ಸಮಾಜ ಕಲ್ಯಾಣ ಇಲಾಖೆಯಿಂದ ಕಣ್ಮುಚ್ಚಿ ಪರೀಶೀಲನೆ, ಜಾಣ ಕುರುಡುತನ ತೋರಿದ ಮಾಲವಿ ಗ್ರಾಮ ಪಂಚಾಯತಿ
ಬಳ್ಳಾರಿ : ತಾಲೂಕಿನ ಮಾಲವಿ ಪಂಚಾಯತಿ ವ್ಯಾಪ್ತಿಯ (ಶ್ರೀರಾಮನಗರ) ಕೋಗಳಿ ತಾಂಡ ಪ್ರಧಾನ ಮಂತ್ರಿ ಆದರ್ಶ ಗ್ರಾಮವಾಗಿ ಆಯ್ಕೆಯಾಗಿದೆ ಆದರೆ ಗ್ರಾಮದಲ್ಲಿ ರಸ್ತೆ, ಚರಂಡಿ ಸೇರಿದಂತೆ ಮೂಲಭೂತ ಸೌಕರ್ಯಗಳು ಮಾಯವಾಗಿದ್ದು, ಗ್ರಾಮಕ್ಕೆ ಬೆಳಕು ಚೆಲ್ಲುವ ಸುಮಾರು 10ಲಕ್ಷ ಹಣ ವ್ಯಯಿಸಿದ ಹೈಮಾಸ್ಟ್ ಲೈಟ್ಗಳು ಕಾರ್ಯ ನಿರ್ವಹಿಸದೇ ತಿಂಗಳುಗಳೇ ಕಳೆದು ಹೋಗಿವೆ, ಸಮಾಜ ಕಲ್ಯಾಣ ಇಲಾಖೆಯಿಂದ ನಿರ್ಮಿಸಲ್ಪಟ್ಟ ಲೈಟ್ಗಳ ಪರುಸ್ಥಿತಿಯನ್ನು ಇಲಾಖೆ ಕಣ್ಮುಚ್ಚಿ ಪರೀಶೀಲಿಸಿತೇ ಅಥವಾ ಲೈಟ್ಗಳ ಮೆಟೆಂನೆನ್ಸ್ ಮಾಡುವಲ್ಲಿ ಮಾಲವಿ ಪಂಚಾಯತಿ ಜಾಣ ಕುರುಡುತನ ಪ್ರದರ್ಶಿಸುತ್ತಿದೆಯೇ ಎಂಬುದು ಗ್ರಾಮಸ್ಥರಿಗೆ ತಿಳಿಯದಂತಾಗಿದೆ.
ರಸ್ತೆಗಳಲ್ಲಿ ಹರಿಯುತ್ತಿರುವು ಚರಂಡಿ ನೀರು : ಗ್ರಾಮದಲ್ಲಿ ಚರಂಡಿ ವ್ಯೆವಸ್ಥೆಯು ಇರದೇ ಇರುವುದರಿಂದ ಬಳಸಿದ ನೀರು ಸರಾಗವಾಗಿ ರಸ್ತೆಗಳಲ್ಲಿ ಹರಿಯುತ್ತಿದ್ದು ರಸ್ತೆಗಳೇ ಚರಂಡಿಯಾಗಿವೆ, ಗ್ರಾಮದ ಸಂಘಗಳು ಇದರ ಬಗ್ಗೆ ಗ್ರಾಮ ಪಂಚಾಯತಿ ಅಧಿಕಾರಿಗಳ ಗಮನಕ್ಕೆ ತಂದು ಹಲವು ಮನವಿ ಪತ್ರಗಳು ನೀಡಿದ್ದು ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಇಲ್ಲಿನ ಸ್ಥಳೀಯರ ವಾದ.
ಜಾಣ ಕುರುಡುತನ ಪ್ರದರ್ಶಿಸುತ್ತಿರುವ ಸಮಾಜ ಕಲ್ಯಾಣ ಇಲಾಖೆ : ಸಮಾಜ ಕಲ್ಯಾಣ ಇಲಾಖೆಯಿಂದ 35 ಲಕ್ಷಕ್ಕೂ ಹೆಚ್ಚು ಹಣ ವ್ಯಯಿಸಿ ನಿರ್ಮಿಸಿರುವ 4 ಹೈಮಾಸ್ಟ್ ಲೈಟ್ಗಳು ನಾಮ್ ಕೇ ವಾಸ್ಥೆ ಎಂಬಂತೆ ತಲೆ ಎತ್ತಿ ನಿಂತಿವೆಯೇ ಹೊರತು ಬೇಳಗುವ ಮಾತೇ ಇಲ್ಲಾ, ಶುರುವಾದ ನಾಲ್ಕಾರು ತಿಂಗಳ ನಂತರ ಲೈಟ್ಗಳು ಬೆಳಕು ಚೆಲ್ಲದೇ ಸ್ಥಬ್ಧವಾಗಿವೆ ಇವುಗಳಿಗೆ ವ್ಯಾರಂಟಿ, ಗೈರಂಟಿ ಇದೆಯೋ ಇಲ್ಲವೂ ಎಂಬುದನ್ನು ಸಮಾಜ ಕಲ್ಯಾಣ ಇಲಾಖೆಯ ನೋಡದಿರುವುದು ಕಂಡರೆ ಗುತ್ತಿಗೆದಾರ ಇಲಾಖೆಗೆ ಹಸ್ತಾತರಿಸುವಾಗ ಇಲಾಖೆ ಕಣ್ಮುಚ್ಚಿತ್ತೆ ತಿಳಿಯದಂತಾಗಿದೆ.
ರಸ್ತೆಗಳಲ್ಲಿ ಚರಂಡಿ ನೀರು : ಗ್ರಾಮದ ಕೆಲ ಕಡೆ ಮನೆಗಳಲ್ಲಿ ಬಳಸಿದ ನೀರು ಚರಂಡಿ ಸೇರದೇ ರಸ್ತೆಗಳಲ್ಲಿ ಶೇಖರಣೆಯಾಗುತ್ತಿದ್ದು ಗ್ರಾಮಸ್ಥರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದರ ಜೊತೆ ರೋಗಗಳ ಹರಡುವ ತಾಣವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಶಾಲೆಗೆ ತೆರಳುವ ಮಕ್ಕಳು ಈ ಕಲುಷಿತ ನೀರು ನಿಂತಿರುವ ರಸ್ತೆಗಳನ್ನು ದಾಟಲು ಹರಸಾಹಸ ಪಡುತ್ತಿರುವುದು ದಿನನಿತ್ಯದ ಕೆಲಸವಾಗಿದೆ.
ನೂತನ ಶಾಸಕರು ಇತ್ತ ನೋಡುವರೆ ಕಾದು ನೋಡಬೇಕು : ನೂತನ ಶಾಸಕ ನೇಮಿರಾಜ್ ನಾಯ್ಕ್ ಗ್ರಾಮದಲ್ಲಿನ ಮೂಲಭುತ ಸೌಲಭ್ಯಗಳನ್ನು ಸರಿಪಡಿಸುವುದರ ಜೊತೆ ಇಲ್ಲಿನ ಗ್ರಾಮ ಪಂಚಾಯತಿಗೆ ಹಾಗೂ ಕಣ್ಮುಚ್ಚಿ ಗುತ್ತಿಗೆದಾರರಿಗೆ ಸಾಥ್ ನೀಡಿದ ಸಮಾಜ ಕಲ್ಯಾಣ ಇಲಾಖೆಗೆ ಸೂಕ್ತ ತಾಕೀತು ನೀಡುವರೆ ಕಾದು ನೋಡಬೇಕಿದೆ.
ಒಟ್ಟಾರೆಯಾಗಿ ಪ್ರಧಾನ ಮಂತ್ರಿ ಅದರ್ಶ ಗ್ರಾಮವಾಗಿ ಆಯ್ಕೆಯಾದ ಕೋಗಳಿ ತಾಂಡ(ಶ್ರೀರಾಮನಗರ)ದಲ್ಲಿ ಮೂಲಭೂತ ಸೌಕರ್ಯಗಳು ಮರೆಯಾಗಿದ್ದು ಆದರ್ಶ ಗ್ರಾಮ ಕೇವಲ ದಾಖಲೆಗಳಿಗೆ ಸೀಮಿತವಾಗದೇ ಶೀಘ್ರವೇ ಇದಕ್ಕೆ ಸಂಭಂಧಿಸಿದ ಮೇಲಾಧಿಕಾರಿಗಳು ಇತ್ತ ಚಿತ್ತ ಹರಿಸಿ ಗ್ರಾಮದ ಸೌಲಭ್ಯಗಳನ್ನು ಸಮರ್ಕವಾಗಿ ಒದಗಿಸಬೇಕು ಎಂಬುದು ಇಲ್ಲಿನ ಗ್ರಾಮಸ್ಥರ ವಾದವಾಗಿದೆ.
ಕೋಟ್ 01 : ಕಳೆದ 8 ತಿಂಗಳ ಹಿಂದೆ ಗ್ರಾಮ ಪಂಚಾಯತಿಗೆ ಹೈಮಾಸ್ಟ್ ಲೈಟ್ಗಳ ಕಾರ್ಯ ಪೂರ್ಣಗೊಳಿಸಿ ಹಸ್ತಾಂತರಗೊಳಿಸಿದ್ದಾರೆ, ಇದರಲ್ಲಿ ನಮಗೆ ಯಾವುದೇ ಗ್ಯಾರಂಟಿ ವ್ಯಾರಂಟಿಗಳ ಬಗ್ಗೆ ಮಾಹಿತಿ ನೀಡಿಲ್ಲ, ಕೆಲ ದಿನಗಳಲ್ಲೆ ಗ್ರಾಮ ಸಭೆ ನಡೆಸಿ ಶೀಘ್ರ ಸಮಸ್ಯೆ ಬಗೆಹರಿಸಲಾಗುವುದು, ಶಾಲೆಗಳು ಪ್ರಾರಂಭವಾಗುವುದಕ್ಕೂ ಮುಂಚೆ ಶಾಲೆಗೆ ಹೋಗುವ ದಾರಿಯಲ್ಲಿ ಶೇಖರಣೆಯಾಗು ಕಲುಷಿತ ನೀರಿನ ಸಮಸ್ಯೆ ಪರಿಹರಿಸಲಾಗುವುದು.
ಶ್ರೀಕಾಂತ್, ಪಿಡಿಒ, ಮಾಲವಿ ಗ್ರಾಮ ಪಂಚಾಯತಿ.
ಕೋಟ್ 02 : ಆದರ್ಶ ಗ್ರಾಮಕ್ಕೆ ನಾಚಿಕೆಯಾಗುವಂತಿದೆ, ಗ್ರಾಮ ಪಂಚಾಯತಿಯು ಕಣ್ಣು ಮುಚ್ಚಿ ಹೈಮಾಸ್ಟ್ ಲೈಟ್ಗಳ ನಿರ್ವಹಣೆಯನ್ನು ಹಸ್ತಾಂತರ ಮಾಡಿಕೊಂಡಂತಿದೆ, ಇದರ ಬಗ್ಗೆ ಕೇಳಿದರೆ ಬಣ್ಣದ ಮಾತುಗಳನ್ನಾಡಿ ಸಾಗಹಾಕಿದ್ದಾರೆ ಇಲ್ಲಿನ ಅಧಿಕಾರಿಗಳು, ಇನ್ನು ಹಸ್ತಾರಗೊಂಡಿಲ್ಲ ಎಂಬ ಸುಳ್ಳು ಹೇಳಿಕೆಗಳನ್ನು ನೀಡಿದ್ದಾರೆ, ರಾತ್ರಿಯಾದರೆ ಗ್ರಾಮವಿಡಿ ಕತ್ತಲಲ್ಲೆ ಮುಳುಗುತ್ತದೆ, ಶೀಘ್ರವೇ ಸಂಬಂಧಿಸಿದ ಅಧಿಕಾರಿಗಳು ಜನಪ್ರತಿನಿಧಿಗಳು ಸಮಸ್ಯೆ ಬಗೆಹರಿಸಿ ಗ್ರಾಮಕ್ಕೆ ಬೆಳಕಾಗಬೇಕಿದೆ.