ಹೊಸಪೇಟೆ

ಪ್ರೊ.ಡಿ.ವಿ. ಪರಮಶಿವಮೂರ್ತಿಗೆ ಸೋದೆ ಸದಾಶಿವರಾಯ ಪ್ರಶಸ್ತಿ

ಪ್ರೊ.ಡಿ.ವಿ. ಪರಮಶಿವಮೂರ್ತಿಗೆ  ಸೋದೆ ಸದಾಶಿವರಾಯ ಪ್ರಶಸ್ತಿ

ಹಂಪಿ 22: ಸೋದೆ ಅರಸುಮನೆತನದ ಅತ್ಯಂತ ಪ್ರಸಿದ್ಧ ಅರಸ ಸೋದೆ ಸದಾಶಿವರಾಯರು. ಈ ಮನೆತನದ ಕೀರ್ತಿಯನ್ನು ದಶದಿಕ್ಕುಗಳಿಗೆ ಪಸರಿಸಿದವರು. ಸ್ವತಃ ಪಂಡಿತರಾಗಿದ್ದ ಇವರು ಅನೇಕ ಸಾಹಿತ್ಯ ಕೃತಿಗಳನ್ನು ರಚಿಸಿ ಸಾಹಿತ್ಯ ಕ್ಷೇತ್ರವನ್ನು ಬೆಳಗಿಸಿದವರು ಎಂದು ಪ್ರೊ.ಡಿ.ವಿ. ಪರಮಶಿವಮೂರ್ತಿ ಹೇಳಿದರು. 

ದಿ. 19 ರಂದು ಜಾಗೃತ ವೇದಿಕೆ, ಸೋಂದಾ, ಮಿಥಿಕ್ ಸೊಸೈಟಿ, ಬೆಂಗಳೂರು, ಪುರಾತತ್ವ ವಸ್ತು ಸಂಗ್ರಹಾಲಯಗಳು ಪರಂಪರೆ ಇಲಾಖೆ, ಮೈಸೂರು, ಸೋದೆ ಸದಾಶಿವರಾಯ ಪ್ರಶಸ್ತಿ ಪ್ರದಾನ ಸಮಿತಿ ಸಹಯೋಗದಲ್ಲಿ ನಡೆದ 7ನೇ ವರ್ಷದ ಸೋಂದಾ ಇತಿಹಾಸೋತ್ಸವದಲ್ಲಿ ‘ಪ್ರತಿಷ್ಠಿತ ಸೋದೆ ಸದಾಶಿವರಾಯ ಪ್ರಶಸ್ತಿ'ಯನ್ನು, ಕನ್ನಡ ವಿಶ್ವವಿದ್ಯಾಲಯ ಹಂಪಿಯ ಕುಲಪತಿಗಳಾದ ಡಾ.ಡಿ.ವಿ. ಪರಮಶಿವಮೂರ್ತಿ ಅವರಿಗೆ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು ಸೋಂದಾ, ಶ್ರೀ ಸ್ವರ್ಣವಲ್ಲಿ ಮಹಾಸಂಸ್ಥಾನ ಹಾಗೂ ಜಗದ್ಗುರು ಅಕಲಂಕ ಕೇಸರಿ ಸ್ವಸ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳು ನೀಡಿ ಗೌರವಿಸಿದರು. 

ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಅವರು ಸೋದೆ ಸದಾಶಿವರಾಯರ ಪ್ರಕಟಿತ ಕೃತಿಗಳು ಮರು ಮುದ್ರಣವಾಗಬೇಕು ಹಾಗೂ ಅಪ್ರಕಟ ಕೃತಿಗಳನ್ನು ಪತ್ತೆಹಚ್ಚಿ ಪ್ರಕಟಿಸುವ ಕೆಲಸವಾಗಬೇಕು. ಇವರ ಸಾಧನೆಗಳ ಕುರಿತು ಸಂಶೋಧನೆಗಳಾಬೇಕು. ಇಂದಿನ ಯುವಕರಿಗೆ ಇಂಥ ಅರಸರ ಆದರ್ಶಗಳು ಮಾದರಿಯಾಗಬೇಕು. ಇಂಥವರ ಚರಿತ್ರೆಯನ್ನು ಯುವಕರಿಗೆ ತಲುಪಿಸುವ ಕೆಲಸವಾಗಬೇಕು. ಇತಿಹಾಸದಿಂದ ಕಲಿಯುವ ನೈತಿಕ ಪಾಠಗಳು ಅನೇಕ ಇವೆ. ಅವುಗಳನ್ನು ಇಂದಿನ ಮಕ್ಕಳಿಗೆ, ಯುವಕರಿಗೆ, ಸಮಾಜಕ್ಕೆ ತಲುಪಿಸುವ ಕೆಲಸವಾಗಬೇಕು” ಎಂದು ಕರೆ ನೀಡಿದರು. 


ಸುದ್ದಿ ಓದಿ