇವೆರಡರ ನಡುವೆ ಕನ್ನಡ ಗಡಗಡ ಕಾರಣ ಕನ್ನಡ ಉಳೀದಿದೆ ಎಂದರೆ  ಜಾನಪದ ಸಾಹಿತ್ಯದಿಂದ ಕನ್ನಡ ಭಾಷೆ ಉಳಿದಿದೆ. ಮಕ್ಕಳಿಗೆ ಜಾನಪದೀಯ ಪದ್ಯಗಳನ್ನು ಹೇಳಿಕೊಡುವುದು ನಮ್ಮ ಕರ್ತವ್ಯ ಆಗಿದೆ. ಎಲ್ಲರೂ ನವೆಂಬರ ನಲ್ಲಿ ಕನ್ನಡ ಪ್ರೇಮ ತೋರದೆ ಪ್ರತಿದಿನ ಕನ್ನಡ ಮಾತಾಡಬೇಕು, ಬಳಸಬೇಕು. ಗಡಿನಾಡಿನ ಸಮಸ್ಯೆಗಳು ನಮ್ಮ ನಡುನಾಡಿಗೆ ಬರದಂತೆ ಈಗಲೇ ಮುನ್ನೆಚ್ಚರಿಕೆ ವಹಿಸಿಕೊಂಡು ಕನ್ನಡ ಭಾಷೆಯನ್ನು ಉಳಿಸುವ ಕಾರ್ಯ ಮಾಡಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು. 

      ತಾಯಿ ಭುವನೇಶ್ವರಿ ಭಾವಚಿತ್ರದ ಪೂಜೆ ನೆರವೇರಿಸಿದ ಜೆಡಿಎಸ್ ಮುಖಂಡ ಶಿವಾನಂದ ಪಾಟೀಲ ಮಾತನಾಡಿ, ಪಾಶ್ಚಿಮಾತ್ಯ ಸಂಸ್ಕೃತಿಯ ಕಾರಣದಿಂದ ನಮ್ಮ ಮಕ್ಕಳು ಕನ್ನಡತನ ಮರೆಯುತ್ತಿದ್ದಾರೆ. ಅವರಲ್ಲಿ ನಮ್ಮ ಕನ್ನಡ ಅಭಿಮಾನ ಬೆಳಸಿ ಭಾಷೆ ಹಾಗೂ ತಾಯಿ ನುಡಿಯ ಉಳಿವಿಗೆ ಸಿದ್ಧರಾಗಬೇಕು ಎಂದು ಕರೆ ನೀಡಿದರು.

      ಅಧ್ಯಕ್ಷತೆ ವಹಿಸಿದ ಕಸಾಪ ವಿಜಯಪುರ ಜಿಲ್ಲಾ ಅಧ್ಯಕ್ಷ ಹಾಸಿಂಪೀರ್ ವಾಲಿಕಾರ ಮಾತನಾಡಿ, ಸಾಹಿತಿಗಳು ಜಾತಿಯಿಂದ ದೂರ ಉಳಿಯಬೇಕು. ಭಾಷೆಗಳಿಗೆ ಜಾತಿ ಇಲ್ಲ. ಎಲ್ಲರೂ ಭಾಷೆಗಳ ಉಳಿವಿಗೆ ಹೋರಾಟ ಮಾಡಬೇಕು ಎಂದರು.

      ಈ ಕಾರ್ಯಕ್ರಮದಲ್ಲಿ ಕನ್ನಡದ ಬಳಕೆಯಲ್ಲಿ ಪ್ರಾಶಿಸ್ಥ್ಯ ಪಡೆದ ಶಾಲೆಗೆ ಉತ್ತಮ ಶಾಲೆ ಪ್ರಶಸ್ತಿ, 21-22ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ 125ಕ್ಕೆ 125 ಅಂಕ ಪಡೆದ ವಿದ್ಯಾರ್ಥಿಗಳಿಗೆ ಅಲ್ಲದೆ ರಸಪ್ರಶ್ನೆ, ಶುದ್ಧ ಓದು ಬರಹ, ಚಿತ್ರಕಲಾ ಸ್ಫರ್ಧೆ ಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಹಾಗೂ ಕನ್ನಡ ವಿಷಯದಲ್ಲಿ ತಾಲೂಕಿನ ಅಂತರಗಂಗಿ ಪ್ರಾಥಮಿಕ ಶಾಲೆಗೆ ಉತ್ತಮ ಪ್ರಶಸ್ತಿ ಪತ್ರ, ನಗದು ಬಹುಮಾನ ನೀಡಲಾಯಿತು.

        ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಮುತ್ತು ಶಾಬಾದಿ, ಸಂತೋಷ ಪಾಟೀಲ ಡಂಬಳ, ಶಿಲ್ಪಾ ಕುದರಗೊಂಡ, ಶೈಲಾ ಸ್ಥಾವರಮಠ, ಪುರಸಭೆ ಸದಸ್ಯರಾದ ಹಣಮಂತ ಸುಣಗಾರ, ಪ್ರತಿಭಾ ಕಲ್ಲೂರ, ಪತ್ರಕರ್ತರ ಸಂಘದ ತಾಲೂಕಾಧ್ಯಕ್ಷ ಆನಂದ ಶಾಬಾದಿ, ರಾಗರಂಜಿನಿ ಸಮಗೀತ ಅಕಾಡೆಮಿಯ ಸಂಚಾಲಕ ಡಾ. ಪ್ರಕಾಶ ಮೂಡಲಗಿ, ಎಬಿಸಿಡಿ ಡ್ಯಾನ್ ಕೇಂದ್ರದ ಜ್ಞಾನೇಶ ಗುರಾವ, ಮಕ್ಕಳ ಸಾಹಿತ್ಯ ಪರಿಷತ್ತು ಅದ್ಯಕ್ಷ ಅಶೋಕ ಬಿರಾದಾರ, ಅವ್ವ ಪೌಂಡೇಶನ್ ಸಂಚಾಲಕ ಸಿದ್ದಲಿಂಗ ಕಿಣಗಿ, ಚುಟುಕು ಸಾಹಿತ್ಯ ಪರಿಷತ್ತಿ ಅದ್ಯಕ್ಷ ಮುತ್ತು ಬ್ಯಾಕೋಡ, ಎಕೆ ಡ್ಯಾನ್ಸ ಕೇಂದ್ರದ ಆಕಾಶ ರಾಠೋಡ, ಕಸಾಪ ಗೌರವ ಸಲಹೆಗಾರ ಅಶೋಕ ಗಾಯಕವಾಡ, ಗೌರವ ಕಾರ್ಯದಶರ್ಿ ಶಿವಕುಮಾರ ಕಲ್ಲೂರ, ಕೋಶಾಧ್ಯಕ್ಷ ಖಾದರ ವಾಲೀಕಾರ, ಶಿವು ಬಡಾನವರ, ಸೇರಿದಂತೆ ಅನೇಕರು ವೇದಿಕೆ ಮೇಲಿದ್ದರು.   

ಕಸಾಪ ಅಧ್ಯಕ್ಷ ರಾಜಶೇಖರ ಕೂಚಬಾಳ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ದೈಹಿಕ ನಿರ್ದೇಶಕ  ರವಿ ಗೋಲಾ ನಿರೂಪಿಸಿದರು. ಕಸಾಪ ಪ್ರತಿಕಾ ಪ್ರತಿನಿಧಿ ಪಂಡಿತ ಯಂಪೂರೆ ವಂದಿಸಿದರು.

ಸಾಂಸ್ಕೃತಿಕ ಕಲರವ ಕಾರ್ಯಕ್ರಮದಲ್ಲಿ ಜಿಟಿವಿ ಕಾಮಿಡಿ ಕಿಲಾಡಿ ಕ್ಯಾತಿಯ ಸಂಜು ಬಸಯ್ಯ, ಹಾಸ್ಯ ಕಲಾವಿಧ ಪ್ರಶಾಂತ ಚೌದರಿ, ದೇವು ಅಫಜಲಪೂರ, ರಾಗರಂಜನಿ ಸಂಗೀತ ಪಾಠಶಾಲೆಯ ವಿದ್ಯಾರ್ಥಿ ಗಳ ಹಾಡುಗಳು ಜನಮನ ಸೂರುಗೊಂಡವು,   


ಸುದ್ದಿ ಓದಿ