ರಾಣೆಬೆನ್ನೂರ

ಕರ್ನಾಟಕದಿಂದ ಕನ್ಯಾಕುಮಾರಿವರೆಗೆ ಸಂದೇಶ ಹೊತ್ತು ಸಾಗಿ ತಾಯ್ನಾಡಿಗೆ ಮರಳಿದ ಸೋಲೋ ರೈಡರ್

ಕರ್ನಾಟಕದಿಂದ ಕನ್ಯಾಕುಮಾರಿವರೆಗೆ ಸಂದೇಶ ಹೊತ್ತು ಸಾಗಿ ತಾಯ್ನಾಡಿಗೆ ಮರಳಿದ ಸೋಲೋ ರೈಡರ್

ರಾಣೇಬೆನ್ನೂರು 31:  ಬಾಲ್ಯದಲ್ಲಿಯೇ ಪಾಲಕರ ಪ್ರೋತ್ಸಾಹ ಉತ್ತಮ ಮಾರ್ಗದರ್ಶನ ಗುರುಗಳಿಂದ ಶಿಕ್ಷಣದ ಜೊತೆಗೆ ನೈತಿಕ ಶಿಕ್ಷಣ ನೈಜವಾಗಿ ಸಿಕ್ಕರೆ ಪ್ರತಿಯೊಬ್ಬರ ಬದುಕಿನಲ್ಲಿ ಸಾಧನೆ ಮತ್ತು ಜೊತೆಗೆ ಯಶಶ್ವಿ ಶಿಖರವನ್ನು ತಲುಪಲು ಸಾಧ್ಯವಾಗುತ್ತದೆ ಎಂದು ರಾಣೇಬೆನ್ನೂರಿನಿಂದ ಕಾಸ್ಮೀರ ವರೆಗೆ ತನ್ನ ದ್ವೀಚಕ್ರವಾಹನದ ಮೂಲಕ ಸಂದೇಶ ಹೊತ್ತು ಸಂಚಾರ ಮಾಡಿ ಮರಳಿ ತಾಯ್ನಾಡಿಗೆ ಧಾವಿಸಿದ ಸೋಲೋ ರೈಡರ್ ಸಾಧಕಿ ಕು.ಕೋಮಲ್ ಪ್ರಭುಗೌಡ ಪಾಟೀಲ ಹೇಳಿದರು.  

ಅವರು ಇತ್ತೀಚಿಗೆ ಸಂಚಾರ ಪರಿಪೂರ್ಣಗೊಳಿಸಿ ನಗರಕ್ಕಾಗಮಿಸಿದ ಅವರನ್ನು ವಿವಿಧ ಸಂಘ ಸಂಸ್ಥೆಗಳು ಗಣ್ಯರು ವರ್ತಕರು ಹೃದಯ ಸ್ಪರ್ಶಿ ಸ್ವಾಗತಿಸಿ ಅಭಿನಂದಿಸಿ ಸನ್ಮಾನಿಸಿದ ಸಂದರ್ಭದಲ್ಲಿ ಸಾರ್ವಜನಕರನ್ನುದ್ದೇಶಿಸಿ ಮಾತನಾಡಿದರು. ನನ್ನ ಮೊದಲ ಗುರು ತಂದೆ-ತಾಯಿ ನಂತರ ನನ್ನ ಕಾಲೇಜಿನ ಸಹಪಾಠಿಗಳು, ಜೊತೆಗೆ ಅಭಿಮಾನದಿಂದ ಸಾಧನೆಗೆ ಸ್ಪೂರ್ತಿ ನೀಡಿದ ಸಮಾಜ, ಸಾರ್ವಜನಿಕರಾಗಿದ್ದಾರೆ. ಎಂದು ಭಾವಪೂರ್ಣವಾಗಿ ಸ್ಮರಿಸಿ ಮಾತನಾಡಿದ ಕೋಮಲ್ ಧೈರ್ಯ ಬಹಳ ಮುಖ್ಯ, ದೈರ್ಯವಿಲ್ಲದೆ ಇದ್ದರೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ನನಗೆ ಏನಾದರೂ ಮಾಡಬೇಕೆನ್ನುವ ಪ್ರಭಲವಾದ ಆಸೆ, ಇತ್ತು. ಅದಕ್ಕಾಗಿಯೇ ಈ ಸಮಾಜದ ವ್ಯವಸ್ಥೆಯಲ್ಲಿರುವ ವಾತಾವರಣವನ್ನು ತಿಳಿಗೊಳಿಸುವ ನಿಟ್ಟಿನಲ್ಲಿ ಭಾವೈಕ್ಯತೆಯ ಸಂದೇಶಹೊತ್ತು ಪ್ರವಾಸ ಕೈಗೊಂಡಿದ್ದೆ. ಅದರಲ್ಲಿ ಯಶಶ್ವಿಯೂ ಆಗಿದ್ದೇನೆ. ಇಷ್ಟಕ್ಕೆ ಮುಗಿಯಲಿಲ್ಲ. ಭವಿಷ್ಯದ ದಿನಗಳಲ್ಲಿ ಶಿಕ್ಷಣದ ಜೊತೆ ಜೊತೆಗೆ ಮತ್ತಷ್ಟು ವಿಶೇಷವಾಗಿ ಸಾಧಿಸುವ ಅಭಿಲಾಷೆ ಹೊಂದಿದ್ದೇನೆ ಎಂದರು.  

ಸಮಾಜದಲ್ಲಿರುವ ವ್ಯವಸ್ಥೆ ಸೂಕ್ಷ್ಮವಾಗಿ ಅವಲೋಕಿಸಿದರೆ ನಮ್ಮಿಂದ ಏನೂ ಮಾಡಲು ಸಾಧ್ಯ ಎನ್ನುವುದು ತನ್ನಿಂದ ತಾನೆ ತಿಳಿಯುತ್ತದೆ. ಈ ನಿಟ್ಟಿನಲ್ಲಿ ತಾವು ಚಿಂತನೆ ಮಾಡಿದಾಗ ಕಂಡು ಬಂದಿದ್ದು, ಖಿನ್ನದೆ ಒಳಪಟ್ಟು ಯುವಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು. ಇತಿಹಾಸದ ಭಾವೈಕ್ಯತೆ ಭಾರತ ಪ್ರಸ್ತುತ ಛಿದ್ರಗೊಳ್ಳುತ್ತಿರುವುದು. ಮತ್ತೆ ಮಕ್ಕಳಲ್ಲಿ ಶಿಸ್ತು, ಶಾಂತಿ ಸಮಾಧಾನ ಪರಸ್ಪರ ಸಮ್ಮಿಲನದ ಕೊರತೆ ಎದ್ದು ಕಾಣುತ್ತಲಿದೆ. ಭೂಮಿ ಮೇಲೆ ಜನ್ಮ ತಾಳಿದ್ದೇವೆ. ಈ ಜೀವ ಆಕಸ್ಮಿಕ, ಬದುಕಿನುದ್ದಕ್ಕೂ ಬಾಳಿ ಬದುಕಿ ನಮ್ಮ ನಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡಿ ಜೀವನ ಸಾರ್ಥಕತೆ ಪಡಿಸಿಕೊಳ್ಳುವ ಮನೋಭಾವನೆ ಇಂದಿನ ಅಗತ್ಯವಾಗಿದೆ ಎಂದು ಮಾರ್ಮಿಕವಾಗಿ ಹೇಳಿದರು. 

ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಭರತ್ ಎಂ ಕಾಳಸಿಂಗೆ, ಸಹಾಯಕ ಅಧೀಕ್ಷಕ ಕೆ.ಟಿ.ನಾಗರಾಜ್, ಪೂರ್ಣಿಮಾ ಪ್ರಕಾಶ ಕೋಳಿವಾಡ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಚೋಳಪ್ಪ ಕಸವಾಳ, ನಗರಸಭಾ ಸದಸ್ಯೆ ಸುಮಾ ಹುಚ್ಚಗೊಂಡರ, ನ್ಯೂಟರೀಶನ್ ಕ್ಲಬ್ ಮುಖ್ಯಸ್ಥ ಬಸವರಾಜ, ರಾಜಶ್ರೀ ಪ್ರ ಪಾಟೀಲ, ಎ.ಬಿ.ಪಾಟೀಲ, ದೀಪಕ್ ಹರಪನಹಳ್ಳಿ, ರವೀಂದ್ರಗೌಡ ಪಾಟೀಲ, ಕೊಟ್ರೇಶಪ್ಪ ಎಮ್ಮಿ, ಡಾ. ಬಸವರಾಜ ಕೇಲಗಾರ, ಡಾ. ಲತಾ ಬಸವರಾಜ ಕೇಲಗಾರ, ಕೃಷ್ಣಮೂರ್ತಿ ಲಮಾಣಿ, ಮುತ್ತು, ಕೆ.ಶಿವಲಿಂಗಪ್ಪ, ವೆಂಕಟೇಶ್ ಕಾಕಿ, ನಿತ್ಯಾನಂದ ಕುಂದಾಪುರ, ಕೊಟ್ರೇಶಪ್ಪ ಎಮ್ಮಿ, ಪಿ.ಆರ್‌.ಕುಪ್ಪೇಲೂರು, ಪ್ರಕಾಶ ಪಾಟೀಲ, ರಾಜಶೇಖರ ಹೊಸಮನಿ, ಶಿವಯೋಗಿ ಹಿರೇಮಠ, ಆರ್‌.ಆರ್‌.ಮುದ್ರಿ, ಶ್ರೀವಿಜಯ್, ಜಯಶ್ರೀ ಅಬೀಬ್‌. ಎಲ್‌.ಜಿ.ಶೆಟ್ಟರ್, ಯಲ್ಲಪ್ಪ ಗುತ್ತಲ್, ಸದಾ ಕೆಂಪಣ್ಣಣವರ, ಕುಮಾರ ಹುಲ್ಲತ್ತಿ, ಅಶೋ ಬೂದಿಗಾಳ, ಎಸ್‌.ಎಂ.ಹುಗ್ಗಿ ಸೇರಿದಂತೆ ಮತ್ತಿತರ ಗಣ್ಯರು, ಹಬೀಬ, ಮತ್ತು ಮೆಹರವಾಡೆ, ಪೂಜಾರ ಪಾಟೀಲ ಪರಿವಾರದವರು ಪಾಲ್ಗೊಂಡಿದ್ದರು. 


ಸುದ್ದಿ ಓದಿ