ಸೌಂದತ್ತಿ

ಎಪಿಎಮ್‌ಸಿಯಲ್ಲಿನ ಸಮಸ್ಯೆಗಳನ್ನು ನಿವಾರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ: ಶಾಸಕ ವೈದ್ಯ

ಎಪಿಎಮ್‌ಸಿಯಲ್ಲಿನ ಸಮಸ್ಯೆಗಳನ್ನು ನಿವಾರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ: ಶಾಸಕ ವೈದ್ಯ

ಸವದತ್ತಿ 19: ಎಪಿಎಮ್‌ಸಿಯಲ್ಲಿ ನಾನು ಒಬ್ಬ ವರ್ತಕನಾಗಿ ಇಲ್ಲಿನ ಅನ್ನದ ಋಣವನ್ನು ನಾನು ಎಂದು ಮರೆಯಲು ಸಾಧ್ಯವಿಲ್ಲದಾಗಿದ್ದು, ಇಲ್ಲಿನ ಸಮಸ್ಯೆಗಳನ್ನು ಕೂಡಲೆ ಗಮನಕ್ಕೆ ತೆಗೆದುಕೊಂಡು ಅವಶ್ಯಕವಾಗಿರುವ ಸೌಲಭ್ಯತೆಗಳನ್ನು ಕಲ್ಪಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವದಾಗಿ ಶಾಸಕ ವಿಶ್ವಾಸ ವೈದ್ಯ ಹೇಳಿದರು. 

ಪಟ್ಟಣದ ಎಪಿಎಮ್‌ಸಿಯಲ್ಲಿ ವರ್ತಕರ ಸಂಘದಿಂದ ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ವರ್ತಕರು, ಹಮಾಲರು, ಕಾರಕೂನರಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. 

ಎಪಿಎಮ್‌ಸಿಯಲ್ಲಿರುವ ಎಲ್ಲ ವರ್ತಕರು ಇಂದು ಉತ್ತಮ ಹಂತಕ್ಕೆ ಬಂದಿರುವುದು ಇಲ್ಲಿನ ಹಮಾಲರು ಮತ್ತು ಕಾರಕೂನರ ಶ್ರಮದಿಂದ ಎನ್ನುವದನ್ನು ಮರೆಯುವಂತಿಲ್ಲ ಎಂದರು. ಸವದತ್ತಿ ಮತ್ತು ಯರಗಟ್ಟಿ ಎಪಿಎಮ್‌ಸಿಗಳ ಅಭಿವೃದ್ಧಿಗೆ ತಲಾ ಹತ್ತು ಕೋಟಿ ರೂ.ಗಳ ಪ್ರಸ್ತಾವನೆಯನ್ನು ಸಲ್ಲಿಸಲಾಗಿದ್ದು, ಬರುವ ಅಧಿವೇಶನದಲ್ಲಿ ನಾವು ನೀರೀಕ್ಷಿತ ಅನುದಾನ ಅನುಮೋದನೆಗೊಳ್ಳಲಿದೆ ಎಂದರು. ಸವದತ್ತಿ ಎಪಿಎಮ್‌ಸಿ ಹಲವಾರು ವರ್ಷಗಳಿಂದ ಉತ್ತಮ ಇತಿಹಾಸವನ್ನು ಹೊಂದಿದ್ದು, ಅದರ ಸುರಕ್ಷತೆ ಮತ್ತು ಅಭಿವೃದ್ದಿಗೆ ಸಂಪೂರ್ಣ ಸಹಕಾರ ನೀಡುವದಾಗಿ ಹೇಳಿದರು. ಹಮಾಲರ ಸಂಘದವರು ಪ್ರತಿವರ್ಷ ಬಸವಜಯಂತಿಯಂದು ನಡೆಸಿಕೊಂಡು ಬಂದಿರುವ ಸಾಮೂಹಿಕ ವಿವಾಹ ಕಾರ್ಯವನ್ನು ಮತ್ತೆ ಮುಂದುವರೆಸಿಕೊಂಡು ಹೋಗಬೇಕಿದ್ದು, ಅದಕ್ಕೆ ನನ್ನ ಸಂಪೂರ್ಣ ಸಹಾಯ ಸಹಕಾರವಿದೆ ಎಂದರು. 

ಉಮೇಶ ಬಾಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಪಿಎಮ್‌ಸಿ ಕಾರ್ಯದರ್ಶಿ ಕೃಷ್ಣಕಾಂತ ನಾಯಕ ಮಾತನಾಡಿ, ಎಪಿಎಮ್‌ಸಿ ಅಭಿವೃದ್ಧಿಗೋಸ್ಕರ ಎಲ್ಲ ಸಾಧಕ ಬಾಧಕಗಳನ್ನು ಅವಲೋಕಿಸಿ ಸರಿಯಾದಂತ ಕಾಯ್ದೆ ಜಾರಿಯಾದಲ್ಲಿ ನಮಗೆ ಸೂಕ್ತ ಅನುಕೂಲತೆಯಾಗಲಿದೆ ಎಂದರು. 

ಎಪಿಎಮ್‌ಸಿಯಾರ್ಡನಲ್ಲಿ ಅವಶ್ಯಕ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವದರ ಜೊತೆಗೆ ಎಪಿಎಮ್‌ಸಿ ಸೌಂದರ್ಯಕರಣಕ್ಕೆ ಶಾಸಕರು ವಿಶೇಷ ಆಸಕ್ತಿ ತೋರಬೇಕೆಂದು ವರ್ತಕರ ಸಂಘದಿಂದ ಮನವಿ ಸಲ್ಲಿಸಲಾಯಿತು. 

ಮದನಲಾಲ್ ಚೋಪ್ರಾ, ಸಂಗಯ್ಯ ವಡಿಯರ, ಚಂದ್ರಣ್ಣ ಶಾಮರಾಯನವರ, ವೆಂಕಟೇಶ ವೈದ್ಯ, ಶಂಕರಯ್ಯ ಪಾಟೀಲ, ಚಂದ್ರಣ್ಣ ಸವಟಗಿ, ಅಶ್ವತ ವೈದ್ಯ, ಸುನೀಲ ಸುಳ್ಳದ, ಬಸವರಾಜ ಪುರದಗುಡಿ, ವಿಶ್ವನಾಥ ಬಾಳಿ, ಸಿದ್ದಪ್ಪ ನಡುವಿನಹಳ್ಳಿ, ಬಸವರಾಜ ಹೂಲಿಕಟ್ಟಿ, ಶಿವಾನಂದ ಜಕಾತಿ, ಈರ​‍್ಪ ಚಿಕ್ಕುಂಬಿ, ಚೈತ್ರೇಶ ದಾಸರ, ಪ್ರಶಾಂತ ಲಾಳಗೆ ಇತರರು ಉಪಸ್ಥಿತರಿದ್ದರು. 


ಸುದ್ದಿ ಓದಿ