ಚಿಕ್ಕೋಡಿ

ಸಮಾಜ ಸೇವಕ ಕುಮಾರ ಪಾಟೀಲ ಕಾರ್ಯ ಶ್ಲಾಘನೀಯ: ಶಾಸಕ ಗಣೇಶ

ಸಮಾಜ ಸೇವಕ ಕುಮಾರ ಪಾಟೀಲ ಕಾರ್ಯ ಶ್ಲಾಘನೀಯ: ಶಾಸಕ ಗಣೇಶ

ಚಿಕ್ಕೋಡಿ 17: ಬೀದರ ನಗರದಲ್ಲಿ ನಡೆಯುತ್ತಿರುವ ಅಗ್ನೀಪಥ ಸೇನಾ ನೇಮಕಾತಿಗೆ ಗಡಿ ಭಾಗದಿಂದ  ತೆರಳುವ 200 ಕ್ಕೂ ಅಧಿಕ ಯುವಕರಿಗೆ ಖಡಕಲಾಟ ಸಮಾಜ ಸೇವಕ ಕುಮಾರ ಪಾಟೀಲ ಉಚಿತ ಬಸ್ ವ್ಯವಸ್ಥೆ ಕಲ್ಪಿಸಿ ಬಡ ಮಕ್ಕಳಿಗೆ ಅನುಕೂಲ ಕಲ್ಪಿಸಿ ದೇಶ ಸೇವೆ ಮಾಡುವ ಯುವಕರಿಗೆ ಪ್ರೇರಣೆ ನೀಡುತ್ತಿರುವ ಕಾರ್ಯ ಶ್ಲಾಘನೀಯ ಎಂದು ಶಾಸಕ ಗಣೇಶ ಹುಕ್ಕೇರಿ ಹೇಳಿದರು.

ತಾಲೂಕಿನ ಖಡಕಲಾಟ ಗ್ರಾಮದ ಸಮಾಜ ಸೇವಕ ಕುಮಾರ ಪಾಟೀಲ ಅವರು ಕುಮಾರ ಪೌಂಡೇಶನ ವತಿಯಿಂದ ಬೀದರ ನಗರದಲ್ಲಿ ನಡೆಯುತ್ತಿರುವ ಸೇನಾ ನೇಮಕಾತಿ ರ್ಯಾಲಿಗೆ ತೆರಳುವ ಯುವಕರು ತೆರಳುವ ಉಚಿತ ಬಸ್ ವ್ಯವಸ್ಥೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಇಂದು ಸಮಾಜದಲ್ಲಿ ದೇವಸ್ಥಾನಗಳಿಗೆ ದೇಣಿಗೆ ನೀಡುವುದು, ಸಮುದಾಯ ಭವನಗಳನ್ನು ಕಟ್ಟಲು ದೇಣಿಗೆ ನೀಡುವುದು, ಅನ್ನದಾನ ಮಾಡುವುದು ಅಥವಾ ಹಲವಾರು ಸಾಮಾಜಿಕ ಚಟುವಟಿಕೆಗಳನ್ನು ಮಾಡುವುದು ವಾಡಿಕೆಯಾಗಿದೆ.  ಆದರೆ ಸೇನೆಗೆ ಸೇರಲಿರುವ ಯುವಕರಿಗೆ ನೆರವು ನೀಡುತ್ತಿರುವುದು ಇತಿಹಾಸದಲ್ಲಿ ಇದೇ ಮೊದಲು ಎಂದರು.

ಸಮಾಜ ಸೇವಕ ಕುಮಾರ ಪಾಟೀಲ ಮಾತನಾಡಿ, ಸಮಾಜದಲ್ಲಿ ದೇಶ ಸೇವೆಗೆ ಹೋಗಬಯಸುವ ಬಡ ಯುವಕರಿದ್ದಾರೆ, ಅಂತಹ ಯುವಕರಿಗೆ ಸೇನಾ ನೇಮಕಾತಿಗೆ ಹೋಗಲು ಹಣವಿಲ್ಲದ ತಾಲೂಕಿನ ಕೋಥಳಿ, ಕುಪ್ಪಾಣವಾಡಿ, ಹಂಡ್ಯಾನವಾಡಿ, ಮನೋಚಿವಾಡಿ, ನವಲಿಹಾಳ, ಪುಟಾನವಾಡಿ, ಖಡಕಲಾಟ ಸೇರಿದಂತೆ ನಾನಾ ಗ್ರಾಮಗಳ ಯುವಕರಿಗೆ ದೇಶ ಸೇವೆ ಮಾಡುವ ಅವಕಾಶ ಸಿಗುವಂತಾಗಲಿ  ಎಂದರು.

ಗ್ರಾಮದ ಮುಖಂಡ ಸತೀಶ ಪಾಟೀಲ ಮಾತನಾಡಿ,  17ರಂದು ಬೀದರ್ನಲ್ಲಿ ನಡೆಯುವ ಸೇನಾ ನೇಮಕಾತಿಗೆ ಎಲ್ಲ ಯುವಕರನ್ನು ಖಡಕಲಾಟ ಗ್ರಾಮದಿಂದ ಕಳಿಸಲಾಗುತ್ತಿದೆ. ಕುಮಾರ ಪಾಟೀಲ ಅವರು ಮೂರು ಬಸ್, ಊಟ ಹಾಗೂ ವಸತಿ ವ್ಯವಸ್ಥೆ ಸೇರಿದಂತೆ ಸುಮಾರು 5 ಲಕ್ಷ ರೂ ಹಣವನ್ನು ಯುವಕರಿಗೆ ಖರ್ಚು  ಮಾಡುತ್ತಿದ್ದಾರೆ ಎಂದರು.

ವಾಸು ಗಾವಡೆ, ಸುಭಾಷ ಕುಂಬೋಜೆ, ಬಂಡಾ ಸರದಾರ, ಪಿಡಿಒ ರಾಜಾಪುರೆ ಅವರು ಕುಮಾರ ಪಾಟೀಲ ಕಾರ್ಯವನ್ನು ಶ್ಲಾಘಿಸಿದರು.  

 ಸಿಐಎಸ್ಎಫ್ಗೆ ಆಯ್ಕೆಯಾದ ಖಡಕಲಾಟ  ಬಾಲು ಹೆಗಡೆ, ಮಮದಾಪುರೆ ಅವರ ಪುತ್ರ ನವಲಿಹಾಳೆ ಬಿಎಸ್ಎಫ್ಗೆ ಆಯ್ಕೆಯಾದರು, ಮನೋಚಿವಾಡಿ ಅವರ ಪುತ್ರ ಪ್ರವೀಣ್ ಖೋತ್ ಅವರನ್ನು ಕುಮಾರ ಪಾಟೀಲ ಫೌಂಡೇಶನ್ನಿಂದ ಸನ್ಮಾನಿಸಲಾಯಿತು. 

 ಈ ಸಂದರ್ಭದಲ್ಲಿ ಸುಭಾಷ ಕುಂಬೋಜೆ, ಹಬೀಬ್ ಪಾಕರ್ುಟೆ, ವಾಸು ಗಾವಡೆ, ರಾಘು ಗಾವಡೆ, ಮಿಥುನ ವರಾಳೆ, ರಮೇಶ ಚಿಂಚನೆ, ಬೀರ ಗಾವಡೆ, ಮ್ಹಾಳು ಗಾವಡೆ, ಯಲ್ಲಪ್ಪ ಗಾವಡೆ, ಶಂಕರ ಗಾವಡೆ, ಪ್ರವೀಣ ಪಾಟೀಲ, ಬಂಡ ಸರ್ಧಾರ, ಉಮೇಶ ಪಾಟೀಲ, ಸಂದೀಪ ಕಮಟೆ, ರಜನಿಕಾಂತ ವರದ ಮುಂತಾದವರು ಇದ್ದರು 

ಸುದ್ದಿ ಓದಿ