ಬಳ್ಳಾರಿ

ಸಿರುಗುಪ್ಪ: ಇಂದು ವಿದ್ಯುತ್ ವ್ಯತ್ಯಯ

ಸಿರುಗುಪ್ಪ: ಇಂದು ವಿದ್ಯುತ್ ವ್ಯತ್ಯಯ

ಬಳ್ಳಾರಿ,ಜೂ.06:ಸಿರುಗುಪ್ಪ ಜೆಸ್ಕಾಂ ವ್ಯಾಪ್ತಿಗೆ ಬರುವ 110/11 ಕೆವಿ ಸಿರಿಗೇರಿ ಕ್ರಾಸ್ ವಿದ್ಯುತ್ ವಿತರಣ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಕೈಗೊಳ್ಳುತ್ತಿರುವುದರಿಂದ ಜೂ.07 ರಂದು ಬೆಳಗ್ಗೆ 9 ರಿಂದ ಸಂಜೆ 4 ರವರೆಗೆ ಉತ್ತನೂರು, ಸಿರಿಗೇರಿ, ಕರೂರು, ಶಾನವಾಸಪುರ, ಊಳೂರು, ತಾಳೂರು, ಕೊಂಚಿಗೇರಿ, ಮುದ್ದಟನೂರು, ಬೈರಾಪುರ ಪಂಚಾಯಿತಿಗಳ ವ್ಯಾಪ್ತಿಗೆ ಬರುವ ಎಲ್ಲಾ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಸಿರುಗುಪ್ಪ  ಜೆಸ್ಕಾಂನ ಉಪವಿಭಾಗದ ಸಹಾಯಕ ಇಂಜಿನಿಯರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ 

ಸುದ್ದಿ ಓದಿ