ಶಿಗ್ಗಾವ್

ಆರನೂರು ವಿಧ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಜಾನಪದ ಪರೀಕ್ಷಾಂಗ ವಿಭಾಗದ ಸಾಧನೆ: ಪ್ರೊ.ಟಿ.ಎಮ್‌.ಭಾಸ್ಕರ್

ಆರನೂರು ವಿಧ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಜಾನಪದ ಪರೀಕ್ಷಾಂಗ ವಿಭಾಗದ ಸಾಧನೆ: ಪ್ರೊ.ಟಿ.ಎಮ್‌.ಭಾಸ್ಕರ್

ಶಿಗ್ಗಾವಿ 13:  ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಪ್ರಾರಂಭವಾಗಿ ಹನ್ನೆರಡು ವರ್ಷ ಗತಿಸಿವೆ ಪ್ರಾರಂಭದಿಂದಲೂ ವಿಧ್ಯಾರ್ಥಿಗಳ ಸಂಖ್ಯೆ ಕಡಿಮೆ ಇತ್ತು ಕಳೆದೆರಡು ವರ್ಷಗಳಿಂದ ವಿಧ್ಯಾರ್ಥಿಗಳ ಪ್ರವೇಶಾತಿಯು ಹೆಚ್ಚಿಗೆಯಾಗಿದೆ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ವಿಶ್ವದ ಮಟ್ಟದಲ್ಲಿ ಗುರುತಿಸಿಕೊಳ್ಳಬೇಕು ಎಂಬುದು ನಮ್ಮಯ ಹೆಬ್ಬಯಕೆ ಎಂದು ಕರ್ನಾಟಕ ಜಾನಪದ ವಿವಿಯ ಕುಲಪತಿ ಪ್ರೊ.ಟಿ.ಎಮ್‌.ಭಾಸ್ಕರ್ ಹೇಳಿದರು. 

ತಾಲೂಕಿನ ಗೊಟಗೋಡಿಯಲ್ಲಿರುವ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ನಡೆದ ಸ್ನಾತಕೋತ್ತರ ವಿಭಾಗಗಳ ಪ್ರಥಮ ಚಾತುರ್ಮಾಸದ ವಿಧ್ಯಾರ್ಥಿಗಳ ಪರೀಕ್ಷಾ ಕೊಠಟಿಡಿಗಳಿಗೆ ಬೇಟಿ ನೀಡಿ ಮಾತನಾಡಿದ ಅವರು ಕರ್ನಾಟಕ ಜಾನಪದ ವಿವಿಯು ದೇಶದ ಎಲ್ಲ ವಿಶ್ವವಿದ್ಯಾಲಗಳಿಗಿಂತ ಬಿನ್ನವಾಗಿದ್ದು ಗ್ರಾಮೀಣ ಜ್ಞಾನ ಪರಂಪರೆಯನ್ನು ವಿಸ್ತರಿಸುವ ಕಲಿಸುವ ಒಂದು ಸಂಸ್ಥೆಯಾಗಿದೆ ಈ ವರ್ಷದಲ್ಲಿ ಪ್ರಥಮ ಚಾತುರ್ಮಾಸದ ಸುಮಾರು ಆರನೂರು ವಿಧ್ಯಾರ್ಥಿಗಳು ಏಕ ಕಾಲದಲ್ಲಿ ಪರೀಕ್ಷೆ ಬರೆಯುತ್ತಿರುವುದು ಇತಿಹಾಸಾವೇ ಸರಿ ಏಕೆಂದರೆ ನಮ್ಮಲ್ಲಿ ತರಗತಿ ಕೊಠಡಿ ಹಾಗೂ ಇನ್ನಿತರ ಮೂಲಭೂತ ಸೌಲಭ್ಯಗಳ ಕೊರತೆ ಇದೆ ಆದರೆ ಮೌಲ್ಯಮಾಪನ ಕುಲಸಚಿವ ಪ್ರೊ.ಎನ್‌.ಎಮ್‌.ಸಾಲಿ ಅವರು ಆ ಕೊರತೆಗಳ ನಡುವೆಯು ಇದ್ದ ಸೌಕರ್ಯಗಳನ್ನೆ ಬಳಸಿಕೊಂಡು ಆರನೂರು ವಿಧ್ಯಾರ್ಥಿಗಳ ಪರೀಕ್ಷೆಯನ್ನು ಅಚ್ಚುಕಟ್ಟಾಗಿ ಯಾವುದೇ ತೊಂದರೆಯಿಲ್ಲದೆ ಜವಾಬ್ದಾರಿ ನಿಭಾಯಿಸಿದ್ದಾರೆ  ಎಂದರು. 

ಮೌಲ್ಯಮಾಪನ ಕುಲಸಚಿವ ಪ್ರೊ.ಎನ್‌.ಎಮ್‌.ಸಾಲಿ ಅವರು ಮಾತನಾಡಿ ಕರ್ನಾಟಕ ಜಾನಪದ ವಿವಿಯ ಪ್ರಾರಂಭದ ಹಂತದಿಂದ ವಿಧ್ಯಾರ್ಥಿಗಳ ಸಂಖ್ಯೆ ಕಡಿಮೆ ಇತ್ತು ನಂತರ ಅದು ಕ್ರಮೇಣ ಹೆಚ್ಚಿಗೆ ಆಯಿತು ಈ ಶೈಕ್ಷಣಿಕ ವರ್ಷದಲ್ಲಿ ಸುಮಾರು ಆರನೂರು ವಿಧ್ಯಾರ್ಥಿಗಳು  ಪರೀಕ್ಷೆ ಬರೆಯುತ್ತಿರುವುದು ಇದೆ ಮೊದಲು ವಿಶ್ವವಿದ್ಯಾಲಯದಲ್ಲಿ ಸಾಕಷ್ಟು ಮೂಲಭೂತ ಸೌಲಭ್ಯಗಳ ಕೊರತೆ ಇದ್ದರು ಸಹ ಮಾನ್ಯ ಕುಲಪತಿಗಳ ಮಾರ್ಗದರ್ಶನದಲ್ಲಿ ಆ ಎಲ್ಲ ಕೊರತೆಗಳನ್ನು ನಿಭಾಯಿಸಿ ಇಂದು ಪರೀಕ್ಷೆಗಳನ್ನು ಯಶಸ್ವಿಯಾಗಿ ಮುಗಿಸಿದ್ದೇವೆ ಎಂದರು. 


ಸುದ್ದಿ ಓದಿ