ಸಿರಿಗನ್ನಡ ಕನ್ನಡ ಪ್ರತಿಭಾ ಪರೀಕ್ಷೆಯ ಪ್ರಶಸ್ತಿ ಪ್ರಧಾನ ಸಮಾರಂಭ
ಶಿಗ್ಗಾವಿ 17: ಭಾಷೆ ಎಂಬುದು ದೇವರು ಮಾನವನಿಗೆ ಕಲ್ಪಿಸಿಕೊಟ್ಟಿರುವ ಅಮೂಲ್ಯವಾದ ವರ, ಭಾಷೆ ಇಲ್ಲದೇ ಈ ಜಗತ್ತನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಚನ್ನಪ್ಪ ಕುನ್ನೂರ ಆಂಗ್ಲ ಮಾಧ್ಯಮ ಶಾಲೆಯ ಪ್ರಾಚಾರ್ಯ ಎಸ್.ಹೆಚ್.ಹಾವೇರಿ ಹೇಳಿದರು.
ಪಟ್ಟಣದ ಚನ್ನಪ್ಪ ಕುನ್ನೂರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಸಿರಿಗನ್ನಡ ಕನ್ನಡ ಪ್ರತಿಭಾ ಪರೀಕ್ಷೆಯ ಪ್ರಶಸ್ತಿ ಪ್ರಧಾನ ಸಮಾರಂಭ ಉದ್ದೇಶಿಸಿ ಮಾತನಾಡಿದ ಅವರು ಮನುಷ್ಯ ಮನುಷ್ಯರ ನಡುವೆ ಭಾವನೆಗಳನ್ನು ಹಂಚಿಕೊಳ್ಳಲು ನಾವು ಅನುಸರಿಸುವ ಭಾಷೆ ಎಂದರೆ ಅದೇ ನಮ್ಮ ಕನ್ನಡ ಭಾಷೆ ಎಂದರು. ನಮ್ಮ ಶಾಲೆಯ ವಿಧ್ಯಾರ್ಥಿಗಳು ರಾಜ್ಯ ಮಟ್ಟ, ಜಿಲ್ಲಾ ಮಟ್ಟ, ತಾಲೂಕ ಮಟ್ಟಕ್ಕೆ ಆಯ್ಕೆಯಾಗಿ ಪ್ರಶಸ್ತಿ ಪಡೆದಿರುವುದು ಸಂತಸ ತಂದಿದೆ ಎಂದರು.
ಕನ್ನಡ ಶಿಕ್ಷಕಿ ಮಂಜುಳಾ ಪಾಟೀಲ ಮಾತನಾಡಿ ಕನ್ನಡ ಭಾಷೆಯು ಶಾಸ್ತ್ರೀಯ ಸ್ಥಾನಮಾನ ಪಡೆದುಕೊಂಡಿರುವ ಭಾಷೆಯಾಗಿದೆ ಹಾಗೂ ಕನ್ನಡ ಭಾಷೆಗೆ ಸಹಸ್ರಾರು ವರ್ಷಗಳ ಇತಿಹಾಸವಿದೆ ಎಂದರು.
ಶಿಕ್ಷಕಿ ಗಾಯತ್ರಿ ದೈವಜ್ಞ ಪ್ರಾಸ್ತಾವಿಕವಾಗಿ ಮಾತನಾಡಿ ವಿವಿಧತೆಯಲ್ಲಿ ಏಕತೆಯನ್ನು ಸಾರುವ ಭಾಷೆ ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ವಚನ ಸಾಹಿತ್ಯ, ದಾಸ ಸಾಹಿತ್ಯ, ದಲಿತ ಸಾಹಿತ್ಯ, ಬಂಡಾಯ ಸಾಹಿತ್ಯ, ನವೋದಯ ಸಾಹಿತ್ಯ ಮುಂತಾದವುಗಳನ್ನು ಕನ್ನಡ ಭಾಷೆಯಲ್ಲಿ ಕಾಣಬಹುದಾಗಿದೆ ಎಂದರು.
ರಾಜ್ಯ ಮಟ್ಟಕ್ಕೆ ಸುಪ್ರೀತ ಅಂಗಡಿ, ತ್ರಿವೇಣಿ ಪಾಟೀಲ, ವೈಷ್ಣವಿ ಮಲ್ಲೂರ, ಜಿಲ್ಲಾ ಮಟ್ಟಕ್ಕೆ ಅಭಿಜ್ಞಾ ದೈವಜ್ಞ, ಹರ್ಷಿತಾ ತರಗನಹಳ್ಳಿ, ಧನುಶ್ರೀ ಬೇವಿನಮರದ, ಶ್ರೀಲಕ್ಷ್ಮೀ ಹುಲ್ಮನಿ, ತಾಲೂಕ ಮಟ್ಟಕ್ಕೆ ತೇಜಸ ಹೊನ್ನಣ್ಣನವರ, ಸಂಜನಾ ಬಿಕ್ಷಾವರ್ತಿಮಠ, ಕೃತಿಕಾ ಪಾಟೀಲ ಆಯ್ಕೆಯಾಗಿ ಪ್ರಶಸ್ತಿ ಪಡೆದ ಎಲ್ಲ ಮಕ್ಕಳಿಗೆ ಶಾಲೆಯ ಆಡಳಿತ ಮಂಡಳಿ ಸದಸ್ಯರು, ಮುಖ್ಯೋಪಾದ್ಯಾಯರು, ಶಿಕ್ಷಕರು, ಸಿಬ್ಬಂದಿ ವರ್ಗದವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಶೇಖರ ಪರಸಾಪೂರ, ಮಾರುತಿ ಲಮಾಣಿ, ರೇಣುಕಾ ಅಂಗಡಿ, ಮಂಜುಳಾ ಪಿ.ಬಿ, ಶೃತಿ ನವರತ್ನ, ಗೀತಾ ಪಟ್ಟಣಶೆಟ್ಟಿ, ಭಾರತೀ ಶಿವಲೋಚನಮಠ, ಕೆ.ಎಸ್.ಅಶ್ವಿನಿ, ಸುನೀಲ ಮ್ಯಾಗೇರಿ, ಸರೋಜಾ ಮಡ್ಲಿ ಸ್ವಾಗತಿಸಿ ವಂದಿಸಿದರು.