ಸಿರಿಗೇರಿ: ಗ್ರಾಮಸ್ಥರನ್ನು ಭೇಟಿ ಮಾಡಿದ ಚುನಾವಣಾ ಅಧಿಕಾರಿ ಕೆ ಹೆಚ್ ಸತೀಶ್
ಸಿರುಗುಪ್ಪ09: ತಾಲೂಕಿನ ಸಿರಿಗೇರಿ ಗ್ರಾಮದ 1ನೇ ವಾರ್ಡ್ ಬಸವನಪೇಟೆಗೆ ಚುನಾವಣಾ ಅಧಿಕಾರಿ ಕೆ ಹೆಚ್ ಸತೀಶ್ ಅವರೊಂದಿಗೆ ತಹಶೀಲ್ದಾರ್ ಎನ್ ಆರ್ ಮಂಜುನಾಥ ಸ್ವಾಮಿ, ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮಡಗಿನ ಬಸಪ್ಪ, ಸೆಕ್ಟರ್ ಅಧಿಕಾರಿ ರಾಘವೇಂದ್ರವರ್ಮ, ಪಿಡಿಒ ಶಿವಕುಮಾರ್ ಕೋರಿ, ಅವರು ಗ್ರಾಮದ ನಿವಾಸಿಗಳ ಮೂಲಸೌಕರ್ಯ ಒದಗಿಸುವ ಬಗ್ಗೆ ಆಗ್ರಹಿಸಿದ ನಿವಾಸಿಗಳು ಮತದಾನ ಬಹಿಷ್ಕಾರ ಮಾಡುವುದಾಗಿ ತಿಳಿಸಿದ್ದರಿಂದ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಚರ್ಚಿಸಿದರು ನಂತರ ಚುನಾವಣಾ ಅಧಿಕಾರಿ ಕೆ ಹೆಚ್ ಸತೀಶ್ ಮಾತನಾಡಿ ಮತದಾನ ಮಾಡುವುದು ನಮ್ಮೆಲ್ಲರ ಕರ್ತವ್ಯ ಎಲ್ಲರೂ ಮತದಾನ ಮಾಡಿರಿ 10 ದಿನಗಳೊಗೆ ಇಲ್ಲಿಯ ಸಮಸ್ಯೆ ಆಗದಂತೆ ಕುಡಿಯುವ ನೀರು ರಸ್ತೆ ಮುಂತಾದ ಸೌಲಭ್ಯ ಗ್ರಾಮ ಆಡಳಿತ ಜೊತೆಗೆ ಸೂಕ್ತ ಕ್ರಮ ಕೈಗೊಂಡು ಪರಿಹರಿಸುವುದಾಗಿ ಮತ್ತು ಈ ಬಗ್ಗೆ ಎಚ್ಚರ ವಹಿಸುವುದಾಗಿ ಎಂದರು ವಾರ್ಡ್ನ ನಿವಾಸಿ ಹುಲಿಗೆಮ್ಮ, ಶ್ರೀದೇವಿ, ಗ್ರಾಮ ಪಂಚಾಯತ್ ಸದಸ್ಯ ಸುಜಾತ, ಕುಮಾರ ಗೌಡ, ಗ್ರಾಮ ಲೆಕ್ಕಾಧಿಕಾರಿ ಕರಣಂ ನಾಗರಾಜ್ ಸೇರಿದಂತೆ ಗ್ರಾಮಸ್ಥರಿದ್ದರು ಇದ್ದರು.