ಸಿರಿಧಾನ್ಯಗಳು, ಸಾವಯವ ಗೊಬ್ಬರ, ಕೈತೋಟ ಬೀಜ ವಿತರಿಸುವ ಕಾರ್ಯಕ್ರಮ
ರಾಣೇಬೆನ್ನೂರು: ರೈತ ಉತ್ಪಾದಕರ ಸಂಘದ ಪರಿಕಲ್ಪನೆ ತುಂಬಾ ದೊಡ್ಡದಾಗಿರಬೇಕು, ಇವುಗಳು ದೊಡ್ಡ ಸಂಸ್ಥೆಗಳಾಗಿ ಪರಿವರ್ತನೆಗೊಳ್ಳಬೇಕು ಮತ್ತು ರೈತರ ವೇದಿಕೆಗಳಾಗಿ ಬದಲಾಗಬೇಕು. ಸಂಸ್ಥೆಯಲ್ಲಿ ಸಮಾನ ರೈತರು, ಸಮಾನ ಬೆಳೆ, ಸಾಮೂಹಿಕ ಸಂಗ್ರಹಣೆ, ವ್ಯಾಪಾರ ವಹಿವಾಟು ಹಾಗೂ ಗುಣಮಟ್ಟದ ಕೃಷಿ ಪರಿಕರನ್ನು ದೊಡ್ಡ ಮಟ್ಟದಲ್ಲಿ ಸಂಸ್ಥೆಯ ಮೂಲಕ ನಡೆದಾಗ ಮಾತ್ರ ಸಮಾಜದಲ್ಲಿ ಮತ್ತು ರೃತ ಸಮುದಾಯದಲ್ಲಿ ಗುರುತಿಸಿ ಕೂಂಡು ಮತ್ತಷ್ಟು ಅಭಿವೃದ್ದಿ ಸಾಧಿಸಲು ಸಾಧ್ಯವಾಗುವುದು ಎಂದು ಕೃಷಿ ಇಲಾಖೆ ಉಪನಿರ್ದೆಶಕಿ ಸ್ಪೋರ್ತಿ ಹೇಳಿದರು
ಅವರು ಮಂಗಳವಾರ ಇಲ್ಲಿನ ಗೌರಿಶಂಕರ ನಗರದ ನಿವೃತ್ತ ನೌಕರರ ಭವನದಲ್ಲಿ ವನಸಿರಿ ಗ್ರಾಮೀಣ ಅಭಿವೃದ್ದಿ ಸಂಸ್ಥೆ ಬೆಂಗಳೂರು ಸೇಲ್ಕೋ ಫೌಂಡೇಶನ್ ನಬಾರ್ಡ್, ಭೂಮಿಕಾ ರೃತ ಉತ್ಪಾದಕರ ಸಂಘವು ಆಯೋಜಿಸಿದ್ದ ಸಿರಿ ಧಾನ್ಯಗಳು, ಸಾವಯವ ಗೂಬ್ಬರ ಹಾಗೂ ಕೃತೋಟ ಬೀಜಗಳ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಪಾಲ್ಗೂಂಡು ಮಾತನಾಡಿದರು ಈ ದೇಶದ ಇತಿಹಾಸದಲ್ಲಿ ಮಹಿಳೆಯರೇ ಕೃಷಿಕರಾಗಿ ಅತ್ಯಂತ ಸುಸಜ್ಜಿತವಾಗಿ ಕೈಷಿ ಕಾಯಕ ಮಾಡಿದ ಪರಂಪರೆ ಭಾರತೀಯ ಮಹಿಳೆಯರಿದೆ ಸಲ್ಲುತ್ತದೆ ಎಂದು ಕೈಷಿ ಕಾಯಕ ಕುರಿತು ಇತಿಹಾಸವನ್ನು ಸ್ಮರಿಸಿ ಮಾತನಾಡಿದ ಸ್ಪೋರ್ತಿ ಅವರು ಭೂಮಿಯನ್ನು ನಂಬಿದವರಿಗೆ ಭೂ ತಾಯಿ ಎಂದಿಗೂ ಯಾರಿಗೂ ಕೈಬಿಟ್ಟಿಲ್ಲಾ ರಿಯಾಯಿತಿ ಮೂಲಕ ಕೈಷಿ ಕಾಯಕ ಮಾಡಿ ಅಭಿವೃದ್ದಿ ಹೂಂದಲು ಎಲ್ಲರೂ ಮುಂದಾಗಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ವನಸರಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಡಿ.ಬಳಿಗಾರ ಅವರು ಭೂಮಿಕಾ ರೈತ ಉತ್ಪಾದಕರ ಸಂಘದ ಜೋತೆ ಈಗಾಗಲೇ ಸೇಲ್ಕೋ ಫೌಂಡೇಶನ್ ಬೆಂಗಳೂರು ಕೈಜೋಡಿಸಿ ಭೂಮಿಕಾ ಸಿರಿಧಾನ್ಯ ಸಂಸ್ಕರಣಾ ಘಟಕಕ್ಕೆ ಸೋಲಾರ್ ವಿದ್ಯುತ್ ಅಳವಿಡಿಸುವ ಮೂಲಕ ನಿರಂತರವಾಗಿ ನಡೆಯಲು ಸಹಕರಿಸಿದ್ದಾರೆ. ಅವರು ಸೋಲಾರ್ ಮೂಲಕ ಪರ್ಯಾಯ ವಿದ್ಯುತ್ ಅಳವಿಡಿಸುವಲ್ಲಿ ಕ್ರಾಂತಿಕಾರಿ ಬದಲಾವಣೆ ಮಾಡಿದ್ದಾರೆ. ಈಗ ಭೂಮಿಕಾ ರೈತ ಉತ್ಪಾದಕರ ಸಂಘದ ಸದಸ್ಯರೂ ಸಾವಯವ ಕೃಷಿ ಮಾಡಲು ಹಾಗೂ ತೃಣ ಧಾನ್ಯಗಳನ್ನು ಬೆಳೆಯಲು ಅಯ್ದ 200 ರೈತರಿಗೆ 4 ಕೆ.ಜಿ. ತೃಣ ಧಾನ್ಯಗಳ ಬೀಜ ಮತ್ತು ಒಂದು ಕ್ವಿಂಟಾಲ್ ಸಾವಯವ ಗೊಬ್ಬರವನ್ನು ಉಚಿತವಾಗಿ ನೀಡಿ ಪ್ರೋತ್ಸಾಹಿಸುತ್ತಿದ್ದಾರೆ. 300 ರೈತ ಮಹಿಳೆಯರಿಗೆ ಕೈತೋಟ ಮಾಡಲು 13 ತರಹನಾದ ತರಕಾರಿ ಬೀಜಗಳನ್ನು ನೀಡಿ ಕುಟುಂಬದ ಆರೋಗ್ಯವನ್ನು ವೃದ್ಧಿಸಿಕೊಳ್ಳಲು ನೆರವನ್ನು ನೀಡಿದ್ದಾರೆ. ತಾವುಗಳೆಲ್ಲರೂ ಸರಿಯಾದ ರೀತಿಯಲ್ಲಿ ಇದರ ಸದುಪಯೋಗ ಪಡಿಸಿಕೂಳ್ಳಲು ಮುಂದಾಗಬೇಕು ಎಂದರೆ ಭೂಮಿಕಾ ರೈತ ಉತ್ಪಾದಕರ ಸಂಘದ ನಿರ್ಧೇಶಕ ಚಂದ್ರ್ಪ ಐರಣಿ ಅವರು ಸಂಘದ ಪ್ರಗತಿ ಕುರಿತು ಮಾತನಾಡಿದರು.
ನಬಾರ್ಡ ಜಿಲ್ಲಾ ಪ್ರಬಂಧಕ ಮಹಾದೇವ ಕೀರ್ತಿ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಸಾವಯುವ ಕೃಷಿಕ ಚನ್ನಬಸಪ್ಪ ಕೊಂಬಳಿ, ಸೇಲ್ಕೋ ಫೌಂಡೇಶನ್ನ ವಿರೇಶ, ಹಿರಿಯ ತೋಟಗಾರಿಕಾ ನೀರ್ದೆಶಕಿ ಶ್ರೀಮತಿ ವಿಜಯಲಕ್ಮೀ ಸೇರಿದಂತೆ ಮೂದಲಾದವರು ಮಾರನಾಡಿದರು, ಅಧ್ಯಕ್ಷತೆಯನ್ನು ಶಿವಪ್ಪ ನೀ, ಮುದೇನೂರ ಅವರು ವಹಿಸಿದ್ದರು.ವೇದಿಕೆಯಲ್ಲಿ ಸಿ.ಇ.ಒ ಜಿ.ಪಿ ನದಾಫ್ ವಿವಿಧ ಸಂಘಟನೆಗಳ ಮುಖಂಡರು, ರೈತರು,ರೈತ ಮಹಿಳೆಯರು ಪಾಲ್ಗೂಂಡಿದರು.