ರಾಷ್ಟ್ರೀಯ

ರೈತರ ಪ್ರತಿಭಟನೆ ಬೆಂಬಲಿಸಿ ಜನ್ಮದಿನ ಆಚರಿಸಿಕೊಳ್ಳದಿರಲು ಸೋನಿಯಾ ಗಾಂಧಿ ನಿರ್ಧಾರ

ರೈತರ ಪ್ರತಿಭಟನೆ ಬೆಂಬಲಿಸಿ ಜನ್ಮದಿನ ಆಚರಿಸಿಕೊಳ್ಳದಿರಲು ಸೋನಿಯಾ ಗಾಂಧಿ ನಿರ್ಧಾರ

ನವದೆಹಲಿ, ಡಿಸೆಂಬರ್ 8: ಕೇಂದ್ರದ  ಹೊಸ ಕೃಷಿ  ಕಾಯ್ದೆಗಳ  ವಿರುದ್ಧ ರೈತರ  ನಡೆಸುತ್ತಿರುವ   ಪ್ರತಿಭಟನೆ  ಬೆಂಬಲಿಸಿ ಡಿಸೆಂಬರ್ 9 ರಂದು ತಮ್ಮ ಜನ್ಮದಿನವನ್ನು ಆಚರಿಸಿಕೊಳ್ಳದಿರಲು  ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನಿರ್ಧರಿಸಿದ್ದಾರೆ.  ರೈತರ  ಪ್ರತಿಭಟನೆ, ಕೊರೊನಾ  ಸಾಂಕ್ರಾಮಿಕ  ಕಾರಣ   ತಮ್ಮ ಜನ್ಮದಿನ ಆಚರಣೆ ಕಾರ್ಯಕ್ರಮಗಳಿಂದ   ದೂರಸರಿಯುವಂತೆ  ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳಿಗೆ ಸೋನಿಯಾ ಗಾಂಧಿ  ಸಲಹೆ ನೀಡಿದ್ದಾರೆ.

ಹೊಸ ಕೃಷಿ  ಕಾಯ್ದೆಗಳ ವಿರುದ್ಧ   ಪ್ರತಿಭಟನೆ  ನಡೆಸುತ್ತಿರುವ ರೈತರ ಪರವಾಗಿ   ಕಾಂಗ್ರೆಸ್  ಕಾರ್ಯಕರ್ತರೆಲ್ಲರೂ ನಿಲ್ಲಬೇಕು ಎಂದು  ಸೋನಿಯಾ ಕೋರಿದ್ದಾರೆ.  ಕೇಂದ್ರ  ಜಾರಿಗೊಳಿಸುತ್ತಿರುವ ಹೊಸ ಕೃಷಿ ಕಾಯ್ದೆಗಳಿಂದ ತೊಂದರೆಗೊಳಗಾಗಿರುವ  ರೈತರಿಗೆ  ಬೆಂಬಲವಾಗಿ ನಿಲ್ಲಬೇಕು,  ತಮ್ಮ ಜನ್ಮದಿನ ಆಚರಿಸಬಾರದು ಎಂದು ಸೋನಿಯಾ ಕೋರಿದ್ದಾರೆ.

ಸೋನಿಯಾ ಗಾಂಧಿ  ಜನ್ಮದಿನದ ಅಂಗವಾಗಿ  ಕೇಕ್ ಕತ್ತರಿಸುವುದು ಸೇರಿದಂತೆ  ಎಲ್ಲ ರೀತಿಯ ಕಾರ್ಯಕ್ರಮಗಳನ್ನು ರದ್ದುಪಡಿಸಬೇಕೆಂದು ಕಾಂಗ್ರೆಸ್  ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಎಲ್ಲ ರಾಜ್ಯಗಳ ಕಾಂಗ್ರೆಸ್  ಅಧ್ಯಕ್ಷರಿಗೆ  ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

ಸುದ್ದಿ ಓದಿ