ಅನಾಥ ಮಕ್ಕಳಿಗೆ ಬೆಳ್ಳಿ ವಸ್ತು ವಿತರಿಸಿ ಹುಟ್ಟುಹಬ್ಬ ಆಚರಿಸಿಕೊಂಡ ಸಮಾಜಸೇವಕ ಆಕಾಶ ಹಲಗೇಕರ್
ಬೆಳಗಾವಿ: ಸಮಾಜಸೇವೆಯ ಮೂಲಕ ಜನಮನ ಗೆದ್ದಿರುವ ಸಮಾಜಸೇವಕ ಆಕಾಶ ಹಲಗೇಕರ್ ಅವರು ತಮ್ಮ ಹುಟ್ಟುಹಬ್ಬವನ್ನು ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸಿಕೊಂಡರು. ವೈಭವದ ಆಚರಣೆ, ಆಡಂಬರದ ಕಾರ್ಯಕ್ರಮ ಹಾಗೂ ಅನಗತ್ಯ ಖರ್ಚುಗಳಿಗೆ ದೂರವಿದ್ದು, ಅನಾಥ ಮಕ್ಕಳ ಮುಖದಲ್ಲಿ ಸಂತಸ ಮೂಡಿಸುವ ಉದ್ದೇಶದಿಂದ ಅನಾಥಾಶ್ರಮಕ್ಕೆ ಭೇಟಿ ನೀಡಿದ ಅವರು, ಮಕ್ಕಳೊಂದಿಗೆ ಆತ್ಮೀಯವಾಗಿ ಸಮಯ ಕಳೆಯುವುದರ ಜೊತೆಗೆ ಅವರ ಯೋಗಕ್ಷೇಮ ವಿಚಾರಿಸಿದರು. ಬಳಿಕ ಪ್ರತಿಯೊಬ್ಬ ಮಗುವಿಗೂ ಬೆಳ್ಳಿ ವಸ್ತುಗಳನ್ನು ವಿತರಿಸಿ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಆಕಾಶ ಹಲಗೇಕರ್, “ಹುಟ್ಟುಹಬ್ಬ ಎಂದರೆ ಕೇವಲ ಕೇಕ್ ಕತ್ತರಿಸಿ ಸಂಭ್ರಮಿಸುವುದಲ್ಲ. ಸಮಾಜಕ್ಕೆ ಉಪಯೋಗವಾಗುವ ಒಂದು ಸಣ್ಣ ಸೇವೆ ಮಾಡಿದರೆ ಅದೇ ನಿಜವಾದ ಸಂಭ್ರಮ” ಎಂಬ ಸಂದೇಶವನ್ನು ತಮ್ಮ ಕಾರ್ಯದ ಮೂಲಕ ಸಾರಿದರು.
ಅವರ ಈ ಮಾನವೀಯ ಕಾರ್ಯಕ್ಕೆ ಗಣ್ಯರು, ಸ್ನೇಹಿತರು ಹಾಗೂ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಯಿತು. ಜನ್ಮದಿನವನ್ನು ಸೇವಾ ದಿನವನ್ನಾಗಿ ಆಚರಿಸುವ ಮೂಲಕ ಯುವಕರಿಗೆ ಆಕಾಶ ಹಲಗೇಕರ್ ಅವರು ಮಾದರಿಯಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಲಾಯಿತು.
ಈ ಸಂದರ್ಭದಲ್ಲಿ ದೀಪಕ್ ಕೇತಕರ್, ಭಾವಕೇಶ ಪಿರಗಣ್ಣವರ್, ಪರಶುರಾಮ ಮಂಗಣ್ಣವರ್, ಶ್ವೇತಾ ಕೋಟ್ಯಾನ್, ಶಿಲ್ಪಾ ಮಠಪತಿ, ಮಹಾಂತೇಶ ಕೋಲಕಾರ, ಕಿರಣ ಶಿಂದೊಳಿಕರ, ಶಶಿಕುಮಾರ ಹುಲ್ಲೊಳ್ಳಿ, ಶ್ರೀ ಮಂಗಣ್ಣವರ್, ರಾಜಕುಮಾರ ರಾಠೋಡ, ಸಿದ್ಧಾರ್ಥ ಸಂಪಗಾವಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ದೇವರ ಅನ್ನ ಫೌಂಡೇಶನ್ ವತಿಯಿಂದ ಸಮಾಜಸೇವಕ ಆಕಾಶ ಹಲಗೇಕರ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳನ್ನು ಸಲ್ಲಿಸಲಾಯಿತು. ಅವರಿಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಹಾಗೂ ಇನ್ನಷ್ಟು ಸಮಾಜಸೇವೆ ಮಾಡುವ ಶಕ್ತಿ ದೊರೆಯಲಿ ಎಂದು ಹಾರೈಸಲಾಯಿತು.