ರಾಷ್ಟ್ರೀಯ

ಸೌಮಿತ್ರ ಚಟರ್ಜಿಗೆ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ

ಸೌಮಿತ್ರ ಚಟರ್ಜಿಗೆ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ

ಕೋಲ್ಕತಾ, ಅ 13 ಕೋವಿಡ್‌ ಸೋಂಕಿಗೆ ಗುರಿಯಾಗಿರುವ ಖ್ಯಾತ ನಟ ಬಂಗಾಳಿ ನಟ ಸೌಮಿತ್ರಾ ಚಟರ್ಜಿ ಅವರನ್ನು ಮಂಗಳವಾರ ವೆಂಟಿಲೇಟರ್ ಬೆಂಬಲದಲ್ಲಿ ಇರಿಸಲಾಗಿದೆ. ಚಟರ್ಜಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಆದರೆ, ಸ್ಥಿರವಾಗಿದೆ ಎಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಭಾರತೀಯ ಚಿತ್ರರಂಗದ ಜೀವಮಾನದ ಕೊಡುಗೆಗಾಗಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ 85 ವರ್ಷದ ಚಟರ್ಜಿ ಅವರಿಗೆ ಕಳೆದ 48 ಗಂಟೆಗಳಲ್ಲಿ ಎರಡು ಬಾರಿ ಪ್ಲಾಸ್ಮಾ ಚಿಕಿತ್ಸೆ ನೀಡಿದ್ದರೂ ಜ್ವರ ಮತ್ತು ತಳಮಳ ಎದುರಿಸುತ್ತಿದ್ದರು. "ಕಳೆದ 48 ಗಂಟೆಗಳಲ್ಲಿ ಪ್ರತಿಕ್ರಿಯೆ ತೃಪ್ತಿಕರವಾಗಿಲ್ಲ. ವೈದ್ಯಕೀಯ ಮಂಡಳಿಯನ್ನು ಸಂಪರ್ಕಿಸಿಅಗತ್ಯವಿದ್ದರೆ,  ಅವರನ್ನು ಮತ್ತೆ ವೆಂಟಿಲೇಷನ್‌ನಲ್ಲಿ ಇರಿಸಲಾಗುವುದು ಎಂದು ಆಸ್ಪತ್ರೆ ಮೂಲಗಳು ಈ ಹಿಂದೆಯೇ ತಿಳಿಸಿತ್ತು.


ಸುದ್ದಿ ಓದಿ