ನೌಕರರ ಶ್ರಯೋಭಿವೃದ್ಧಿಗೆ ಸಂಘದಿಂದ ಪ್ರಾಮಾಣಿಕ ಪ್ರಯತ್ನ: ಅಧ್ಯಕ್ಷ ಎಸ್.ಎಸ್. ಭಾವಿ
ರಾಜ್ಯ ಸರ್ಕಾರಿ ನೌಕರರ ಸಂಘದ ಸಭೆ;
ಕಾಗವಾಡ: ಸಂಘದಿಂದ ತಾಲೂಕಿನ ಎಲ್ಲ ನೌಕರರ ಸಮಸ್ಯೆಗಳಿಗೆ ಸ್ಪಂದಿಸುತ್ತ, ಅವರ ಶ್ರಯೋಭಿವೃದ್ಧಿಗೆ ಪ್ರಾಮಾಣಿಕವಾಗಿ ಪ್ರಯತ್ನ ಮಾಡಲಿದ್ದೇವೆ. ಸಂಘದ ತಾಲೂಕಾ ಘಟಕ ಪ್ರಾರಂಭಗೊಂಡ ನಂತರ ಮೊದಲ ಸಭೆ ಇದಾಗಿದ್ದು, ಮುಂದಿನ ದಿನಗಳಲ್ಲಿ ಸಂಘವನ್ನು ಇನಷ್ಟು ಬಲಪಡಿಸಲಾಗುವುದು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಎಸ್.ಎಸ್. ಭಾವಿ ತಿಳಿಸಿದ್ದಾರೆ.
ಅವರು, ಬುಧವಾರ ದಿ. 24 ರಂದು ಪಟ್ಟಣದ ಶಾಂತಿಸಾಗರ ಶಾಲೆಯ ಸಭಾಭವನದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕಾಗವಾಡ ತಾಲೂಕಾ ಘಟಕದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ, ಸಂಘದ ಅಂದಾಜು ಆಯವ್ಯಯಗಳ ಅನುಮೋದನೆಗೆ ಪ್ರಸ್ತುಪ ಪಡಿಸಿ, ಲೆಕ್ಕಪತ್ರಗಳನ್ನು ಮಂಡಿಸಿ, ಅಡಿಟ್ ವರದಿ ಓದಿತ್ತಾ ಮಾತನಾಡುತ್ತಿದ್ದರು.
ಕಾರ್ಯಕ್ರಮವನ್ನು ಸಸಿಗೆ ನೀರೆರೆದು ಚಾಲನೆ ನೀಡಲಾಯಿತು. ನೂತನವಾಗಿ ರಾಜ್ಯ ಪರಿಷತ್ ಸದಸ್ಯರಾಗಿ ಮೋಹನ ಶಿರಗಾಂವೆ, ಹಿರಿಯ ಉಪಾಧ್ಯಕ್ಷರಾಗಿ ರವೀಂದ್ರ ನಾಂದಣಿ, ಸಂಘಟನಾ ಕಾರ್ಯದರ್ಶಿಯಾಗಿ ಕೆ.ಡಿ. ಬಿರಾದರ ಇವರಿಗೆ ಪ್ರಮಾಣ ಪತ್ರ ನೀಡಿ, ಗೌರವಿಸಲಾಯಿತು.
ಈ ವೇಳೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಎಂ.ಜಿ. ಸಂಕಪಾಳ, ಪಶುವೈದ್ಯಾಧಿಕಾರಿ ಡಾ. ಅಭಿನಂದ ಪಾಟೀಲ, ಬಿಆರ್‌ಪಿ ರವೀಂದ್ರ ನಾಂದಣಿ, ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ಡಾ. ಪುಷ್ಪಲತಾ ಸುನ್ನದಕಲ್ಲ, ಸಂಘದ ಉಪಾಧ್ಯಕ್ಷೆ ಆಕಾಶಿ ಲಾಟವಡೆ, ಸಾಂಸ್ಕೃತಿಕ ಕಾರ್ಯದರ್ಶಿ ಸುಜಾತಾ ಪಾಟೀಲ, ಪದಾಧಿಕಾರಿಗಳಾದ ಗುಲಾಬ ಮಾಂಜರೆ, ಆನಂದ ಮೇತ್ರಿ, ಅಪ್ಪು ಕೋಳಿ, ಆನಂದ ಕಂಬಾರ, ಅಮಸಿದ್ಧ ಖೋತ ಅಶೋಕ ಮಗದುಮ್ಮ, ಎಸ್.ಟಿ. ನಾಂದ್ರೆ, ಡಿ.ಕೆ. ಹಿರೇಮಠ ಸೇರಿದಂತೆ ರಾಜ್ಯ ನೌಕರರ ಸಂಘದ ಸದಸ್ಯರು ಉಪಸ್ಥಿತರಿದ್ದರು. ಎ.ಎಂ. ಮಗದುಮ್ಮ ಸ್ವಾಗತಿಸಿದರು. ಎಂ.ಎಲ್. ಹೂಲ್ಲೋಳ್ಳಿ ನಿರೂಪಿಸಿದರು. ಎಸ್.ಟಿ. ನಾಂದ್ರೆ ವಂದಿಸಿದರು.