ಸೌಂದರ್ಯ ಜಗದೀಶ್ ಪಬ್; ಪರಿಶೀಲನೆ
ಬೆಂಗಳೂರು: ಅಕ್ಟೋಬರ್ 25: ಸಿಲಿಕಾನ್ ಸಿಟಿಯಲ್ಲಿ ಸೌಂದರ್ಯ ಜಗದೀಶ್ ಮಾಲೀಕತ್ವದ ಪಬ್ನಲ್ಲಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಇಂದು ಮಹಾಲಕ್ಷಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಜೆಟ್ಲಾಗ್ ಪಬ್ ಗೆ ಅನಿರೀಕ್ಷಿತವಾಗಿ ಆಗಮಿಸಿದ ಪೊಲೀಸರು ಅಲ್ಲಿನ ಸಿಸಿಟಿವಿ ಪೂಟೇಜುಗಳನ್ನು ಪರಿಶೀಲಿಸಿದರು. ಅಲ್ಲಿನ ಸಿಬ್ಬಂದಿಯನ್ನೂ ವಿಚಾರಣೆಗೆ ಒಳಪಡಿಸಿದರು.
ಸೌಂದರ್ಯ ಜಗದೀಶ್ ಪುತ್ರ ನಟ ಸ್ನೇಹಿತ್ ಮತ್ತವನ ತಂಡ ಹಲ್ಲೆ ಆರೋಪ ಎದುರಿಸುತ್ತಿದ್ದಾರೆ. ಇವರುಗಳು ಘಟನೆ ಬಳಿಕ ಪಬ್ ಗೆ ಬಂದಿದ್ದಾರೆಯೇ ಎಂದು ತಿಳಿಯಲು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಪಬ್ ವ್ಯವಸ್ಥಾಪಕರ ಜೊತೆ ಸಂಪರ್ಕದಲ್ಲಿದ್ದಾರೆಯೇ ಎಂಬುದರ ಬಗ್ಗೆಯೂ ಪರಿಶೀಲನೆ ನಡೆದಿದೆ.