ಶಿರಡಿ ಪ್ರವೇಶಿಸದಂತೆ ಸಾಮಾಜಿಕ ಕಾರ್ಯಕರ್ತೆ ತೃಪ್ತಿ ದೇಸಾಯಿಗೆ ನಿರ್ಬಂಧ
ಶಿರಡಿ, ಡಿಸೆಂಬರ್ 9: ಸಾಮಾಜಿಕ ಕಾರ್ಯಕರ್ತೆ ತೃಪ್ತಿ ದೇಸಾಯಿಗೆ ಶಿರಡಿ ಪ್ರವೇಶವನ್ನು ಇದೇ 11ರವರೆಗೆ
ನಿರ್ಬಂಧಿಸಲಾಗಿದೆ.
ಭಕ್ತರಿಗೆ ಸಾಂಪ್ರದಾಯಿಕ ಉಡುಪು ಧರಿಸುವಂತೆ ಕೋರಿ ದೇವಾಲಯದ ಅಧಿಕಾರಿಗಳು ಹಾಕಿದ ಬೋರ್ಡ್ಗಳನ್ನು ತೆಗೆದುಹಾಕುವುದಾಗಿ ಬೆದರಿಕೆ ಹಾಕಿದ್ದ ಸಾಮಾಜಿಕ ಕಾರ್ಯಕರ್ತೆ ತೃಪ್ತಿ ದೇಸಾಯಿ ಅವರಿಗೆ 11 ರವರೆಗೆ ಶಿರಡಿಗೆ ಪ್ರವೇಶಿಸದಂತೆ ತಡೆಯಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಾನೂನು
ಮತ್ತು ಸುವ್ಯವಸ್ಥೆಯ ದೃಷ್ಟಿಯಿಂದ, ದೇಸಾಯಿ ಅವರಿಗೆ ಮಂಗಳವಾರ ಸಿಆರ್ಪಿಸಿಯ ಸೆಕ್ಷನ್ 144 ರ ಅಡಿಯಲ್ಲಿ
ನೋಟಿಸ್ ನೀಡಲಾಗಿದೆ. ಡಿಸೆಂಬರ್ 11 ರವರೆಗೆ ಶಿರಡಿ ಪುರಸಭೆಯ ವ್ಯಾಪ್ತಿಗೆ ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿದೆ.
ಕಾನೂನು
ಸುವ್ಯವಸ್ಥೆ ಸ್ಥಿತಿಯನ್ನು ಉಲ್ಲೇಖಿಸಿ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಗೋವಿಂದ್ ಶಿಂಧೆ ದೇಸಾಯಿ ಅವರಿಗೆ
ನೋಟಿಸ್ ನೀಡಿದ್ದು, ಡಿಸೆಂಬರ್ 8 ಮಧ್ಯರಾತ್ರಿಯಿಂದ ಡಿಸೆಂಬರ್ 11 ಮಧ್ಯರಾತ್ರಿಯವರೆಗೆ.ಅಹ್ಮದ್ನಗರ
ಜಿಲ್ಲೆಯಲ್ಲಿರುವ ಶಿರಡಿಗೆ ಪ್ರವೇಶಿಸದಂತೆ ಸೂಚಿಸಲಾಗಿದೆ. ವಿವಾದಾತ್ಮಕ ಬೋರ್ಡ್ಗಳನ್ನು ತೆಗೆದುಹಾಕದಿದ್ದರೆ ಇದೇ 10 ರಂದು ತಾನು ಹಾಗೂ ಇತರೆ ಬೆಂಬಲಿಗರು ಶಿರಡಿಗೆ ಬಂದು ಅದನ್ನು ತೆರವು ಮಾಡುವುದಾಗಿ ಎಚ್ಚರಿಕೆ
ನೀಡಿದ್ದರು .