ರಾಷ್ಟ್ರೀಯ

ರಜೌರಿ ಗಡಿಯಲ್ಲಿ ಸೈನಿಕ ಸಂಗ್ರಾಮ್ ಪಾಟೀಲ್ ಹುತಾತ್ಮ

ರಜೌರಿ ಗಡಿಯಲ್ಲಿ ಸೈನಿಕ ಸಂಗ್ರಾಮ್ ಪಾಟೀಲ್ ಹುತಾತ್ಮ

ಕೊಲ್ಹಾಪುರ: ಜಮ್ಮು ಕಾಶ್ಮೀರದ ರಜೌರಿ ಜಿಲ್ಲೆಯ ನೌಶೇರಾ ವಲಯದಲ್ಲಿ ಕಳೆದ ರಾತ್ರಿ ಪಾಕಿಸ್ತಾನ ಸೈನಿಕರು ಕದನ ವಿರಾಮ ಉಲ್ಲಂಘಿಸಿ ನಡೆಸಿದ ಗುಂಡಿನ ದಾಳಿಯಲ್ಲಿ 16ನೇ ಮರಾಠ ತುಕಡಿಯ ಸೈನಿಕ ಹವಾಲ್ದಾರ್ ಸಂಗ್ರಾಮ್ ಶಿವಾಜಿ ಪಾಟೀಲ್ ಹುತಾತ್ಮರಾಗಿದ್ದಾರೆ.

ಈ ಜಿಲ್ಲೆಯಲ್ಲಿ ಹುತಾತ್ಮರಾಗುತ್ತಿರುವ ಎರಡನೇ ಸೈನಿಕ ಇವರಾಗಿದ್ದಾರೆ. ನವೆಂಬರ್ 13ರಂದು ಇದೇ ಜಿಲ್ಲೆಯ ಅಜಾರ ತಹ್ಸೀಲ್ ನ ಬಹಿರೇವಾಡಿ ಗ್ರಾಮದ ನಿವಾಸಿ ಸೈನಿಕ ಋಷಿಕೇಶ್ ರಾಮಚಂದ್ರ ಜೋಂದಾಲೆ ಅವರು ಪಾಕಿಸ್ತಾನ ಸೈನಿಕರು ನಡೆಸಿದ ಗುಂಡಿನ ದಾಳಿಯಿಂದಾಗಿ ಜಮ್ಮು ಕಾಶ್ಮೀರದ ಉರಿ ವಲಯದ ಗುರೇಜ್ ಎಂಬಲ್ಲಿ ಹುತಾತ್ಮರಾಗಿದ್ದರು.

ಇಂದು ಬೆಳಗ್ಗೆ ವಿಷಯ ತಿಳಿಯುತ್ತಿದ್ದಂತೆ ನಿಗ್ವೆ-ಖಾಲ್ಸಾ ಗ್ರಾಮದ ನಿವಾಸಿಗಳಲ್ಲಿ ದುಃಖ ಮಡುಗಟ್ಟಿದೆ.

ಅಂತ್ಯಸಂಸ್ಕಾರಕ್ಕಾಗಿ ಮೃತದೇಹವನ್ನು ಗ್ರಾಮಕ್ಕೆ ಯಾವಾಗ ತರಲಾಗುತ್ತದೆ ಎಂಬುದರ ಬಗ್ಗೆ ಜಿಲ್ಲಾಡಳಿತಕ್ಕೆ ಇನ್ನೂ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ ಎಂದು ಮೂಲಗಳು ತಿಳಿಸಿವೆ

ಸುದ್ದಿ ಓದಿ