ರಾಣೆಬೆನ್ನೂರ

ಸೋಲೋ ರೈಡರ್ ಕರ್ನಾಟಕದಿಂದ ಕಾಶ್ಮೀರ್‌ದವರೆಗೆ ಪ್ರಯಾಣ

ಸೋಲೋ ರೈಡರ್ ಕರ್ನಾಟಕದಿಂದ ಕಾಶ್ಮೀರ್‌ದವರೆಗೆ ಪ್ರಯಾಣ

ರಾಣೇಬೆನ್ನೂರು 06:  ಇಲ್ಲಿನ ವಿಜಯಾ ವಾಹನ ಚಾಲನಾ ತರಬೇತಿ ಶಾಲೆಯ ಮಾಲೀಕ ಪ್ರಭುಗೌಡ ಜಯಶ್ರೀ ಪಾಟೀಲ, ಅವರ ಪುತ್ರಿ ಕೊಮಲ್ ಪಾಟೀಲ್, ಅವರು ನಗರದಿಂದ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಸೋಲೋ ರೈಡರ್ ಕರ್ನಾಟಕದಿಂದ ಕಾಶ್ಮೀರ್‌ದ ವರೆಗೆ ತನ್ನ ವಾಹನದ ಮೂಲಕ ಇದೇ ಮಾರ್ಚ್‌ 08ರಂದು ಬೆಳಿಗ್ಗೆ ‘ಒಂದೇ ದೇಶ ಒಂದೇ ಜನ’- ಡ್ರೈವಿಂಗ್ ಇಂಡಿಯಾ ಟೂ ಸೇಫ್ಟೀ ಎನ್ನುವ ಭಾವೈಕ್ಯತೆಯ ಸಂದೇಶ ಹೊತ್ತು ಪ್ರಯಾಣ ಬೆಳೆಸಲಿದ್ದಾಳೆ.  

ರಾಷ್ಟ್ರೀಯ ಫ್ರೇಡರೇಷನ್ ಸಹಯೋಗದಲ್ಲಿ ಪ್ರಯಾಣಿಸುತ್ತಿರುವ ಕುಮಾರಿ ಕೊಮಲ್ ಪಾಟೀಲ್ ಅತೀ ಚಿಕ್ಕ ವಯಸ್ಸಿನಲ್ಲಿ ಉತ್ಸಾಹದೊಂದಿಗೆ ಹೊಸತನವನ್ನು ಮತ್ತು ವೈಚಾರಿಕತೆಯನ್ನು ಮೈಗೂಡಿಸಿಕೊಂಡಿರುವ ಇವಳು ಕರ್ನಾಟಕದಿಂದ ಪ್ರಥಮ ಬಾರಿಗೆ ಈ ಸಾಹಸಕ್ಕೆ ಮುಂದಾಗಿದ್ದಾರೆ. 08ರಂದು ನಗರದಿಂದ ಪ್ರವಾಸ ಆರಂಭವಾಗಲಿದ್ದು ಅಂದು ಒಂದೇ ದಿನದಲ್ಲಿ 700 ಕೀ.ಮೀ. ಅಂತರದಲ್ಲಿ ಮುಂಬೈ ತಲುಪುವ ಗುರಿಹೊಂದಿದ್ದಾಳೆ.  

20 ದಿವಸಗಳ ಅವಧಿಯಲ್ಲಿ ಮುಂಬೈ, ವಡೋದರ, ಉದಯಪುರ, ಜೈಪುರ, ಅಮೃತ್‌ಸರ್, ಲುದೀನಾ, ಶಿಮ್ಲಾ, ದೆಹಲಿ, ಆಗ್ರಾ, ಇಂದೂರ, ಓರಂಗಾಬಾದ್, ಸೊಲ್ಲಾಪುರ, ಕರ್ನಾಟಕ ಹೀಗೆ ನಿತ್ಯವು ಸೂರ್ಯೋದಯ ಕಾಲ 6 ಘಂಟೆಯಿಂದ ಪ್ರಯಾಣ ಹೊರಡುವ ಕೊಮಲ್ ಸಂಜೆ 6 ಘಂಟೆಗೆ ವಿಶ್ರಾಂತಿ ಪಡೆಯುವಳು. 500 ಕೀ.ಮೀ ನಂತೆ  ಒಟ್ಟು 9000 ಸಾವಿರ ಕೀ.ಮೀ. ದಾರಿಯನ್ನು ಕ್ರಮಿಸಲಿದ್ದಾಳೆ. ಖಿನ್ನತೆ ಸರಿಯಲ್ಲ ಆತ್ಮಹತ್ಯೆ ಪರಿಹಾರವು ಅಲ್ಲ ಎನ್ನುವ ಸಂದೇಶವನ್ನು ನೀಡಬೇಕೆನ್ನುವ ಮಹಾದಾಸೆ ಹೊತ್ತಿರುವ ಕುಮಾರಿ ಪಾಟೀಲ್ ಕೆ.ಸಿ.ಡಿ ಭೂಮರೆಡ್ಡಿ ತಾಂತ್ರಿಕ ಕಾಲೇಜಿನಲ್ಲಿ ಬಿ.ಇ. ಮೆಕ್ಯಾನಿಕಲ್, 3ನೇ ವರ್ಷದ ಅಧ್ಯಯನ ಮಾಡುತ್ತಿದ್ದಾಳೆ. ಇವಳ ಕಿರಿಯ ವಯಸಿನ ಸಾಧನೆಗೆ ಅನೇಕ ಸಂಘ ಸಂಸ್ಥೆಗಳು, ಕ್ರೀಡಾಸಂಸ್ಥೆಗಳು ವರ್ತಕರು, ಗಣ್ಯರು ಸಾಂಸ್ಕೃತಿಕ ವಲಯದ ಮುಖಂಡರು ಹಾರ್ದಿಕವಾಗಿ ಅಭಿನಂದಿಸಿ ಭವಿಷ್ಯದ ದಿನಗಳಲ್ಲಿ ಸಾಧನೆಯ ಮೆಟ್ಟಿಲೇರಿ ಗಿನ್ನೀಸ್ ದಾಖಲೆಯಲ್ಲಿ ಗುರುತಿಸುವಂತಾಗಲೇಂದು ಸದಾಶಯ ವ್ಯಕ್ತ ಪಡಿಸಿದ್ದಾರೆ. 


ಸುದ್ದಿ ಓದಿ